ಮಡಿಕೇರಿ, ಜು. ೮: ಕರ್ನಾಟಕ ಸಂಗೀತಕ್ಕೆ ಕನ್ನಡ ಸಾಹಿತ್ಯ ಲೋಕಕ್ಕೆ ದಾಸರು ನೀಡಿದ ಕೊಡುಗೆ ಅಪಾರ. ದಾಸ ಸಾಹಿತ್ಯ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ದೊಡ್ಡ ಪರಂಪರೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಆಸ್ತಿ. ದಾಸ ಸಾಹಿತ್ಯದಲ್ಲಿ ಹಲವಾರು ದಾಸರು ನವವಿಧ ಭಕ್ತಿಯ ರೂಪದಲ್ಲಿ ಬೇರೆ ಬೇರೆ ಹಾಡುಗಳನ್ನು ಬರೆದಿದ್ದಾರೆ. ದಾಸ, ಸಖ್ಯ, ಶ್ರವಣ, ಕೀರ್ತನಾ, ಅರ್ಚನ ಹೀಗೆ ಹಲವು ರಸಗಳನ್ನು ದಾಸರ ಪದದಲ್ಲಿ ಅಳವಡಿಸಿದ್ದಾರೆ. ಸಖ್ಯದಲ್ಲಿ ನಿಂದಾಸ್ತುತಿಗಳನ್ನೂ ಮಾಡಿದ್ದಾರೆ. ಒಬ್ಬನನ್ನು ನಿಂದಿಸ ಬೇಕಾದರೆ ಆತ ಆತ್ಮೀಯನೇ ಆಗಿರಬೇಕು. ಅಂತಹ ಆತ್ಮೀಯತೆ ದೇವರೊಂದಿಗೆ ಇದ್ದ ಕಾರಣ ದಾಸರು ಇಂತಹ ಕೃತಿಗಳನ್ನು ರಚಿಸಿದ್ದಾರೆ ಎಂದು ದಾಸರ ಪದಗಳ ಮೇರು ಗಾಯಕ ಪುತ್ತೂರು ನರಸಿಂಹ ನಾಯಕ್ ನುಡಿದರು.

ಅವರು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಏರ್ಪಡಿಸಿದ್ದ ದಾಸರ ಪದ ಗೀತಗಾಯನ ಸಪ್ತಾಹ ಕೊನೆಯ ದಿನದ ಕಾರ್ಯಕ್ರಮವನ್ನು ಗೂಗಲ್ ಮೀಟ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.

‘ಹರಿ ನೀ ಪಿಡಿದ ಕಲ್ಲೆ ರತುನ’ ಎನ್ನುವ ದಾಸರ ಪದ ಹಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲೆಯ ೨೬ ಗಾಯಕರು ವಿವಿಧ ದಾಸರ ಪದಗಳನ್ನು ಹಾಡಿದರು.

ಸಮಾರೋಪ ಭಾಷಣ ಮಾಡಿದ ಬಳಗದ ಸ್ಥಾಪಕ ಅಧ್ಯಕ್ಷ ಬಿ.ಎ. ಷಂಶುದ್ದೀನ್ ನಾಲ್ಕು ದಶಕದ ಹಿಂದೆ ಪ್ರಾರಂಭಗೊAಡ ಬಳಗ ಅತ್ಯಂತ ಕ್ರಿಯಾಶೀಲವಾಗಿತ್ತು. ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿತ್ತು. ಕೆಲವು ಕಾರಣಗಳಿಂದ ನಿಷ್ಕಿçÃಯಗೊಂಡಿದ್ದ ಬಳಗ ಈಗ ಮೂರು ವರ್ಷಗಳಿಂದ ಪುನರ್ ಸಂಘಟಿತವಾಗಿ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ದಾಸರು ಕೇವಲ ದೇವರ ನಾಮ ಮಾತ್ರ ರಚಿಸಲಿಲ್ಲ.

