ಮಡಿಕೇರಿ, ಜು. ೯: ಸತತ ಎರಡನೆಯ ವರ್ಷವೂ ಕೊರೊನಾ ಪರಿಸ್ಥಿತಿಯಿಂದಾಗಿ ನಲುಗುವಂತಾಗಿದ್ದ ಕೊಡಗು ಜಿಲ್ಲೆ ಇದೀಗ ಸುಮಾರು ೭೨ ದಿನಗಳ ನಿರ್ಬಂಧಗಳಿAದ ಪ್ರಥಮ ಬಾರಿಗೆ ಮುಕ್ತಗೊಳ್ಳುತ್ತಿದೆ. ಕೆಲದಿನಗಳ ಹಿಂದೆ ರಾಜ್ಯದ ಇತರ ಜಿಲ್ಲೆಗಳು ಲಾಕ್‌ಡೌನ್ ನಿರ್ಬಂಧದಿAದ ನಿರಾಳವಾಗಿದ್ದರೂ ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳವಾಗಿದ್ದ ಕಾರಣದಿಂದಾಗಿ ಸಂಪೂರ್ಣವಾಗಿ ಲಾಕ್‌ಡೌನ್ ನಿರ್ಬಂಧದಿAದ ಹೊರ ಬಂದಿರಲಿಲ್ಲ.

ಇದೀಗ ನಿನ್ನೆ ರಾಜ್ಯ ಸರಕಾರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವಿಟಿ ದರ ಇಳಿಮುಖವಾದ ವರದಿಯ ಹಿನ್ನೆಲೆಯಲ್ಲಿ ನಿರ್ಬಂಧ ಸಡಿಲಿಕೆಯನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿನ ಮಾದರಿಯಲ್ಲಿ ಸಡಿಲಿಸಿ ಆದೇಶ ಹೊರಡಿಸಿತ್ತು. ಇದರಂತೆ ಇದೀಗ ಜಿಲ್ಲಾಡಳಿತವೂ ಸರಕಾರದ ನಿರ್ದೇಶನದಂತೆ ತಾ. ೯ ರಂದು ಹೊಸ ಮಾರ್ಗಸೂಚಿಯ ಮೂಲಕ ಜಿಲ್ಲೆಯನ್ನು ನಿರ್ಬಂಧಗಳಿAದ ಮುಕ್ತಗೊಳಿಸುವ ಮೂಲಕ ಜನತೆ ಒಂದಷ್ಟು ನಿರಾಳತೆಯ ಭಾವನೆಗೆ ಬರುವಂತಾಗಿದೆ.

ರಾಜ್ಯ ಸರಕಾರ ನಿನ್ನೆ ಆದೇಶ ಹೊರಡಿಸಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಸ್ಪಷ್ಟತೆಯನ್ನು ನಿನ್ನೆಯೇ ತಿಳಿಸಿರದ ಹಿನ್ನೆಲೆಯಲ್ಲಿ ಆರಂಭದ ದಿನ ಜಿಲ್ಲೆಯಾದ್ಯಂತ ಒಂದಷ್ಟು ಗೊಂದಲ ಸನ್ನಿವೇಶ ಎದುರಾಗಿತ್ತು. ಶುಕ್ರವಾರದಂದು ಈ ಹಿಂದೆ ಘೋಷಿಸಲ್ಪಟ್ಟಿದ್ದ ನಿಯಮ ಪಾಲಿಸುವದೋ ಅಥವಾ ರಾಜ್ಯದ ಇತರೆಡೆಯ ನಿಯಮದಂತೆ ನಡೆದುಕೊಳ್ಳುವದೋ ಎಂಬ ಅಸ್ಪಷ್ಟತೆಯಿಂದ ವಾಣಿಜ್ಯ ಲಾಕ್‌ಡೌನ್ ನಿಯಮ ಸಡಿಲಿಕೆ - ಜಿಲ್ಲಾಧಿಕಾರಿ ಆದೇಶ

ರಾಜ್ಯದೆಲ್ಲೆಡೆ ಲಾಕ್‌ಡೌನ್ ನಿಯಮ ಸಡಿಲಿಸಿ ತಾ.೫ ರಿಂದ ತಾ.೧೯ ರವರೆಗೆ ಅನ್ವಯವಾಗುವಂತೆ ತಾ.೩ ರಂದು ರಾಜ್ಯ ಸರಕಾರ ಹೊರಡಿಸಿದ ಆದೇಶ ಕೊಡಗು ಜಿಲ್ಲೆಗೂ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಿದ್ದ ಕಾರಣ ರಾಜ್ಯ ಸರಕಾರದ ತಾ.೩ ರ ಆದೇಶ ಕೊಡಗು ಜಿಲ್ಲೆಗೆ ಈ ಹಿಂದೆ ಅನ್ವಯವಾಗಿರಲಿಲ್ಲ. ಆದರೆ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಬರುತ್ತಿರುವ ಕಾರಣ ರಾಜ್ಯ ಸರಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಕೊಡಗು ಜಿಲ್ಲೆಯಲ್ಲಿಯೂ ನಿಯಮ ಸಡಿಲಿಸುವಂತೆ ತಾ.೮ ರಂದು ಆದೇಶಿಸಿದ್ದರು. ತಾ.೯ ರ ಬೆಳಿಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ರಾಜ್ಯ ಸರಕಾರದ ಇದೇ ಆದೇಶವನ್ನು ಪಾಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದೇಶದಲ್ಲಿನ ನಿಯಮಗಳು ತಾ.೧೯ ರ ಬೆಳಿಗ್ಗೆ ೬ ಗಂಟೆಯವರೆಗೆ ಜಾರಿಯಲ್ಲಿರಲಿದೆ.

