ಸುಂಟಿಕೊಪ್ಪ, ಜು. ೮: ರಾಷ್ಟಿçÃಯ ಬಾಲಸ್ವಾಸ್ಥö್ಯ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಲಾಯಿತು. ಕೋವಿಡ್-೧೯ರ ನಿಯಮದೊಂದಿಗೆ ಡಾ. ಮಲ್ಲಪ್ಪ ಅವರು ಸುಂಟಿಕೊಪ್ಪ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯವನ್ನು ಪರಿಶೀಲಿಸಿದರು.
ಸುಂಟಿಕೊಪ್ಪ ಮುತ್ತಪ್ಪ ಕಾಲೋನಿಯ ಅಂಬೇಡ್ಕರ್ ಭವನದಲ್ಲಿ ಸುಂಟಿಕೊಪ್ಪ ಪಟ್ಟಣದ ವಿವಿಧ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಆರೋಗ್ಯ ತಪಾಸಣೆಯನ್ನು ರಾಷ್ಟಿçÃಯ ಬಾಲ ಸ್ವಾಸ್ಥö್ಯ ಕಾರ್ಯಕ್ರಮದಡಿಯಲ್ಲಿ ನಡೆಸಲಾಯಿತು. ಅಪೌಷ್ಟಿಕತೆಯಲ್ಲಿರುವ ೩ ಮಕ್ಕಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಯಿತು.
ಕೋವಿಡ್-೧೯ ೩ನೇ ಅಲೆಯ ಬಗ್ಗೆ ಪೋಷಕರಿಗೆ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಶೀಲಾ ರೈ, ಆರೋಗ್ಯ ಕಿರಿಯ ಕಾರ್ಯಕರ್ತೆ ಪ್ರೇಮ, ಅಂಗನವಾಡಿ ಕಾರ್ಯಕರ್ತೆಂiÀiರಾದ ಜೆಸ್ಸಿ ಡಿಸೋಜ, ಸೇಲಿನಾ ಎಂ, ಸರಳಾ, ಶೋಭ ಹಾಗೂ ಸಹಾಯಕಿಯರು ಇದ್ದರು.