ಗೋಣಿಕೊಪ್ಪ ವರದಿ, ಜು. ೯ : ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಆರೋಪಿಯನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭರತ್ ಒತ್ತಾಯಿಸಿದ್ದಾರೆ.

ಹರಿಶ್ಚಂದ್ರಪುರ ನಿವಾಸಿ ಪದ್ಮಿನಿ ಎಂಬುವವರ ವಿರುದ್ದ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ನಿರ್ಲಕ್ಷö್ಯ ಮಾಡಿದರೆ ಪೊಲೀಸ್ ಠಾಣೆ ಎದುರು ಧರಣಿ ನಡೆಸಲಾಗುವುದು ಎಂದು ಸುದ್ದಿಗೋಷ್ಠೀಯಲ್ಲಿ ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಆಡಳಿತ ಸೂಚನೆಯಂತೆ ಪೌರ ಕಾರ್ಮಿಕರಾದ ರಾಜು, ಸತ್ಯ, ಸುರೇಶ್ ಹರಿಶ್ಚಂದ್ರಪುರದಲ್ಲಿ ಕಸ ತೆಗೆಯುತ್ತಿದ್ದಾಗ, ಪದ್ಮಿನಿ ಕಾರ್ಮಿಕರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಕಾರ್ಮಿಕ ರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕಾರ್ಮಿಕರು ದೂರು ನೀಡಿದ್ದಾರೆ. ಇದರಂತೆ ಪಿಡಿಒ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇನ್ನೂ ಪದ್ಮಿನಿ ಮೇಲೆ ಕ್ರಮಕೈಗೊಂಡಿಲ್ಲ. ಅವರನ್ನು ಬಂಧಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪೊನ್ನಂಪೇಟೆ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎಂ. ಬಿ. ಹರೀಶ್, ಉಪಾಧ್ಯಕ್ಷ ಮಹದೇವ್, ಕಾರ್ಮಿಕ ಸತ್ಯರಾಜು ಇದ್ದರು.

ವೈಯಕ್ತಿಕ ದ್ವೇಷ - ಬೋಪಣ್ಣ

ಗೋಣಿಕೊಪ್ಪ : ಜಾತಿ ನಿಂದನೆ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಮಹಿಳೆ ನೀಡಿದ ದೂರು ರಾಜಕೀಯ ಪ್ರೇರಿತವಲ್ಲ. ಇದು ಸದಸ್ಯರ ಹಾಗೂ ಮಹಿಳೆಯ ನಡುವಿನ ವೈಯಕ್ತಿಕ ದ್ವೇಷ ಎಂದು ಜಿ.ಪಂ ಮಾಜಿ ಸದಸ್ಯ ಸಿ.ಕೆ. ಬೋಪಣ್ಣ ಅಭಿಪ್ರಾಯ ತಿಳಿಸಿದ್ದಾರೆ.

ಈ ವಿಚಾರ ಸರಿತಾಪೂಣಚ್ಚ ಅವರ ಗಮನಕ್ಕೆ ಬಾರದೇ ರಾಜಕೀಯ ಬೆರೆಸಿ ಹೇಳಿಕೆ ನೀಡುತ್ತಿರುವುದನ್ನು ಆಕ್ಷೇಪಿಸಿದರು. ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿರುವ ಗ್ರಾ.ಪಂ. ಸದಸ್ಯ ಪ್ರಮೋದ್ ಗಣಪತಿ ಅವರ ಪಕ್ಷದಲ್ಲೇ ಕಾರ್ಯಕರ್ತರಾಗಿ ಮಹಿಳೆಯು ಗುರುತಿಸಿಕೊಂಡಿದ್ದಾರೆ ಗೋಣಿಕೊಪ್ಪ ವರದಿ, ಜು. ೯ : ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಆರೋಪಿಯನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭರತ್ ಒತ್ತಾಯಿಸಿದ್ದಾರೆ.

ಹರಿಶ್ಚಂದ್ರಪುರ ನಿವಾಸಿ ಪದ್ಮಿನಿ ಎಂಬುವವರ ವಿರುದ್ದ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ನಿರ್ಲಕ್ಷö್ಯ ಮಾಡಿದರೆ ಪೊಲೀಸ್ ಠಾಣೆ ಎದುರು ಧರಣಿ ನಡೆಸಲಾಗುವುದು ಎಂದು ಸುದ್ದಿಗೋಷ್ಠೀಯಲ್ಲಿ ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಆಡಳಿತ ಸೂಚನೆಯಂತೆ ಪೌರ ಕಾರ್ಮಿಕರಾದ ರಾಜು, ಸತ್ಯ, ಸುರೇಶ್ ಹರಿಶ್ಚಂದ್ರಪುರದಲ್ಲಿ ಕಸ ತೆಗೆಯುತ್ತಿದ್ದಾಗ, ಪದ್ಮಿನಿ ಕಾರ್ಮಿಕರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಕಾರ್ಮಿಕ ರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕಾರ್ಮಿಕರು ದೂರು ನೀಡಿದ್ದಾರೆ. ಇದರಂತೆ ಪಿಡಿಒ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇನ್ನೂ ಪದ್ಮಿನಿ ಮೇಲೆ ಕ್ರಮಕೈಗೊಂಡಿಲ್ಲ. ಅವರನ್ನು ಬಂಧಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪೊನ್ನಂಪೇಟೆ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎಂ. ಬಿ. ಹರೀಶ್, ಉಪಾಧ್ಯಕ್ಷ ಮಹದೇವ್, ಕಾರ್ಮಿಕ ಸತ್ಯರಾಜು ಇದ್ದರು.

ವೈಯಕ್ತಿಕ ದ್ವೇಷ - ಬೋಪಣ್ಣ

ಗೋಣಿಕೊಪ್ಪ : ಜಾತಿ ನಿಂದನೆ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಮಹಿಳೆ ನೀಡಿದ ದೂರು ರಾಜಕೀಯ ಪ್ರೇರಿತವಲ್ಲ. ಇದು ಸದಸ್ಯರ ಹಾಗೂ ಮಹಿಳೆಯ ನಡುವಿನ ವೈಯಕ್ತಿಕ ದ್ವೇಷ ಎಂದು ಜಿ.ಪಂ ಮಾಜಿ ಸದಸ್ಯ ಸಿ.ಕೆ. ಬೋಪಣ್ಣ ಅಭಿಪ್ರಾಯ ತಿಳಿಸಿದ್ದಾರೆ.

ಈ ವಿಚಾರ ಸರಿತಾಪೂಣಚ್ಚ ಅವರ ಗಮನಕ್ಕೆ ಬಾರದೇ ರಾಜಕೀಯ ಬೆರೆಸಿ ಹೇಳಿಕೆ ನೀಡುತ್ತಿರುವುದನ್ನು ಆಕ್ಷೇಪಿಸಿದರು. ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿರುವ ಗ್ರಾ.ಪಂ. ಸದಸ್ಯ ಪ್ರಮೋದ್ ಗಣಪತಿ ಅವರ ಪಕ್ಷದಲ್ಲೇ ಕಾರ್ಯಕರ್ತರಾಗಿ ಮಹಿಳೆಯು ಗುರುತಿಸಿಕೊಂಡಿದ್ದಾರೆ