ಮುಖ್ಯಮಂತ್ರಿ ವಿರುದ್ಧದ ಖಾಸಗಿ ದೂರು ವಜಾ

ಬೆಂಗಳೂರು, ಜು. ೮: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್‌ಐರ್ ದಾಖಲಿಸುವಂತೆ ಸಲ್ಲಿಸಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದ್ದು, ಸಿಎಂ ಕೊಂಚ ನಿರಾಳರಾಗಿದ್ದಾರೆ. ಎಫ್‌ಐಆರ್ ದಾಖಲಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬAಧ ಟಿ.ಜೆ. ಅಬ್ರಹಾಂ ಪಿಸಿಆರ್ ಸಲ್ಲಿಸಿದ್ದರು. ಬಿ.ಎಸ್. ಯಡಿಯೂರಪ್ಪ ಸೇರಿ ೯ ಮಂದಿ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ನ್ಯಾಯಾಧೀಶ ಜಯಂತ್‌ಕುಮಾರ್ ಅವರ ನ್ಯಾಯಪೀಠ ವಜಾಗೊಳಿಸಿದೆ. ಈ ಮೊದಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದರು. ನಂತರ ಅಬ್ರಹಾಂ ನ್ಯಾಯಾಲಯದ ಮೊರೆ ಹೋಗಿದ್ದರು.

ತರಾತುರಿಯಲ್ಲಿ ಎನ್‌ಇಪಿ ಜಾರಿ ಬೇಡ-ಸಿದ್ದರಾಮಯ್ಯ

ಬೆಂಗಳೂರು, ಜು. ೮: ಕೊರೊನಾ ಸಾಂಕ್ರಾಮಿಕ ಕಾರಣಕ್ಕೆ ಶೈಕ್ಷಣಿಕ ಚಟುವಟಿಕೆಗಳು ಸೇರಿ ಆಡಳಿತ ವ್ಯವಸ್ಥೆಯೇ ಸ್ಥಗಿತಗೊಂಡಿರುವ ಹೊತ್ತಿನಲ್ಲಿ ಸರ್ಕಾರ ತರಾತುರಿಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦’ನ್ನು ಅನುಷ್ಠಾನಗೊಳಿಸಬಾರದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಪ್ರಜ್ಞಾವಂತರ, ಪೋಷಕರ, ಸಾರ್ವಜನಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಣ ತಜ್ಞರ, ವಿದ್ಯಾರ್ಥಿ ಸಂಘಟನೆಗಳ, ಬೋಧಕ ಮತ್ತು ಲೇಖಕ-ಬರಹಗಾರರ ವಲಯದಲ್ಲಿ ಚರ್ಚೆ ಆಗದ ಎನ್‌ಇಪಿ-೨೦೨೦ನ್ನು ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವುದೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ೧ ರಿಂದ ೮ ವಯಸ್ಸಿನ ಬುನಾದಿ ಹಂತದ ಶಿಕ್ಷಣಕ್ಕೆ ಕೇಂದ್ರೀಕೃತ ಎನ್.ಆರ್.ಟಿ. ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಈ ಕ್ರಮವು ಕನ್ನಡದಂತಹ ಸಂಸ್ಕೃತಿಗಳ ವಿರುದ್ಧವಾಗಿದೆ. ಈಗಾಗಲೇ ಬಹುತೇಕ ಚರಿತ್ರೆಯ ಪುಸ್ತಕಗಳಲ್ಲಿ ಕನ್ನಡದ, ಕರ್ನಾಟಕದ ಸಂಸ್ಕೃತಿ, ಆಡಳಿತ, ವಾಣಿಜ್ಯ, ಸಮಾಜಗಳ ಚಿಂತನೆಗಳೇ ಇಲ್ಲವಾಗಿದೆ. ಎನ್.ಸಿ.ಆರ್.ಟಿ. ಪಠ್ಯಕ್ರಮದ ಮೂಲಕ ಇನ್ನಷ್ಟು ಸಾಂಸ್ಕೃತಿಕ ದಮನ ಮಾಡಲು ಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಕನ್ನಡ, ತೆಲುಗು, ತಮಿಳು, ಮಲಯಾಳಂ, ಕೊಡವ, ಕೊಂಕಣಿ, ತುಳು, ಮರಾಠಿ, ಒರಿಯಾ, ಬಂಗಾಳಿ, ಗುಜರಾತಿ ಮುಂತಾದ ಸಂಸ್ಕೃತಿಗಳ ಮೂಲಕ ಕಲಿಯಬೇಕು ಮತ್ತು ಯೋಚಿಸಬೇಕು. ಅದಕ್ಕಾಗಿ ಆಯಾ ರಾಜ್ಯ ಪಠ್ಯಕ್ರಮವನ್ನು ಅಳವಡಿಸಿಕೊಂಡು ಈ ನೆಲದ, ಮಣ್ಣಿನ ಸಂಗತಿಗಳನ್ನು ಪಾಠಗಳಲ್ಲಿ ಮಕ್ಕಳು ಕಲಿಯುವಂತಿರಬೇಕು. ಇದಕ್ಕೆ ಅವಕಾಶ ಕಲ್ಪಿಸಿಲ್ಲ. ತ್ರ‍್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿರುವುದು ಅದರಲ್ಲಿ ಇಂಗ್ಲಿಷ್ ಮತ್ತು ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿರುವುದು ಭಾಷಾ ಹೇರಿಕೆ ಮಾತ್ರವಲ್ಲದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದಾಗಿದೆ ಎಂದಿದ್ದಾರೆ.

