ಮಡಿಕೇರಿ, ಜು. ೮ : ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಈ ಹಿಂದಿನಿAದಲೂ ಇಲ್ಲಿಯ ಜನತೆ ಕೃಷಿಯನ್ನೇ ನಂಬಿಕೊAಡು ಬದುಕು ಸಾಗಿಸುತ್ತಿದ್ದಾರೆ. ಭತ್ತ ಮೂಲ ಕೃಷಿಯಾಗಿತ್ತಾದರೂ ಬರಬರುತ್ತಾ ಬೆಲೆ ಕುಸಿತ, ಕಾರ್ಮಿಕರು, ಜಾನುವಾರುಗಳ ಕೊರತೆಯಿಂದಾಗಿ ಭತ್ತದ ಕೃಷಿಯತ್ತ ಒಲವು ಕಡಿಮೆಯಾಗತೊಡಗಿ ಕೃಷಿಕನ ಒಲವು ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ಕೃಷಿಯತ್ತ ಹೆಚ್ಚತೊಡಗಿತು. ಕಾಫಿಯೊಂದಿಗೆ ಮಿಶ್ರ ಬೆಳೆಯಾಗಿ ಕಿತ್ತಳೆ ಹಾಗೂ ಕರಿಮೆಣಸು, ದಕ್ಷಿಣ ಕೊಡಗು ಹಾಗೂ ಉತ್ತರ ಕೊಡಗಿನ ಕೆಲವು ಭಾಗಗಳಲ್ಲಿ ಅಡಿಕೆ ಹಾಗೂ ತೆಂಗು ಕೂಡ ಬೆಳೆಯಲಾರಂಭಿಸಿದರು. ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಎಂದರೆ ವಿಶ್ವವಿಖ್ಯಾತಿ ಪಡೆದಿತ್ತು. ‘ಕರಿಚಿನ್ನ’ ಎಂದೇ ಕರೆಯಲ್ಪಡುವ ಇಲ್ಲಿನ ಕಾಳುಮೆಣಸಿಗೂ ಎಲ್ಲಿಲ್ಲದ ಬೇಡಿಕೆಯಿತ್ತು. ಬರಬರುತ್ತಾ ಗಿಡ ಹಾಗೂ
(ಮೊದಲ ಪುಟದಿಂದ) ಬಳ್ಳಿಗಳಿಗೆ ರೋಗ ಹಾಗೂ ಬೆಲೆ ಕುಸಿತದಿಂದ ಕಿತ್ತಳೆ ಹಾಗೂ ಕರಿಮೆಣಸು ಬೆಳೆಯುವದು ಕಡಿಮೆಯಾಗತೊಡಗಿತು. ಇದೀಗ ಮತ್ತೆ ಈ ಪ್ರಮುಖ ಮಿಶ್ರ ಬೆಳೆಯನ್ನು ಉತ್ತೇಜಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ನರ್ಸರಿ ಮೂಲಕ ಸಸ್ಯೋತ್ಪಾದನೆ ಮಾಡಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇಲಾಖಾ ವ್ಯಾಪ್ತಿಯ ಜಿಲ್ಲೆಯ ವಿವಿಧೆಡೆಗಳಲ್ಲಿರುವ ನರ್ಸರಿಗಳಲ್ಲಿ ಗಿಡಗಳು ವಿತರಣೆಗೆ ಸಿದ್ಧವಾಗಿವೆ. ಆಗಸ್ಟ್ ೩ನೇ ವಾರದಲ್ಲಿ ಸಸಿಗಳು ವಿತರಣೆಯಾಗಲಿದೆ.
ಕೊಡಗಿನ ಕಿತ್ತಳೆಗೆ ಬೇಡಿಕೆ ಹೆಚ್ಚಾಗುತ್ತಿರುವದು ಹಾಗೂ ರೈತರಲ್ಲೂ ಕೂಡ ಕಿತ್ತಳೆ ಬೆಳೆಯುವ ಆಸಕ್ತಿ ಕಂಡುಬರುತ್ತಿರುವದರಿAದ ಜಿಲ್ಲಾ ಪಂಚಾಯಿತಿ ಮೂಲಕ ತೋಟಗಾರಿಕೆ ಇಲಾಖೆಯಿಂದ ಗಿಡಗಳನ್ನು ಬೆಳೆಸಲಾಗುತ್ತಿದೆ. ಅಲ್ಲದೆ ಕರಿಮೆಣಸಿಗೂ ಬೇಡಿಕೆ ಹೆಚ್ಚುತ್ತಿದೆ. ಇದರೊಂದಿಗೆ ವಾತಾವರಣಕ್ಕನುಕೂಲವಾಗಿ ಅಲ್ಲಲ್ಲಿ ಕಾಫಿ ತೋಟಗಳ ನಡುವೆ ತೆಂಗು ಹಾಗೂ ಅಡಿಕೆ ಗಿಡಗಳನ್ನು ಕೂಡ ಬೆಳೆಯಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖಾ ವತಿಯಿಂದ ಸಸಿಗಳನ್ನು ತಯಾರಿಸಿ ರೈತರಿಗೆ ವಿತರಣೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಎಲ್ಲೆಲ್ಲಿ ಗಿಡಗಳಿವೆ...?