ಚಟುವಟಿಕೆಗಳಲ್ಲಿ ವಾಹನಗಳ ಓಡಾಟದಲ್ಲಿ ಗೊಂದಲವಿತ್ತು. ಕೆಲವಾರು ಅಂಗಡಿ - ಮುಂಗಟ್ಟುಗಳು ಸಂಜೆಯ ತನಕವೂ ತೆರೆಯಲ್ಪಟ್ಟಿದ್ದರೆ ಹಲವರು ಹಿಂದಿನAತೆ ಮುಚ್ಚಿದ್ದರು. ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರಗಳು ತೆರೆಯಲು ಅವಕಾಶವಿದ್ದರೂ ಬಹುತೇಕ ಮಂದಿರಗಳು ಮುಚ್ಚಿದ್ದವು.

(ಮೊದಲ ಪುಟದಿಂದ)

ಇದೀಗ ಮುಕ್ತತೆ

ಪ್ರಸ್ತುತ ಪರಿಸ್ಥಿತಿ ತಿಳಿಗೊಂಡAತಾಗಿದ್ದು, ಶನಿವಾರದಿಂದ (ಇಂದಿನಿAದ) ಜಿಲ್ಲೆಯಲ್ಲಿ ಸಹಜತೆಯ ಸನ್ನಿವೇಶ ಕಂಡುಬರುವದು ಖಚಿತವಾದಂತಾಗಿದೆ.

ಮಡಿಕೇರಿ - ಸಂಜೆವರೆಗೂ ತೆರೆದಿದ್ದ ಹಲವು ಅಂಗಡಿಗಳು

ಶನಿವಾರಸAತೆ: ಸರ್ಕಾರದಿಂದ ಲಾಕ್‌ಡೌನ್ ನಿರ್ಬಂಧ ಸಡಿಲಿಕೆ ಘೋಷಣೆಯಾಗಿದ್ದು, ಜಿಲ್ಲಾಡಳಿತದ ಪೂರಕ ಆದೇಶ ಮಧ್ಯಾಹ್ನದವರೆಗೂ ಬಾರದಿದ್ದು, ಶನಿವಾರಸಂತೆ ಪಟ್ಟಣದಲ್ಲಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮಧ್ಯಾಹ್ನ ೨ ಗಂಟೆಯ ನಂತರ ಅಂಗಡಿ - ಮುಂಗಟ್ಟುಗಳನ್ನು ತೆರೆಯುವುದೋ ಮುಚ್ಚುವುದೋ ಎಂಬ ಗೊಂದಲಕ್ಕೆ ಸಿಲುಕಿದ್ದರು.

ಪಟ್ಟಣ ಹಾಗೂ ಗುಡುಗಳಲೆಯಲ್ಲಿ ಬೆಳಿಗ್ಗೆ ೬ ಗಂಟೆಯಿAದಲೇ ತರಕಾರಿ, ಹೂ, ಹಣ್ಣುಹಂಪಲು ಇತ್ಯಾದಿ ಅಂಗಡಿಮುAಗಟ್ಟು, ಹೊಟೇಲ್‌ಗಳು, ಮದ್ಯದಂಗಡಿಗಳು ತೆರೆದಿದ್ದವು. ಬಿರುಸಿನ ವ್ಯಾಪಾರ ನಡೆದು, ಜನಜಂಗುಳಿ ಸಹಿತ ಖಾಸಗಿ ವಾಹನ ಸಂಚಾರ ಅಧಿಕವಾಗಿತ್ತು. ಸರ್ಕಾರಿ ಬಸ್‌ಗಳು ಸಂಚರಿಸಿದವು.

