ವೀರಾಜಪೇಟೆ, ಜು. ೮: ಕುಶಾಲನಗರದಿಂದ ವೀರಾಜಪೇಟೆಗೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದಾಗಿದೆ. ದಿನನಿತ್ಯ ಈ ಮಾರ್ಗದ ಮೂಲಕ ಕುಶಾಲನಗರ, ಸಿದ್ದಾಪುರ, ಅಮ್ಮತ್ತಿ ಹಾಗೂ ವೀರಾಜಪೇಟೆಗೆ ಪ್ರಯಾಣಿಸುವ ಅನೇಕರಿದ್ದಾರೆ. ಅವರಿಗೆ ಸಂಚರಿಸಲು ಅನಾನುಕೂಲವಾಗಿದೆ ಎಂದು ಮೇರಿ ಡಿಸೋಜಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ವೀರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಮೇರಿ ಡಿಸೋಜಾ ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಜಿಲ್ಲೆಯಲ್ಲಿ ಲಾಕ್‌ಡೌನ್ ಆರಂಭವಾದಗಿನಿAದ ಕುಶಾಲನಗರ -ವೀರಾಜಪೇಟೆಯ ನಡುವೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ. ಇದರಿಂದ ಕರ್ತವ್ಯಕ್ಕೆ ತೆರಳುವುದು ದುಸ್ತರವಾಗಿದೆ. ಜನ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ವಿಶೇಷವಾಗಿ ಸಿಬ್ಬಂದಿಗಳು ತೊಂದರೆಗೆ ಸಿಲುಕಿಕೊಂಡಿರುತ್ತೇವೆ. ಮಹಿಳಾ ಸಿಬ್ಬಂದಿಗಳಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಕೆಲವು ಗುತ್ತಿಗೆ ಆಧಾರದಲ್ಲಿ ನೇಮಕವಾದ ನೌಕರರು ಸಮಯಕ್ಕೆ ಸರಿಯಾÁಗಿ ಕೆಲಸಕ್ಕೆ ತೆರಳಲು ಆಗುತ್ತಿಲ್ಲ. ಇದರಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮಳೆಗಾಲವಾದದ್ದರಿಂದ ಮತ್ತೂ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದೀಗ ಜಿಲ್ಲೆಯಲ್ಲಿ ೧೯ ರ ತನಕ ಲಾಕ್‌ಡೌನ್ ಇರುವುದರಿಂದ ಈ ಮಾರ್ಗಕ್ಕಾಗಿ ಕಳೆದ ವರ್ಷದಂತೆ ಬೆಳಿಗ್ಗೆ ೮.೩೦ಗೆ ಒಂದು ಹಾಗೂ ಮರಳಿ ಬರಲು ಸಂಜೆ ೪.೩೦ ಕ್ಕೆ ಒಂದು ಸರಕಾರಿ ಬಸ್ ಮಾರ್ಗ ಇದ್ದರೆ ನೌಕರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಬೆಳಿಗ್ಗೆ ಹಾಗೂ ಸಾಯಂಕಾಲ ಸೂಕ್ತ ಸಮಯಕ್ಕೆ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.