ತೋಟಗಾರಿಕೆ ಇಲಾಖೆಯ ನರ್ಸರಿಗಳಾದ ನಾಪೋಕ್ಲು, ಕೂಡಿಗೆ, ಬಳಗುಂದ, ಮಾದಾಪುರ, ಮದಲಾಪುರ, ಹಾರಂಗಿ, ಪೊನ್ನಂಪೇಟೆ, ಅರ್ವತ್ತೊಕ್ಲುವಿನಲ್ಲಿ ಸಸಿಗಳು ತಯಾರಾಗಿವೆ. ಮದಲಾಪುರ ನರ್ಸರಿಯಲ್ಲಿ ೧.೫೦ ಲಕ್ಷ ಕರಿಮೆಣಸು ಬಳ್ಳಿ, ೧೦ ಸಾವಿರ ಕಿತ್ತಳೆ, ಮಾದಾಪುರದಲ್ಲಿ ೨.೫೦ ಲಕ್ಷ ಕರಿಮೆಣಸು, ೧೦ಸಾವಿರ ಕಿತ್ತಳೆ, ೫ಸಾವಿರ ಅಡಿಕೆ, ಪೊನ್ನಂಪೇಟೆಯಲ್ಲಿ ೭೫ ಸಾವಿರ ಕರಿಮೆಣಸು, ೫ ಸಾವಿರ ಕಿತ್ತಳೆ, ೧೦ ಸಾವಿರ ಅಡಿಕೆ, ನಾಪೋಕ್ಲುವಿನಲ್ಲಿ ೧.೭೫ ಲಕ್ಷ ಕರಿಮೆಣಸು, ೨೦ ಸಾವಿರ ಕಿತ್ತಳೆ, ಅರ್ವತೊಕ್ಲುವಿನಲ್ಲಿ ೨ ಲಕ್ಷ ಕರಿಮೆಣಸು, ೨೦ ಸಾವಿರ ಅಡಿಕೆ, ಕೂಡಿಗೆಯಲ್ಲಿನ ೧ ಲಕ್ಷ ಕರಿಮೆಣಸು, ೧೦ ಸಾವಿರ ಕಿತ್ತಳೆ, ಬಳಗುಂದದಲ್ಲಿ ೭೫ ಸಾವಿರ ಕರಿಮೆಣಸು, ೧೦ ಸಾವಿರ ಕಿತ್ತಳೆ, ಹಾರಂಗಿಯಲ್ಲಿ ೩.೫೦ ಲಕ್ಷ ಕರಿಮೆಣಸು, ೧೦ ಸಾವಿರ ಕಿತ್ತಳೆ, ೧೦ ಸಾವಿರ ಅಡಿಕೆ ಹಾಗೂ ೨೦ ಸಾವಿರ ತೆಂಗಿನ ಸಸಿಗಳನ್ನು ಬೆಳೆಯಲಾಗಿದೆ.
ರಿಯಾಯಿತಿ ದರ
ಈ ನರ್ಸರಿಗಳಲ್ಲಿ ಬೆಳೆಯಲಾದ ಗಿಡಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತದೆ. ಕರಿಮೆಣಸು ಬಳ್ಳಿಗೆ ರೂ. ೫.೫೦ ಪೈಸೆ, ಕಿತ್ತಳೆಗೆ ಗಿಡವೊಂದಕ್ಕೆ ರೂ. ೮, ಅಡಿಕೆಗೆ ರೂ. ೨೦ ಹಾಗೂ ತೆಂಗಿನ ಗಿಡಗಳನ್ನು ರೂ. ೭೦ ರಂತೆ ವಿತರಣೆ ಮಾಡಲಾಗುತ್ತದೆ. ಇದರೊಂದಿಗೆ ನುಗ್ಗೆ ಗಿಡ ಹಾಗೂ ಪಪ್ಪಾಯಿ ಗಿಡಗಳನ್ನು ಕೂಡಾ ಬೆಳೆಸಲಾಗಿತ್ತಾದರೂ ಅವುಗಳು ಈಗಾಗಲೇ ವಿತರಣೆಯಾಗಿ ಖಾಲಿಯಾಗಿವೆ.
ತೆಂಗಿನ ಗಿಡಗಳು ಈಗಾಗಲೇ ರೈತರಿಗೆ ವಿತರಣೆಗೊಂಡು ಖಾಲಿಯಾಗಿವೆ. ಕಿತ್ತಳೆ ಹಾಗೂ ಕರಿಮೆಣಸು ಬಳ್ಳಿಗಳನ್ನು ಆಗಸ್ಟ್ ಎರಡನೇ ವಾರದದಲ್ಲಿ ವಿತರಣೆ ಮಾಡಲಾಗುವುದು.
ಆಸಕ್ತಿ ಇರುವ ರೈತರು ತಮ್ಮ ಜಮೀನಿನ ಆರ್ಟಿಸಿಯೊಂದಿಗೆ ನರ್ಸರಿಗಳಿಗೆ ತೆರಳಿ ಗಿಡಗಳನ್ನು ಪಡೆದುಕೊಳ್ಳಬಹುದೆಂದು ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಹೆಚ್. ಶಶಿಧರ್ ತಿಳಿಸಿದ್ದಾರೆ.
? ಕುಡೆಕಲ್ ಸಂತೋಷ್