ಜಿಲ್ಲಾಧಿಕಾರಿಗಳ ಆದೇಶ ತಡವಾಗಿ ಬಂದ ಕಾರಣ ಮಧ್ಯಾಹ್ನ ೨ ಗಂಟೆ ನಂತರ ಅಂಗಡಿಮುAಗಟ್ಟುಗಳನ್ನು ಮುಚ್ಚುವಂತೆ ಹಾಗೂ ಸಾರ್ವಜನಿಕರು ಮನೆಗೆ ಮರಳುವಂತೆ ಧ್ವನಿವರ್ಧಕದ ಮೂಲಕ ಪೊಲೀಸರು ತಿಳಿಸಿದರು. ಕೆಲವು ವರ್ತಕರು, ಸಾರ್ವಜನಿಕರು ಆದೇಶ ಪಾಲಿಸಿದರು.

ಮಧ್ಯಾಹ್ನ ವಾಟ್ಸ್ಆ್ಯಪ್‌ನಲ್ಲಿ ಜಿಲ್ಲಾಡಳಿತದ ತಾ. ೧೯ ರವರೆಗೆ ಬೆಳಿಗ್ಗೆ ೬ ರಿಂದ ರಾತ್ರಿ ೯ ರವರೆಗೆ ಲಾಕ್‌ಡೌನ್ ನಿರ್ಬಂಧ ಸಡಿಲಿಕೆ ಘೋಷಣೆ ಹರಿದಾಡಿತು. ಕೆಲವು ವ್ಯಾಪಾರಿಗಳು ಮುಚ್ಚಿದ್ದ ಅಂಗಡಿಗಳನ್ನು ತೆರೆದು ಪುನಹ ವ್ಯಾಪಾರ ಆರಂಭಿಸಿದರು. ಆದರೆ, ಗ್ರಾಹಕರು, ಸಾರ್ವಜನಿಕರ ಸುಳಿವೇ ಇರಲಿಲ್ಲ. ವಾಹನಗಳ ಸಂಚಾರವೂ ಕಂಡುಬರಲಿಲ್ಲ, ಪಟ್ಟಣದಲ್ಲಿ ಲಾಕ್‌ಡೌನ್ ವಾತಾವರಣವೇ ಕಂಡುಬAದಿತು.ರಾಜ್ಯ ಸರಕಾರ ಕೊಡಗಿನಲ್ಲಿದ್ದ ಬಿಗಿ ನಿಯಮಗಳನ್ನು ಸಡಿಲಿಸಿ ಆದೇಶಿಸಿದ್ದರಿಂದ ಮಡಿಕೇರಿಯಲ್ಲಿ ಈ ಹಿಂದೆ ೨ ಗಂಟೆಯವರೆಗೆ ಮಾತ್ರ ತೆರೆದಿದ್ದ ಅಂಗಡಿಗಳು ಸಂಜೆಯವರೆಗೂ ತೆರೆದು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಇಂದು ಮಡಿಕೇರಿಯಲ್ಲಿ ಕಂಡು ಬಂತು. ನಗರದ ಬಸ್ ನಿಲ್ದಾಣದಲ್ಲಿನ ತರಕಾರಿ ವ್ಯಾಪಾರಸ್ಥರು ಕೂಡ ಸಂಜೆಯವರೆಗೆ ವ್ಯಾಪಾರ ಮಾಡಿದರು. ಸಂಬಾರ ಅಂಗಡಿಗಳು, ಬೇಕರಿಗಳು ಬೆಳಿಗ್ಗಿನಿಂದಲೇ ತೆರೆದಿತ್ತು. ನಗರಸಭೆ ಎದುರು ನಡೆಸುತ್ತಿರುವ ಕಣಿಲೆ ವ್ಯಾಪಾರವೂ ಸಂಜೆಯವರೆಗೂ ನಡೆಯಿತು.

