ಮಡಿಕೇರಿ, ಜು. ೯ : ಕೊಡಗು ಜಿಲ್ಲೆಯಲ್ಲಿ ತಾ.೯ ರಿಂದ ಅನ್ವಯವಾಗುವಂತೆ ಲಾಕ್‌ಡೌನ್‌ನಲ್ಲಿ ಸಡಿಲಿಕೆಯಾಗಿದ್ದು, ಕ.ರಾ.ರ.ಸಾ ನಿಗಮದ ಮಡಿಕೇರಿ ಘಟಕದಿಂದ ಈ ಹಿಂದೆ ಇದ್ದ ಮಾರ್ಗಗಳ ಮೂಲಕ ತಾ.೯ ರಿಂದಲೇ ಬಸ್‌ಗಳ ಸಂಚಾರ ಪ್ರಾರಂಭವಾಗುವುದಾಗಿ ಕ.ರಾ.ರ.ಸಾ.ನಿ ಸಂಸ್ಥೆಯ ಪುತ್ತೂರು ವಿಭಾಗದ ಮಡಿಕೇರಿ ಘಟಕ ಪ್ರಕಟಣೆ ತಿಳಿಸಿದೆ. ಅಂತರರಾಜ್ಯ ಹೊರತುಪಡಿಸಿ ಈ ಹಿಂದೆ ರಾಜ್ಯಾದ್ಯಂತ ಸಂಚರಿಸುತ್ತಿದ್ದ ಮಾರ್ಗಗಳಲ್ಲಿ ಬಸ್ ಸಂಚಾರ ಪ್ರಾರಂಭಗೊAಡಿದೆ. ಆದರೆ ಜಿಲ್ಲೆಯ ಖಾಸಗಿ ಬಸ್ ಸಂಚಾರದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.
ಈಗಾಗಲೇ ಜಿಲ್ಲೆಯಾದ್ಯಂತ ೧೪ ಬಸ್‌ಗಳು ಸಂಚರಿಸುತ್ತಿದ್ದವು. ಇದೀಗ ೧೦ ಹೆಚ್ಚುವರಿ ಬಸ್‌ಗಳ ಸಂಚಾರ ಪ್ರಾರಂಭಗೊAಡಿದ್ದು ಅಂತರಜಿಲ್ಲಾ ಪ್ರಯಾಣಕ್ಕೆ ಅನುಮತಿಸಲಾಗಿದೆ ಎಂದು ಕ.ರಾ.ರ.ಸಾ.ನಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ಮಾಹಿತಿ ನೀಡಿದ್ದಾರೆ. ಅನ್‌ಲಾಕ್ ಆದೇಶ ಇಂದು ೧೧:೨೦ ಕ್ಕೆ ಬಂದ ಕಾರಣ ಮಧ್ಯಾಹ್ನದ
(ಮೊದಲ ಪುಟದಿಂದ) ನಂತರ ಈ ೧೦ ಬಸ್‌ಗಳು ಸಂಚರಿಸಲಾರAಭಿಸಿವೆ. ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆಗಳಿಗೆ ಬಸ್ ಸಂಚಾರ ಆರಂಭಗೊAಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರ ಪ್ರಾರಂಭವಾಗುವುದಾಗಿ ತಿಳಿಸಿದರು.
ಲಾಕ್‌ಡೌನ್ ವೇಳೆ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ರಸ್ತೆ ತೆರಿಗೆ ತಪ್ಪಿಸುವ ನಿಟ್ಟಿನಲ್ಲಿ ಬಸ್‌ಗಳನ್ನು ಶರಣಾಗತಿ ಮಾಡಲಾಗಿದೆ. ಇದೀಗ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅನುಮತಿ ದೊರೆತಿದ್ದರೂ, ಕೋವಿಡ್ ಪ್ರಕರಣಗಳು ಹೆಚ್ಚಿದರೆ ಮತ್ತೆ ಲಾಕ್‌ಡೌನ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಪ್ರಮುಖ ಮಾರ್ಗಗಳ ಬಸ್ ಸಂಚಾರ ಮಾತ್ರ ಪ್ರಾರಂಭವಾಗಬಹುದು. ಆದರೂ ತಿಂಗಳಿಗೆ ರೂ.೧೭,೦೦೦ ದಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅವರು ಮಾಹಿತಿ ನೀಡಿದ್ದಾರೆ. ಮಳೆಗಾಲ ಪ್ರಾರಂಭವಾಗಿದ್ದು ಪ್ರಯಾಣಿಕರ ಸಂಖ್ಯೆ ಕೂಡ ಅತಿ ಕಡಿಮೆ ಇರುವುದು ಸಹಜ. ಸೆಪ್ಟೆಂಬರ್ ತಿಂಗಳನಲ್ಲಿಯೇ ಎಲ್ಲಾ ಬಸ್‌ಗಳು ರಸ್ತೆಗಿಳಿಯಲಿರುವುದಾಗಿ ಅವರು ತಿಳಿಸಿದ್ದಾರೆ.