ವಿಶ್ವದ ಅತಿ ದೊಡ್ಡ ಬಂದರಿನಲ್ಲಿ ಭಾರೀ ಸ್ಫೋಟ

ದುಬೈ, ಜು. ೮: ಅರೇಬಿಯನ್ ಪೆನಿನ್ಸುಲಾದ ಪೂರ್ವ ಭಾಗದಲ್ಲಿ ಮಧ್ಯಪ್ರಾಚ್ಯದ ಅತ್ಯಂತ ಜನನಿಬಿಡವಾದ ನಿರ್ಣಾಯಕ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ದೈತ್ಯ ಬೆಂಕಿ ಜ್ವಾಲೆಗಳು ಕಾಣಿಸಿದೆ. ಹಡಗಿನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಪರಿಣಾಮ ಪಕ್ಕದ ಮೂರು ಮನೆಗಳ ಕಿಟಕಿ ಬಾಗಿಲು ಕಂಪಿಸಿವೆ ಎಂದು ವರದಿಯಾಗಿದೆ. ಉರಿಯುತ್ತಿರುವ ಬೆಂಕಿ ಚೆಂಡು ರಾತ್ರಿ ಆಕಾಶವನ್ನು ಬೆಳಗಿದಂತೆ ನಿವಾಸಿಗಳು ಭಯಭೀತರಾಗಿದ್ದಾರೆ. ಹಡಗಿನಲ್ಲಿ ಸ್ಫೋಟ ಸಂಭವಿಸಿದ ನಂತರ ಕಂಟೈನರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಿಯಂತ್ರಣಕ್ಕೆ ತರಲಾಗಿದೆ. ಸದ್ಯ ಯಾವುದೇ ಜೀವ ಹಾನಿಯಾಗಿಲ್ಲ ಎಂದು ವರದಿಯಾಗಿದೆ ಸ್ಫೋಟದ ಸುಮಾರು ಎರಡೂವರೆ ಗಂಟೆಗಳ ನಂತರ, ದುಬೈನ ನಾಗರಿಕ ರಕ್ಷಣಾ ತಂಡಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ ಮತ್ತು ಬೆಂಕಿ ನಂದಿಸುವ ಕಾರ್ಯ ಪ್ರಾರಂಭಿಸಿವೆ. ಬೆಂಕಿ ಅನಾಹುತದಿಂದ ಬಂದರು ಮತ್ತು ಸುತ್ತಮುತ್ತಲಿನ ಸರಕುಗಳಿಗೆ ಎಷ್ಟು ಹಾನಿಯಾಗಿದೆ ಎಂದು ತಕ್ಷಣ ಸ್ಪಷ್ಟವಾಗಿಲ್ಲ. ದುಬೈನ ಉತ್ತರ ತುದಿಯಲ್ಲಿರುವ ಜೆಬೆಲ್ ಅಲಿ ಬಂದರು ವಿಶ್ವದ ಅತಿ ದೊಡ್ಡ ಮಾನವ ನಿರ್ಮಿತ ಆಳ ನೀರಿನಲ್ಲಿನ ಬಂದರು. ಭಾರತೀಯ ಉಪಖಂಡ, ಆಫ್ರಿಕಾ ಮತ್ತು ಏಷ್ಯಾದಿಂದ ಸರಕುಗಳು ಇಲ್ಲಿಗೆ ಆಗಮಿಸುತ್ತದೆ. ಬಂದರು ನಿರ್ಣಾಯಕ ಜಾಗತಿಕ ಸರಕು ಕೇಂದ್ರವಲ್ಲ, ಆದರೆ ದುಬೈ ಮತ್ತು ಸುತ್ತಮುತ್ತಲಿನ ಎಮಿರೇಟ್‌ಗಳಿಗೆ ಜೀವಸೆಲೆಯಾಗಿದ್ದು, ಅಗತ್ಯ ಆಮದುಗಳಿಗೆ ಪ್ರವೇಶ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಕೋವಿಡ್ ಸಾವಿನ ಸಂಖ್ಯೆ ಕರ್ನಾಟಕದಲ್ಲಿ ಅತಿ ಹೆಚ್ಚು