ರಾಜ್ಯ ಸರಕಾರ ತಾ.೮ ರಂದೇ ನಿಯಮ ಸಡಿಲಿಸಿ ಆದೇಶ ಹೊರಡಿಸಿತ್ತಾದರೂ ಜಿಲ್ಲಾಡಳಿತ ತಾ.೯ ರಂದು ಬೆಳಿಗ್ಗೆ ನಿಯಮ ಸಡಿಲಿಕೆ ಸಂಬAಧ ರಾಜ್ಯ ಸರಕಾರದ್ದೇ ಆದೇಶ ಪಾಲಿಸಬೇಕೆಂಬುದಾಗಿ ಪ್ರಕಟಣೆ ನೀಡಿದ ಕಾರಣ ಕೆಲವೊಂದು ವರ್ತಕರಿಗೆ ಈ ಸಂಬAಧ ಅರಿವಿಲ್ಲದೆ ಮಧ್ಯಾಹ್ನದ ನಂತರ ಅಂಗಡಿಗಳನ್ನು ಮುಚ್ಚಿದರು. ನಗರದಲ್ಲಿನ ಎಲ್ಲಾ ಹೊಟೇಲ್‌ಗಳು ಕೂಡ ಯಥಾವತ್ತಾಗಿ ಕಾರ್ಯನಿರ್ವಹಿಸಲು ಅನುಮತಿ ದೊರೆತಿದ್ದರು ಕೆಲವೊಂದು ಹೊಟೇಲ್‌ಗಳು ಮುಚ್ಚಿದ್ದವು. ಇನ್ನು ಕೆಲವು ಹೊಟೇಲ್‌ಗಳು ಪಾರ್ಸಲ್ ರೂಪದಲ್ಲಿ ಹಾಗೂ ಹೊಟೇಲ್ ಹೊರಾವರಣದಲ್ಲಿ ಗ್ರಾಹಕರಿಗೆ ಆಹಾರ ವ್ಯವಸ್ಥೆ ಕಲ್ಲಿಸಿದ್ದವು. ನಗರದ ಪ್ರಮುಖ ಮಂದಿರಗಳು ತೆರೆಯದೆ ಇದ್ದ ದೃಶ್ಯ ಕಂಡುಬAತು. ನಿಯಮ ಸಡಿಲಿಕೆಯ ಕುರಿತು ಜಿಲ್ಲಾಧಿಕಾರಿ ೧೧:೨೦ ಕ್ಕೆ ಆದೇಶಿಸಿದ್ದ ಕಾರಣ ಅಷ್ಟರವರೆಗೆ ಸರಕಾರಿ ಬಸ್ ಸಂಚಾರ ಇನ್ನೂ ಪ್ರಾರಂಭವಾಗಿರಲಿಲ್ಲ. ಮಧ್ಯಾಹ್ನದ ನಂತರ ಪ್ರಸ್ತುತ ಜಿಲ್ಲೆಯೊಳಗೇ ಸಂಚರಿಸುತ್ತಿದ್ದ ೧೪ ಬಸ್‌ಗಳು ಹೊರತುಪಡಿಸಿ ಹೆಚ್ಚುವರಿ ೧೦ ಅಂತರಜಿಲ್ಲಾ ಬಸ್ ಸಂಚಾರವೂ ಪ್ರಾರಂಭಗೊAಡಿದ್ದು, ವಿರಳ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ಸೌಲಭ್ಯ ಸದುಪಯೋಗಪಡಿಸಿಕೊಂಡರು.

ಸಿದ್ದಾಪುರ: ಜಿಲ್ಲಾಧಿಕಾರಿಗಳ ಅನ್‌ಲಾಕ್ ಆದೇಶವು ತಡವಾಗಿ ಬಂದ ಹಿನ್ನೆಲೆಯಲ್ಲಿ ಸಿದ್ದಾಪುರದ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ಗೊಂದಲ ಏರ್ಪಟಿತ್ತು.

ಸಿದ್ದಾಪುರದ ಸುತ್ತಮುತ್ತಲಿನ ನಿವಾಸಿಗಳು ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಕಂಡು ಬಂದಿತ್ತು. ಸರ್ಕಾರವು ಅನ್‌ಲಾಕ್ ಘೋಷಣೆಯನ್ನು ಮಾಡಿದ್ದರೂ ಕೂಡ ಗ್ರಾಮೀಣ ಪ್ರದೇಶದ ಹಾಗೂ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ವಾಸವಿರುವ ಬಹುತೇಕ ಮಂದಿಗೆ ಅನ್‌ಲಾಕ್ ಆಗಿರುವ ವಿಚಾರ ತಿಳಿದು ಬರಲಿಲ್ಲ. ಈ ಮಂದಿ ಅಗತ್ಯ ವಸ್ತುಗಳು ಖರೀದಿಸಲು ಪಟ್ಟಣಕ್ಕೆ ಆಗಮಿಸಿದ್ದರು.

ಅಲ್ಲದೇ ಮಧ್ಯಾಹ್ನ ೨ ಗಂಟೆ ಸಮಯವನ್ನು ಪಾಲಿಸಲು ಸಾರ್ವಜನಿಕರು ತರಾತುರಿಯಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದರು. ಕಳೆದ ಮೂರು ದಿನಗಳಿಂದ ತರಕಾರಿ ವ್ಯಾಪಾರಿಗಳು ಬಸ್ ನಿಲ್ದಾಣಗಳಲ್ಲಿ ವ್ಯಾಪಾರವನ್ನು ಮಾಡಿರಲಿಲ್ಲ. ಆದರೆ ಶುಕ್ರವಾರದಂದು ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ತರಕಾರಿ ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದರು. ಅನ್‌ಲಾಕ್ ಆಗಿದ್ದರೂ ಕೂಡ ಮಧ್ಯಾಹ್ನದ ನಂತರ ಸಾರ್ವಜನಿಕರ ಓಡಾಟ ವಿರಳವಾಗಿತ್ತು. ಹೊಟೇಲ್‌ಗಳು ಬಹುತೇಕ ತೆರೆದಿದ್ದವು. ಆದರೆ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಯಾವುದೇ ದೇವಾಲಯಗಳು ತೆರೆಯಲಿಲ್ಲ; ಬಸ್ ಸಂಚಾರ ಇರಲಿಲ್ಲ. ಅನ್‌ಲಾಕ್ ಮಾಹಿತಿ ಇಲ್ಲದೇ ಕೆಲವರು ಗೊಂದಲಕ್ಕೆ ಸಿಲುಕಿದ್ದರು. ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶದ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿರುವುದು ಕಂಡು ಬಂದಿತು.

