ಬಾಳೆಲೆ, ಜು. ೧೦: ಕಾಡಾನೆ, ಹುಲಿ, ಚಿರತೆಯಂತಹ ವನ್ಯಪ್ರಾಣಿ ಗಳಿಂದ ಮನುಷ್ಯರ ಮೇಲೆ ಜಿಲ್ಲೆಯಲ್ಲಿ ಹಲವಾರು ದಾಳಿಗಳು ನಡೆದಿದ್ದು, ಇದೀಗ ಕರಡಿಯಿಂದಲೂ ಆತಂಕ ಸೃಷ್ಟಿಯಾಗಿದೆ.
ಬಾಳೆಲೆ- ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂದು ಹಾಡಹಗಲೇ ಮಹಿಳೆಯೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ್ದು, ಈ ವಿಭಾಗದಲ್ಲಿ ಜನರು ಆತಂಕಕ್ಕೆ ಒಳಗಾಗುವಂತಾಗಿದೆ.
ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡು ದಾಳಿಂಬೆ ಬಾಳೆಲೆ, ಜು. ೧೦: ಕಾಡಾನೆ, ಹುಲಿ, ಚಿರತೆಯಂತಹ ವನ್ಯಪ್ರಾಣಿ ಗಳಿಂದ ಮನುಷ್ಯರ ಮೇಲೆ ಜಿಲ್ಲೆಯಲ್ಲಿ ಹಲವಾರು ದಾಳಿಗಳು ನಡೆದಿದ್ದು, ಇದೀಗ ಕರಡಿಯಿಂದಲೂ ಆತಂಕ ಸೃಷ್ಟಿಯಾಗಿದೆ.
ಬಾಳೆಲೆ- ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂದು ಹಾಡಹಗಲೇ ಮಹಿಳೆಯೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ್ದು, ಈ ವಿಭಾಗದಲ್ಲಿ ಜನರು ಆತಂಕಕ್ಕೆ ಒಳಗಾಗುವಂತಾಗಿದೆ.
ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡು ದಾಳಿಂಬೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಮೂರ್ಕಲ್ ವಲಯದ ಸಿಬ್ಬಂದಿ ಯೋಗೇಶ್ ಸ್ಥಳ ಪರಿಶೀಲಿಸಿ ಕರಡಿಯನ್ನು ಅರಣ್ಯಕ್ಕೆ ಅಟ್ಟುವ ಭರವಸೆ ನೀಡಿ ಸೂಕ್ತ ಪರಿಹಾರ ನೀಡಲು ಶಿಫಾರಸು ಮಾಡುವುದಾಗಿ ತಿಳಿಸಿದರು.
ಕರಡಿಯು ಕಳೆದ ಹಲವು ದಿನಗಳಿಂದ ನಿಟ್ಟೂರು ದಾಳಿಂಬೆ ಹಾಡಿಯ ಸುತ್ತ ಮುತ್ತದ ತೋಟದಲ್ಲಿ ಕಾಣಿಸಿಕೊಳ್ಳುತಿದ್ದು, ಈ ಕರಡಿಯನ್ನು ಅರಣ್ಯ ಇಲಾಖೆ ಬೇರೆಗೆ ಸ್ಥಳಾಂತರಿಸುವAತೆ ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಡಿಞರಂಡ ಕವಿತಾ ಪ್ರಭು, ಸದಸ್ಯರಾದ ಅಮ್ಮುಣಿ, ಕಾಟಿಮಾಡ ಶರೀನ್ ಮುತ್ತಣ್ಣ ಆಗ್ರಹಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ನಾಗರಹೊಳೆ ವ್ಯಾಪ್ತಿಯ ನಾಲ್ಕೇರಿಯ ಮುಖ್ಯ ರಸ್ತೆಯಲ್ಲಿ ಕರಡಿಯೊಂದು ಪ್ರತ್ಯಕ್ಷಗೊಂಡ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.