ರಾಜ್ಯದೆಲ್ಲೆಡೆ ಲಾಕ್‌ಡೌನ್ ನಿಯಮ ಸಡಿಲಿಸಿ ತಾ.೫ ರಿಂದ ತಾ.೧೯ ರವರೆಗೆ ಅನ್ವಯವಾಗುವಂತೆ ತಾ.೩ ರಂದು ರಾಜ್ಯ ಸರಕಾರ ಹೊರಡಿಸಿದ ಆದೇಶ ಕೊಡಗು ಜಿಲ್ಲೆಗೂ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಿದ್ದ ಕಾರಣ ರಾಜ್ಯ ಸರಕಾರದ ತಾ.೩ ರ ಆದೇಶ ಕೊಡಗು ಜಿಲ್ಲೆಗೆ ಈ ಹಿಂದೆ ಅನ್ವಯವಾಗಿರಲಿಲ್ಲ. ಆದರೆ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಬರುತ್ತಿರುವ ಕಾರಣ ರಾಜ್ಯ ಸರಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಕೊಡಗು ಜಿಲ್ಲೆಯಲ್ಲಿಯೂ ನಿಯಮ ಸಡಿಲಿಸುವಂತೆ ತಾ.೮ ರಂದು ಆದೇಶಿಸಿದ್ದರು. ತಾ.೯ ರ ಬೆಳಿಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ರಾಜ್ಯ ಸರಕಾರದ ಇದೇ ಆದೇಶವನ್ನು ಪಾಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದೇಶದಲ್ಲಿನ ನಿಯಮಗಳು ತಾ.೧೯ ರ ಬೆಳಿಗ್ಗೆ ೬ ಗಂಟೆಯವರೆಗೆ ಜಾರಿಯಲ್ಲಿರಲಿದೆ.

ಲಾಕ್‌ಡೌನ್ ನಿಯಮ ಸಡಿಲಿಕೆ - ಜಿಲ್ಲಾಧಿಕಾರಿ ಆದೇಶ

(ಮೊದಲ ಪುಟದಿಂದ)

ಪ್ರವಾಸಿ ತಾಣಗಳಿಗೆ ಹಸಿರು ನಿಶಾನೆ

ರಾಜ್ಯ ಸರಕಾರದ ಆದೇಶದ ಪ್ರಕಾರ ಪ್ರವಾಸಿ ತಾಣಗಳು, ರೆಸಾರ್ಟ್, ಹೋಮ್‌ಸ್ಟೇ, ಲಾಡ್ಜ್ಗಳನ್ನು ತೆರೆಯಲು ಯಾವುದೇ ನಿರ್ಬಂಧಗಳಿಲ್ಲ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸ್ಪಷ್ಟಪಡಿಸಿದರು. ಜಿಲ್ಲಾ ಪಂಚಾಯಿತಿಯಲ್ಲಿ ಇಂದು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರವಾಸೋದ್ಯಮಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದರು. ಜಿಲ್ಲೆಯಾದ್ಯಂತ ತಾ.೧೦ ರಿಂದ ಎಲ್ಲಾ ಪ್ರವಾಸಿ ತಾಣಗಳು ತೆರೆಯಲ್ಪಡಲಿದ್ದು, ಮಡಿಕೇರಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಕೂರ್ಗ್ ವಿಲೇಜ್ ಮಳಿಗೆಗಳ ತಯಾರಿ ಬಳಿಕ ತೆರೆಯಲಾಗುತ್ತದೆ.

ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವವರ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಅಥವಾ ಲಸಿಕೆಯ ೨ ಡೋಸ್‌ಗಳು ಪಡೆದ ದೃಢೀಕರಣ ಪತ್ರ ಕಡ್ಡಾಯವಾಗಿರುವುದಾಗಿ ರಾಜ್ಯ ಸರಕಾರ ಈ ಹಿಂದೆಯೇ ಆದೇಶಿಸಿದ್ದು, ಜಿಲ್ಲೆಗೆ ಹೊಂದಿಕೊAಡಿರುವ ಕೇರಳ ಗಡಿಭಾಗಗಳ ಚೆಕ್‌ಪೋಸ್ಟ್ಗಳಲ್ಲಿ ತಪಾಸಣೆ ಮುಂದುವರೆಯುವುದಾಗಿ ತಿಳಿಸಿದರು.