ಹೊರಡಿಸಿರುವ ನೂತನ ಮಾರ್ಗಸೂಚಿಯಂತೆ ರಾತ್ರಿ ೯ ಗಂಟೆಯವರೆಗೂ ಎಂದಿನAತೆ ಕಾರ್ಯಾಚರಿಸಬಹುದು ಎಂಬ ಮಾಹಿತಿ ಪಟ್ಟಣ ಪಂಚಾಯಿತಿ ಕಡೆಯಿಂದ ಬಂತು. ಅಷ್ಟರಲ್ಲಾಗಲೇ ಕೆಲವೊಂದು ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳಿದ್ದರು.

ಸರ್ಕಾರದ ನೂತನ ಮಾರ್ಗಸೂಚಿ ನಿನ್ನೆಯೇ ಬಿಡುಗಡೆಯಾಗಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ಆದೇಶ ಬಾರದ ಹಿನ್ನೆಲೆ ಸ್ಥಳಿಯಾಡಳಿತಗಳು ಹಿಂದಿನ ನಿಯಮಕ್ಕೆ ಅಂಟಿಕೊAಡಿದ್ದವು. ಇದರಿಂದಾಗಿ ಪಟ್ಟಣದಲ್ಲಿ ಸಹಜವಾಗಿ ಗೊಂದಲ ಏರ್ಪಟ್ಟಿತು. ಮಧ್ಯಾಹ್ನದ ನಂತರ ವಾಹನ-ಜನ ಸಂಚಾರವೂ ವಿರಳವಾಗಿತ್ತು.

ಬೆಳಗ್ಗಿನ ಉಪಹಾರಕ್ಕೆ ಮಾತ್ರ ವ್ಯವಸ್ಥೆ ಮಾಡಿಕೊಂಡಿದ್ದ ಪಟ್ಟಣದ ಹೊಟೇಲ್, ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿಲ್ಲ. ನಿನ್ನೆಯೇ ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಿದ್ದರೆ ನಾವುಗಳೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಇದೀಗ ಮಧ್ಯಾಹ್ನದ ಊಟ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಪಟ್ಟಣದ ಕ್ಯಾಂಟೀನ್ ಒಂದರ ಮಾಲೀಕ ರಾಜೀವ್ ಅಭಿಪ್ರಾಯಿಸಿದರು. ನೂತನ ಮಾರ್ಗಸೂಚಿಯಲ್ಲಿ ಸರ್ಕಾರ ಕೆಲವೊಂದಿಷ್ಟು ವಿನಾಯಿತಿಗಳನ್ನು ನೀಡಿದ್ದು, ನಿಯಮಾನುಸಾರ ಬಸ್ ಸಂಚಾರಕ್ಕೂ ಅವಕಾಶ ನೀಡಿದೆ. ಆದರೆ ಇಂದು ಯಾವ ಬಸ್, ಮ್ಯಾಕ್ಸಿಕ್ಯಾಬ್‌ಗಳೂ ಸಹ ರಸ್ತೆಗೆ ಇಳಿಯಲಿಲ್ಲ.

ಇನ್ನು ದೇವಾಲಯಗಳಲ್ಲಿ ಅರ್ಚಕರುಗಳು ಬೆಳಿಗ್ಗೆ ಎಂದಿನAತೆ ಪೂಜೆಗಳನ್ನು ನಡೆಸಿದರು. ಸಂಜೆಯ ವೇಳೆಯಲ್ಲೂ ದೇವಾಲಯಗಳೂ ತೆರೆದಿದ್ದರೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಬಾರ್ ಮತ್ತು ರೆಸ್ಟೋರೆಂಟ್‌ಗಳು ಮಧ್ಯಾಹ್ನದ ನಂತರವೂ ತೆರೆದಿದ್ದವು. ಕಳೆದ ೨ ತಿಂಗಳಿನಿAದ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದ ಬಾರ್‌ಗಳಲ್ಲಿ ಇಂದು ಸಂಜೆ ಬೆರಳೆಣಿಕೆಯ ಮದ್ಯಪ್ರಿಯರು ಮಾತ್ರ ಕಂಡುಬAದರು.ಹೊರಡಿಸಿರುವ ನೂತನ ಮಾರ್ಗಸೂಚಿಯಂತೆ ರಾತ್ರಿ ೯ ಗಂಟೆಯವರೆಗೂ ಎಂದಿನAತೆ ಕಾರ್ಯಾಚರಿಸಬಹುದು ಎಂಬ ಮಾಹಿತಿ ಪಟ್ಟಣ ಪಂಚಾಯಿತಿ ಕಡೆಯಿಂದ ಬಂತು. ಅಷ್ಟರಲ್ಲಾಗಲೇ ಕೆಲವೊಂದು ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳಿದ್ದರು.

