ಗೋಣಿಕೊಪ್ಪಲು, ಜು.೮: ಗೋಣಿಕೊಪ್ಪಲುವಿನ ದಿ.ಮರ್ಚೆಂಟ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗೆ ೫೦ ಸಾವಿರ ಹಣವನ್ನು ನೀಡುವ ಮೂಲಕ ಸಹಾಯ ಹಸ್ತ ನೀಡಿದ್ದಾರೆ.

ಬ್ಯಾಂಕ್‌ನ ಅಧ್ಯಕ್ಷರಾದ ಕಿರಿಯಮಾಡ ಅರುಣ್ ಪೂಣಚ್ಚ ಹಾಗೂ ಪದಾಧಿಕಾರಿಗಳು ಈ ಬಾರಿ ಕೋವಿಡ್ ಸಂದರ್ಭ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೀನಬಂಧು ಚಾರಿಟೇಬಲ್ ಟ್ರಸ್ಟ್ ಮೂಲಕ ಗೋಣಿಕೊಪ್ಪ ಸಮೀಪದ ಲೋಪಮುದ್ರ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಊಟದ ವ್ಯವಸ್ಥೆಗಾಗಿ ಈ ಹಣವನ್ನು ನೀಡಿದ್ದಾರೆ.

ಅಲ್ಲದೆ ಗೋಣಿಕೊಪ್ಪ ನಗರದಲ್ಲಿ ವಾಸವಿರುವ ರೋಹಿಣಿ ಎಂಬ ವಿಶೇಷ ಚೇತನ ಮಹಿಳೆಗೆ ವೀಲ್‌ಚೇರ್ ಕೂಡ ವಿತರಿಸಿದರು.

ಈ ವೇಳೆ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಕಾರ್ಯ ನಿರ್ವಹಣಾಧಿಕಾರಿಗಳು ಹಾಜರಿದ್ದರು.