ಕುಟ್ಟ, ಜು. ೯: ದಕ್ಷಿಣ ಕೊಡಗಿನ ಗಡಿಭಾಗ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಅಧಿಕವಾಗುತ್ತಿರುವ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ ಆನೆಗಳ ಹಿಂಡು ತೈಲ, ಮಂಚಳ್ಳಿ, ಪೂಜೆಕಲ್ಲು ಮತ್ತಿತರ ಭಾಗಗಳಲ್ಲಿ ದಾಂಧಲೆ ನಡೆಸುತ್ತಿದ್ದು, ರೈತರ ಕೃಷಿ ಫಸಲುಗಳು ಹಾನಿಗೀಡಾಗುತ್ತಿವೆ. ವಾತಾವರಣದ ಏರುಪೇರು ಒಂದೆಡೆಯಾದರೆ, ಆನೆಗಳ ಉಪಟಳದಿಂದಲೂ ರೈತರು ಚಿಂತಾಕ್ರಾAತರಾಗಿದ್ದಾರೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಹೆಚ್ಚು ಅನಾಹುತವಾಗದಂತೆ ತಡೆಗಟ್ಟಬೇಕೆಂದು ರೈತರು ಆಗ್ರಹಿಸಿದ್ದಾರೆ.