ಸರ್ಕಾರದ ನೂತನ ಮಾರ್ಗಸೂಚಿ ನಿನ್ನೆಯೇ ಬಿಡುಗಡೆಯಾಗಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ಆದೇಶ ಬಾರದ ಹಿನ್ನೆಲೆ ಸ್ಥಳಿಯಾಡಳಿತಗಳು ಹಿಂದಿನ ನಿಯಮಕ್ಕೆ ಅಂಟಿಕೊAಡಿದ್ದವು. ಇದರಿಂದಾಗಿ ಪಟ್ಟಣದಲ್ಲಿ ಸಹಜವಾಗಿ ಗೊಂದಲ ಏರ್ಪಟ್ಟಿತು. ಮಧ್ಯಾಹ್ನದ ನಂತರ ವಾಹನ-ಜನ ಸಂಚಾರವೂ ವಿರಳವಾಗಿತ್ತು.

ಬೆಳಗ್ಗಿನ ಉಪಹಾರಕ್ಕೆ ಮಾತ್ರ ವ್ಯವಸ್ಥೆ ಮಾಡಿಕೊಂಡಿದ್ದ ಪಟ್ಟಣದ ಹೊಟೇಲ್, ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿಲ್ಲ. ನಿನ್ನೆಯೇ ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಿದ್ದರೆ ನಾವುಗಳೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಇದೀಗ ಮಧ್ಯಾಹ್ನದ ಊಟ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಪಟ್ಟಣದ ಕ್ಯಾಂಟೀನ್ ಒಂದರ ಮಾಲೀಕ ರಾಜೀವ್ ಅಭಿಪ್ರಾಯಿಸಿದರು. ನೂತನ ಮಾರ್ಗಸೂಚಿಯಲ್ಲಿ ಸರ್ಕಾರ ಕೆಲವೊಂದಿಷ್ಟು ವಿನಾಯಿತಿಗಳನ್ನು ನೀಡಿದ್ದು, ನಿಯಮಾನುಸಾರ ಬಸ್ ಸಂಚಾರಕ್ಕೂ ಅವಕಾಶ ನೀಡಿದೆ. ಆದರೆ ಇಂದು ಯಾವ ಬಸ್, ಮ್ಯಾಕ್ಸಿಕ್ಯಾಬ್‌ಗಳೂ ಸಹ ರಸ್ತೆಗೆ ಇಳಿಯಲಿಲ್ಲ.

ಇನ್ನು ದೇವಾಲಯಗಳಲ್ಲಿ ಅರ್ಚಕರುಗಳು ಬೆಳಿಗ್ಗೆ ಎಂದಿನAತೆ ಪೂಜೆಗಳನ್ನು ನಡೆಸಿದರು. ಸಂಜೆಯ ವೇಳೆಯಲ್ಲೂ ದೇವಾಲಯಗಳೂ ತೆರೆದಿದ್ದರೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಬಾರ್ ಮತ್ತು ರೆಸ್ಟೋರೆಂಟ್‌ಗಳು ಮಧ್ಯಾಹ್ನದ ನಂತರವೂ ತೆರೆದಿದ್ದವು. ಕಳೆದ ೨ ತಿಂಗಳಿನಿAದ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದ ಬಾರ್‌ಗಳಲ್ಲಿ ಇಂದು ಸಂಜೆ ಬೆರಳೆಣಿಕೆಯ ಮದ್ಯಪ್ರಿಯರು ಮಾತ್ರ ಕಂಡುಬAದರು.*ವೀರಾಜಪೇಟೆ: ವೀರಾಜಪೇಟೆ ನಗರದಲ್ಲಿ ಇಂದು ಅನ್ ಲಾಕ್ ಆದೇಶದ ಬಗ್ಗೆ ಗೊಂದಲ ಆಗಿ ಅಂಗಡಿ ಮುಗ್ಗಟ್ಟುಗಳು ಮಧ್ಯಾಹ್ನದ ನಂತರ ಅಂಗಡಿ ತೆರೆಯುವುದಾ ಅಥವಾ ಮುಚ್ಚುವುದ ಎಂಬುದು ತಿಳಿಯದೆ ಗೊಂದಲಕ್ಕೆ ಒಳಗಾಗಿದ್ದರು. ಅಧಿಕಾರಿಗಳನ್ನು ವಿಚಾರಿಸಿದರೆ ಅಧಿಕಾರಿಗಳು ಆದೇಶ ಬಂದಿಲ್ಲ ಎನ್ನುತ್ತಿದ್ದರು. ಕೊನೆಗೂ ಮಧ್ಯಾಹ್ನದ ನಂತರಅAಗಡಿ ತೆರೆದರೂ ಜನಸಂಚಾರ ಇರಲಿಲ್ಲ, ಅಂಗಡಿಗಳಿಗೆ ಗ್ರಾಹಕರೂ ಬರಲಿಲ್ಲ. ವೀರಾಜಪೇಟೆಯ ಮಸೀದಿಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶ ಬಂದ ನಂತರ ಪ್ರಾರ್ಥನೆಗೆ ಅವಕಾಶ ಕೊಡಲಾಯಿತು.