ಬೆಂಗಳೂರು, ಜು. ೮: ತಾ. ೬ ರಂದು ಕರ್ನಾಟಕದಲ್ಲಿ ಕೋವಿಡ್-೧೯ ಸಾವಿನ ಸಂಖ್ಯೆ ೩೫,೪೩೪ಕ್ಕೆ ತಲುಪಿದ್ದು, ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದೆ. ಹಾಗೂ ಇಡೀ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ಮಹಾರಾಷ್ಟç ಮೊದಲ ಸ್ಥಾನದಲ್ಲಿದೆ. ಕೋವಿಡ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿAದ ೫೦-೮೦ ವರ್ಷ ವಯಸ್ಸಿನ ರೋಗಿಗಳು ರಾಜ್ಯದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯ ಅರ್ಧದಷ್ಟಿದೆ ಎಂದು ರಾಜ್ಯ ವಾರ್ ರೂಂ ಬಿಡುಗಡೆ ಮಾಡಿದ ಅಂಕಿ ಅಂಶಗಳು ತೋರಿಸುತ್ತವೆ. ಸೋಂಕಿತ ವ್ಯಕ್ತಿಗಳು ಆಸ್ಪತ್ರೆಗೆ ಭೇಟಿ ನೀಡಲು ಹಿಂಜರಿಯುವುದು, ತಡವಾದ ಪರೀಕ್ಷಾ ಫಲಿತಾಂಶಗಳಿAದಾಗಿ ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ, ಇದರ ಜೊತೆಗೆ ಮಧುಮೇಹ ಮತ್ತು ಹೃದಯ ಸಂಬAಧಿತ ಕಾಯಿಲೆಗಳಿಂದಲೂ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ಐಸಿಯುಗಳಿಗೆ ಬಂದ ಅನೇಕ ರೋಗಿಗಳು ರೋಗನಿರ್ಣಯ ಮಾಡದ ಶ್ವಾಸಕೋಶದ ಕಾಯಿಲೆಗಳು, ಹೃದಯದ ತೊಂದರೆಗಳು, ಮಧುಮೇಹ ಮತ್ತು ಅಪೌಷ್ಟಿಕತೆಗೆ ಸಂಬAಧಿಸಿದ ಕಾರಣದಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಸಿಎನ್ ಮಂಜುನಾಥ್ ಹೇಳಿದ್ದಾರೆ. ಮಹಾರಾಷ್ಟçದಲ್ಲಿ ಅತಿ ಹೆಚ್ಚು ಸಾವುಗಳು, ತಮಿಳುನಾಡಿನಲ್ಲಿ ೩೩,೦೫೯ ಸಾವುಗಳು, ಆಂಧ್ರಪ್ರದೇಶದಲ್ಲಿ ೧೨,೮೭೦ ಮತ್ತು ಕೇರಳದಲ್ಲಿ ೧೩,೮೧೮ ಸಾವುಗಳು ದಾಖಲಾಗಿವೆ. ರಾಜಸ್ಥಾನದಲ್ಲಿ ೮,೯೪೧ ಸಾವುಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗದ ಪ್ರಾರಂಭದಿAದ ೬೧-೮೦ ವರ್ಷ ವಯಸ್ಸಿನ ರೋಗಿಗಳು ರಾಜ್ಯದಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಅರ್ಧದಷ್ಟಿದ್ದಾರೆ. ಜುಲೈ ೬ ರವರೆಗೆ ಬಿಡುಗಡೆಯಾದ ಅಂಕಿ ಅಂಶಗಳು ಕರ್ನಾಟಕದಲ್ಲಿ ೬೦-೬೯ ವಯಸ್ಸಿನ ೧೦,೧೬೫ ಜನರು, ೭,೭೭೪ ಜನರು ೫೦ ರಿಂದ ೫೯ ವರ್ಷ ವಯಸ್ಸಿನವರು ಮತ್ತು ೭೦-೭೯ ವಯಸ್ಸಿನ ೬,೮೭೨ ಜನರು ಕೋವಿಡ್-೧೯ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ. ಸಾವುಗಳು ಸಹ ಒಂದು ರೀತಿಯ ಒತ್ತಡವನ್ನು ಅವಲಂಬಿಸಿರುತ್ತದೆ - ಹೆಚ್ ಅಥವಾ ಎಲ್ ಪ್ರಕಾರ - ಇದು ಸಾವಿನ ಪ್ರಮಾಣವನ್ನು ನಿರ್ಧರಿಸುವಲ್ಲಿ ಪಾತ್ರವಹಿಸುತ್ತದೆ.