ಪುರಂದರದಾಸ, ಕನಕದಾಸರು ಯಾವುದೇ ಮಠ ಮಾನ್ಯದ ಹಂಗಿಗೆ ಬೀಳದೆ ತಮ್ಮತನ ಉಳಿಸಿಕೊಂಡಿ ರುತ್ತಾರೆ ಎಂದರು.

ಬಳಗದ ಅಧ್ಯಕ್ಷ ಕೇಶವ ಕಾಮತ್ ಮಾತನಾಡುತ್ತಾ ದಾಸರ ಪದಗಳ ಕಾರ್ಯಕ್ರಮಕ್ಕೆ ಗಾಯಕರ ಅಭೂತಪೂರ್ವ ಬೆಂಬಲ ಬಂದಿದೆ. ದಾಸ ಸಾಹಿತ್ಯದ ಹರಿಕಾರ ಎಂದೇ ಪ್ರಸಿದ್ಧರಾದ ವಿದ್ಯಾ ಭೂಷಣರಿಂದ ಉದ್ಘಾಟನೆಗೊಂಡು ಏಳು ದಿನ ಪರ್ಯಂತ ನಡೆದು ಬಂದು ಇಂದು ಪುತ್ತೂರು ನರಸಿಂಹ ನಾಯಕ್ ಅವರ ಕೀರ್ತನೆಯೊಂದಿಗೆ ಸಮಾರೋಪ ಕಾರ್ಯಕ್ರಮ ಸಂಪನ್ನಗೊAಡಿದೆ ಎಂದು ನುಡಿದರು.

ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ, ಬಳಗದ ಸಲಹೆಗಾರ ಟಿ.ಪಿ. ರಮೇಶ್, ಉಪಾಧ್ಯಕ್ಷರಾದ ಎಂ.ಇ. ಮೊಹಿದ್ದೀನ್, ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ, ಕೆ.ಎಂ. ಶ್ವೇತ, ಬಿ.ಆರ್. ಜೋಯಪ್ಪ, ಡಾ. ದುರ್ಗಾಪ್ರಸಾದ್, ಮನೆ ಮನೆ ಕವಿಗೋಷ್ಠಿಯ ವೈಲೇಶ್, ಡಾ. ಕಾವೇರಿ ಪ್ರಕಾಶ್, ವಹಿದ್‌ಜಾನ್, ಉಪನ್ಯಾಸಕರಾದ ಪ್ರತಿಮಾ ರೈ, ಹಾತಿ ಜಯಪ್ರಕಾಶ್, ರಂಜಿತ್ ಕೆ.ಯು., ಸಂಗೀತ ಮತ್ತು ನೃತ್ಯ ಶಿಕ್ಷಕರುಗಳಾದ ವಿ.ಟಿ. ಶ್ರೀನಿವಾಸ್, ವತ್ಸಲಾ ನಾರಾಯಣ್, ಚಂದ್ರಕಲಾ ವಿಷ್ಣುಮೂರ್ತಿ, ರಾಜೇಶ್ ಆಚಾರ್ಯ ಇತರರು ಉಪಸ್ಥಿತರಿದ್ದರು.

ನೂರಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಿದ್ದು, ೩೦೦ಕ್ಕೂ ಹೆಚ್ಚು ಗಾನಪ್ರಿಯರು ವೀಕ್ಷಿಸಿದರು.

ಎಸ್.ಐ. ಮುನಿರ್ ಅಹ್ಮದ್, ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಅಂಬೆಕಲ್ ನವೀನ್ ಉದ್ಘಾಟಕರ ಪರಿಚಯ ಮಾಡಿದರು. ಬಳಗದ ನಿರ್ದೇಶಕಿ ಕೆ.ಕೆ. ಸುನಿತಾ ಸ್ವಾಗತಿಸಿದರು. ಬಳಗದ ನಿರ್ದೇಶಕ ಕೆ.ಟಿ. ಬೇಬಿ ಮ್ಯಾಥ್ಯೂ ವಂದಿಸಿದರು.