ಮಡಿಕೇರಿ, ಜು. ೮: ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ರ ವಿಧಿ ೩೧, ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆಕ್ಟ್ ೨೦೦೫ ರ ಕಲಂ ೩೩, ಮೋಟಾರು ವಾಹನ ಕಾಯ್ದೆ ೧೯೮೮ ರ ಕಲಂ ೧೧೫ ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ ೧೯೮೯ ರ (ತಿದ್ದುಪಡಿ ನಿಯಮಾವಳಿ ೧೯೯೦) ನಿಯಮ ೨೨೧ಎ (೫), ದಂಡಪ್ರಕ್ರಿಯಾ ಸಂಹಿತೆ ೧೯೭೩ ರ ಕಲಂ ೧೪೪ ರಡಿ ದತ್ತವಾದ ಅಧಿಕಾರದಂತೆ ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನ ಸಂಚಾರದ ಸಂಬAಧ ನಿರ್ಬಂಧಕಾಜ್ಞೆ ಹೊರಡಿಸಲಾಗಿತ್ತು, ಅದರಂತೆ ಈ ಆದೇಶವು ಜೂನ್ ೨೩ ರಿಂದ ಆಗಸ್ಟ್ ೧೬ ರವರೆಗೆ ಜಾರಿಯಲ್ಲಿದೆ.
ನಿರ್ಬಂಧಿತ ವಾಹನಗಳು: ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ ೧೬,೨೦೦ ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರೀ ವಾಹನಗಳಾದ ಬುಲೆಟ್ ಟ್ಯಾಂರ‍್ಸ್, ಶಿಪ್ ಕಾರ್ಗೋ ಕಂಟೈರ‍್ಸ್, ಲಾಂಗ್ ಚಾಸಿಸ್(ಮಲ್ಟಿ ಆಕ್ಸಿಲ್) ವಾಹನಗಳು.
ನಿರ್ಬಂಧದಿAದ ವಿನಾಯಿತಿ ನೀಡಿದ ವಾಹನಗಳು: ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ-ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳು (ಮಲ್ಟಿ ಆಕ್ಸಿಲ್ ಬಸ್‌ಗಳು ಸೇರಿದಂತೆ) ಪ್ರಸ್ತುತ ಸಾರ್ವಜನಿಕ ಹಿತಾಸಕ್ತಿಯಿಂದ ಈ ಆದೇಶವನ್ನು ಭಾಗಶಃ ಮಾರ್ಪಾಡು ಮಾಡಿ ಆದೇಶಿಸಿದೆ.
ವಾಹನದ ನೋಂದಣಿ ತೂಕ ೧೬,೨೦೦ ಕೆ.ಜಿ.ಗಿಂತ ಕಡಿಮೆ ತೂಕದ ಸರಕು ಸಾಗಾಣಿಕೆಯ ವಾಹನಗಳು ಇದರೊಂದಿಗೆ ಸಂಬAಧಪಟ್ಟ ಇಲಾಖೆಗಳು ಹೊರಡಿಸಿರುವ ಅಥವಾ ಇಲಾಖೆ ವತಿಯಿಂದ ಚಾಲ್ತಿಯಲ್ಲಿರುವ ಆದೇಶ, ನಿಯಮ, ನಿರ್ಬಂಧ, ಮಾರ್ಗಸೂಚಿಗಳು ಜಾರಿಯಲ್ಲಿದೆ. ಉಲ್ಲಂಘನೆಯು ಸಂಬAಧಪಟ್ಟ ಕಾಯ್ದೆಗಳಡಿ ದಂಡನೀಯವಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಚಾರುಲತಾ ಸೋಮಲ್ ತಿಳಿಸಿದ್ದಾರೆ.