*ಗೋಣಿಕೊಪ್ಪ, ಜು. ೯: ವೀರಾಜಪೇಟೆ ತಾಲೂಕು ಯುವ ಮೋರ್ಚಾ ಮಂಡಲ ಮತ್ತು ಅಲ್ಪಸಂಖ್ಯಾತರ ಘಟಕ ವತಿಯಿಂದ ಲಸಿಕೆ ಪಡೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು.
ಗೋಣಿಕೊಪ್ಪ ಕಾವೇರಿ ಕಾಲೇಜುವಿನಲ್ಲಿ ಆಯೋಜಿಸಿದ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡ ೫೫೦ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್, ತಂಪು ಪಾನೀಯಗಳ ವಿತರಣೆ ವೀರಾಜಪೇಟೆ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಗ್ರಾ.ಪಂ. ಸದಸ್ಯ ವಿವೇಕ್ ರಾಯ್ಕರ್, ಕಾವೇರಿ ಪದವಿಪೂರ್ವ ಕಾಲೇಜಿನ ಪಾಂಶುಪಾಲ ಕುಸುಮಾಧರ್, ಉಪನ್ಯಾಸಕ ಕಾವೇರಪ್ಪ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಹಾಗೂ ಪ್ರಧಾನ್ ಬೋಪಣ್ಣ, ರಂಜನ್ ಬೋಪಣ್ಣ, ಹಿತೇಷ್ ಮುತ್ತಪ್ಪ, ಕಿಶನ್, ಗಗನ್ ಗಣಪತಿ, ಚೆರಿಯಪಂಡ ಸುಬ್ಬಯ್ಯ, ಚೆರಿಯಪಂಡ ದರ್ಶನ್, ಅಲ್ಪಸಂಖ್ಯಾAತರ ಘಟಕದ ಅಧ್ಯಕ್ಷ ಹಕೀಂ, ಪದಾಧಿಕಾರಿಗಳಾದ ಸಾಜಿ. ಮುಸ್ತಾಫ್, ತಸ್ಲಿಂ, ಶಮೀರ್, ರಫೀಕ್ ಹಾಜರಿದ್ದರು.