ಕೂಡಿಗೆ, ಜು. ೯: ಜಿಲ್ಲೆಯ ರೈತರು ಕಳೆದ ಬಾರಿ ಶುಂಠಿಗೆ ಬೆಲೆಯಿಲ್ಲದೆ ಕೊರೊನಾ ಹಿನ್ನೆಲೆ ಭಾರೀ ನಷ್ಟಕ್ಕೆ ಒಳಗಾಗಿದ್ದರು. ಆದರೂ ಈ ಬಾರಿ ರೈತರು ಮತ್ತೆ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದಾರೆ. ಆದರೆ ಶುಂಠಿ ಬೇಸಾಯ ಮಾಡಿದ ಮೂರು ತಿಂಗಳುಗಳಲ್ಲಿ ಕೀಳುವಂತ ಪ್ರಸಂಗ ತಲುಪಿದೆ. ಈ ಸಾಲಿನಲ್ಲಿ ಶುಂಠಿಗೆ ಬೆಂಕಿ ರೋಗ ಮತ್ತು ಕೊಳೆ ರೋಗ ಕಾಣಿಸಿಕೊಂಡ ಹಿನ್ನೆಲೆ ಬೆಲೆ ಪ್ರಮಾಣ ಸ್ವಲ್ಪಮಟ್ಟಿಗೆ ಏರಿಕೆ ಆಗುತ್ತಿರುವುದರಿಂದ ಕೆಲ ರೈತರು ಶುಂಠಿಯು ಭೂಮಿಯಲ್ಲಿ ಹಾಳಾಗುವ ಬದಲು ಬೆಳೆಯನ್ನು ಕೀಳಲು ಪ್ರಾರಂಭ ಮಾಡಿದ್ದಾರೆ.

ಹವಾಮಾನದ ಬದಲಾವಣೆ ಮತ್ತು ಕಳೆದ ಸಾಲಿನಲ್ಲಿ ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಬೆಳೆದ ಶುಂಠಿ ಬೆಳೆ ಹೊರ ರಾಜ್ಯಗಳಿಗೆ ರವಾನೆಯಾಗಿಲ್ಲ. ಅದರ ಜೊತೆಗೆ ಬೆಲೆಯು ತೀರ ಕಡಿಮೆಯಾಗಿತ್ತು. ಆದರೆ ಈ ಸಾಲಿನಲ್ಲಿ ಬಿತ್ತನೆ ಮಾಡಿದ ಹೊಸ ಶುಂಠಿಗೆ ಅಧಿಕವಾಗಿ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ಶುಂಠಿಯನ್ನು ಬಿತ್ತನೆ ಮಾಡಿ ಕೇವಲ ಮೂರು - ನಾಲ್ಕು ತಿಂಗಳುಗಷ್ಟೆ ಕಳೆದಿದೆ. ಈಗಾಗಲೇ ಬೆಳೆಗೆ ರೋಗ ಕಾಣಿಸಿಕೊಂಡಿರುವ ಹಿನ್ನೆಲೆ ನಷ್ಟವಾದರೂ ಸಹ ಶುಂಠಿ ಬೆಳೆಯನ್ನು ಕೀಳುವಂತ ಪ್ರಸಂಗಕ್ಕೆ

ಬಂದಿರುತ್ತಾರೆ.

ಕುಶಾಲನಗರ ತಾಲೂಕು ಮತ್ತು ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ಕಡೆಗಳಲ್ಲಿ ಕೊಳೆ ರೋಗ, ಬೆಂಕಿ ರೋಗ ಕಾಣಿಸಿಕೊಂಡ ಹಿನ್ನೆಲೆ ಈ ಭಾಗದ ನೂರಾರು ರೈತರು ಆಂತಕಗೊAಡಿದ್ದಾರೆ. ಮಳೆ ಕಡಿಮೆ ಇದ್ದರೂ ಸಹ ಈ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಹವಾಮಾನದ ಬದಲಾವಣೆಯಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಕೆಲವು ರೈತರು. ಕಳೆದ ಒಂದು ವಾರದಿಂದ ಶುಂಠಿ ಖರೀದಿಸಲು ಆರಂಭವಾದರೂ ಕಳೆದ ತಿಂಗಳುಗಳಲ್ಲಿ ಇದ್ದ ಬೆಲೆ ರೂ. ೫೭೦ಕ್ಕಿಂತ ಈ ದಿನಗಳಲ್ಲಿ ರೂ. ೯೫೦ ಆಗಿದೆ ಎಂದು ಶುಂಠಿ ಬೆಳೆಗಾರರಾದ ಸೀಗೆಹೊಸೂರು ಗ್ರಾಮದ ವಿಶ್ವನಾಥ್, ಕಿರಣ್, ನಾಗೇಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬೆಳೆಯುವ ರಿಗೋಡಿ ಶುಂಠಿ ಬೆಳೆಗೆ ಈ ದಿನಗಳಲ್ಲಿ ಕೇವಲ ರೂ. ೯೫೦ ಇದೆ. ಆದರೆ ಹಿಮಾಚಲ ಶುಂಠಿಗೆ ಮಾರುಕಟ್ಟೆಯಲ್ಲಿ ರೂ. ೪೦೦೦ ಇದೆ. ಲಾಕ್‌ಡೌನ್ ಹಿನ್ನೆಲೆ ಶುಂಠಿ ಸಾಗಾಟಕ್ಕೆ ಉತ್ತಮ ಅನುಕೂಲ ಇಲ್ಲದೆ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ ಎಂದೂ ಶುಂಠಿ ಖರೀದಿದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.