ವೀರಾಜಪೇಟೆ ಮಹಾ ಗಣಪತಿ ದೇವಾಲಯದಲ್ಲಿ ಎಂದಿನAತೆ ಬೆಳಗ್ಗಿನ ನಿತ್ಯಪೂಜೆ ಬಿಟ್ಟರೆ ಇಡೀ ದಿನ ದೇವಾಲಯ ತೆರೆಯಲಿಲ್ಲ. ಆದರೆ ತಾ. ೧೦ ರಂದು ಸಾರ್ವಜನಿಕರು ಪೂಜೆಗೆ ಆಗಮಿಸುವ ನಿರೀಕ್ಷೆಯಲ್ಲಿ ಪೂಜೆ ಸಾಮಾಗ್ರಿಗಳನ್ನು ದೇವಾಲಯಕ್ಕೆ ಇಡಲಾಗುತ್ತಿತ್ತು. ವೀರಾಜಪೇಟೆ ನಗರದÀ ಜನತೆಯ ಅರ್ಧ ದಿನ ಜಿಲ್ಲಾಧಿಕಾರಿ ಆದೇಶದ ನಿರೀಕ್ಷೆಯಲ್ಲಿ ಕಳೆಯಿತು.

ನಾಪೋಕ್ಲು: ಲಾಕ್‌ಡೌನ್‌ನಿಂದ ರೋಸಿ ಹೋಗಿದ್ದ ಜನ ಅನ್‌ಲಾಕ್ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ಸ್ವಚ್ಛಂದವಾಗಿ ಓಡಾಡುತ್ತಿರುವದು ಗೋಚರಿಸಿತು.

ಧಾರ್ಮಿಕ ಕೇಂದ್ರಗಳಿಗೆ ಭಕ್ತರು ತೆರಳಲು ಅವಕಾಶ ನೀಡಿದ ಹಿನ್ನಲೆಯಲ್ಲಿ ಕೊಡಗಿನ ಪ್ರಸಿದ್ಧ ಕ್ಷೇತ್ರವಾದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳವನ್ನು ಭಕ್ತರ ದರ್ಶನಕ್ಕೆ ತೆರೆಯಲಾಗಿದೆ. ಕೆಲವು ಸ್ಥಳೀಯ ಭಕ್ತರು ಮಾತ್ರ ದೇವರ ದರ್ಶನ ಪಡೆದರು. ಸರಕಾರ ದಿಢೀರನೆ ಮುಕ್ತ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಮಾಹಿತಿ ಕೊರತೆಯಿಂದಾಗಿ ದೇವಳಕ್ಕೆ ಯಾವದೇ ಪ್ರವಾಸಿಗರು ಹಾಗೂ ಹೆಚ್ಚಿನ ಭಕ್ತರು ಆಗಮಿಸಿಲ್ಲ ಎಂದು ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

ಮತ್ತೊಂದು ಪ್ರಸಿದ್ಧ ಕ್ಷೇತ್ರವಾದ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವಳಕ್ಕೆ ಹಲವು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ನಾಪೋಕ್ಲು ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ಆದರೆ, ವಾರದ ಎಲ್ಲಾ ದಿನಗಳು ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಜನರ ಓಡಾಟ ವಿರಳವಾಗಿತ್ತು.ಕುಶಾಲನಗರ: ಕಳೆದ ಮೂರು ತಿಂಗಳ ಅವಧಿಯಲ್ಲಿ ಬಿಕೋ ಎನ್ನುವಂತಹ ಸ್ಥಿತಿಯಲ್ಲಿದ್ದ ಕುಶಾಲನಗರ ಪಟ್ಟಣ ಅನ್ ಲಾಕ್ ಆದ ಬೆನ್ನಲ್ಲೇ ಅಲ್ಪಸ್ವಲ್ಪ ಸಹಜ ಸ್ಥಿತಿಗೆ ಮರಳಲು ಆರಂಭಿಸಿದೆ. ದಿನನಿತ್ಯ ಸೀಮಿತ ಅವಧಿಯಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ ೬ ಗಂಟೆಯಿAದ ರಾತ್ರಿ ೯ ರ ತನಕ ತೆರೆದಿದ್ದ ದೃಶ್ಯ ಕಂಡುಬAತು.

ಹಗಲು ವೇಳೆ ಜನರ ಓಡಾಟ ಕಂಡುಬAದರೂ ಸಂಜೆಯಾಗುತ್ತಲೇ ಸಂಖ್ಯೆ ಕ್ಷೀಣಗೊಂಡಿತ್ತು. ವ್ಯಾಪಾರ ವಹಿವಾಟು ಕೂಡ ಕಡಿಮೆ ಎನ್ನುವ ಪ್ರತಿಕ್ರಿಯೆ ಕೇಳಿಬಂದವು.

ಗಡಿಭಾಗದ ಕೊಪ್ಪ ತನಕ ಬರುತ್ತಿದ್ದ ಸಾರಿಗೆ ಬಸ್ಸುಗಳು ಸಂಜೆಯ ವೇಳೆಗೆ ಕುಶಾಲನಗರ ಬಸ್ ನಿಲ್ದಾಣಕ್ಕೆ ಬಂದು ಮಡಿಕೇರಿ, ಮೈಸೂರು ಕಡೆಗೆ ಸಂಚರಿಸಿದವು. ಮೈಸೂರು ಗಡಿಭಾಗದ ವಾಹನಗಳ ತಪಾಸಣಾ ಕೇಂದ್ರ ಕಳೆದ ಎರಡು ದಿನಗಳ ಹಿಂದೆ ತೆರವು ಗೊಂಡಿದ್ದು, ಕುಶಾಲನಗರ ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ಮಾತ್ರ ಪೊಲೀಸ್, ಮತ್ತಿತರ ಇಲಾಖೆಯ ಸಿಬ್ಬಂದಿಗಳು ತಪಾಸಣೆ ಮಾಡಿ ಜಿಲ್ಲೆಯ ಕಡೆಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯ ದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ಮಳೆ ಇದ್ದರೂ ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿ ಮೋಡ ಕವಿದÀ ವಾತಾವರಣ ಗೋಚರಿಸಿತು.

ಕುಶಾಲನಗರ: ಕಳೆದ ಮೂರು ತಿಂಗಳ ಅವಧಿಯಲ್ಲಿ ಬಿಕೋ ಎನ್ನುವಂತಹ ಸ್ಥಿತಿಯಲ್ಲಿದ್ದ ಕುಶಾಲನಗರ ಪಟ್ಟಣ ಅನ್ ಲಾಕ್ ಆದ ಬೆನ್ನಲ್ಲೇ ಅಲ್ಪಸ್ವಲ್ಪ ಸಹಜ ಸ್ಥಿತಿಗೆ ಮರಳಲು ಆರಂಭಿಸಿದೆ. ದಿನನಿತ್ಯ ಸೀಮಿತ ಅವಧಿಯಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ ೬ ಗಂಟೆಯಿAದ ರಾತ್ರಿ ೯ ರ ತನಕ ತೆರೆದಿದ್ದ ದೃಶ್ಯ ಕಂಡುಬAತು.

ಹಗಲು ವೇಳೆ ಜನರ ಓಡಾಟ ಕಂಡುಬAದರೂ ಸಂಜೆಯಾಗುತ್ತಲೇ ಸಂಖ್ಯೆ ಕ್ಷೀಣಗೊಂಡಿತ್ತು. ವ್ಯಾಪಾರ ವಹಿವಾಟು ಕೂಡ ಕಡಿಮೆ ಎನ್ನುವ ಪ್ರತಿಕ್ರಿಯೆ ಕೇಳಿಬಂದವು.

ಗಡಿಭಾಗದ ಕೊಪ್ಪ ತನಕ ಬರುತ್ತಿದ್ದ ಸಾರಿಗೆ ಬಸ್ಸುಗಳು ಸಂಜೆಯ ವೇಳೆಗೆ ಕುಶಾಲನಗರ ಬಸ್ ನಿಲ್ದಾಣಕ್ಕೆ ಬಂದು ಮಡಿಕೇರಿ, ಮೈಸೂರು ಕಡೆಗೆ ಸಂಚರಿಸಿದವು. ಮೈಸೂರು ಗಡಿಭಾಗದ ವಾಹನಗಳ ತಪಾಸಣಾ ಕೇಂದ್ರ ಕಳೆದ ಎರಡು ದಿನಗಳ ಹಿಂದೆ ತೆರವು ಗೊಂಡಿದ್ದು, ಕುಶಾಲನಗರ ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ಮಾತ್ರ ಪೊಲೀಸ್, ಮತ್ತಿತರ ಇಲಾಖೆಯ ಸಿಬ್ಬಂದಿಗಳು ತಪಾಸಣೆ ಮಾಡಿ ಜಿಲ್ಲೆಯ ಕಡೆಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯ ದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ಮಳೆ ಇದ್ದರೂ ಕುಶಾಲನಗರ ಪಟ್ಟಣದ ವ್ಯಾಪ್