ಚೆಟ್ಟಳ್ಳಿ, ಜು. ೯: ಕೊಡಗು ಅನ್ ಲಾಕ್ ಆದರೂ ಕೊಡಗಿನ ಗಡಿಗಳು ಅನ್ ಲಾಕ್ ಆಗುವುದು ಬೇಡ. ಕೊಡಗಿನಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣ ಬರುವವರೆಗೂ ಹಾಗೂ ಮಳೆಗಾಲ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೊಡಬಾರದು; ಕೊಟ್ಟರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ, ಯೂತ್ ವಿಂಗ್ ಹಾಗೂ ಪೊಮ್ಮಕ್ಕಡ ಪರಿಷತ್ ಎಚ್ಚರಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಈಗಾಗಲೇ ಕೊಡಗು ರಕ್ಷಣಾ ವೇದಿಕೆ ಹೋರಾಟದ ಸೂಚನೆಯನ್ನು ನೀಡಿದ್ದು, ಕೊರೊನಾ ಹತೋಟಿಗೆ ಬಾರದೆ ಕೊಡಗಿನಲ್ಲಿ ಪ್ರವಾಸೋದ್ಯಮ ತೆರೆದುಕೊಂಡರೆ ಖಂಡಿತಾ ಇವರೊಂದಿಗೆ ನಮ್ಮ ಮೂರು ಸಂಸ್ಥೆಗಳು ಕೈಜೋಡಿಸಿ ಜಿಲ್ಲೆಯಲ್ಲಿ ಇನ್ನಷ್ಟು ಸಂಘಟನೆಗಳನ್ನು ಜೊತೆಗೂಡಿಸಿ ದೊಡ್ಡ ಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ರಾಜ್ಯ ಅನ್ ಲಾಕ್ ಆಗಿದ್ದರು ಕಳೆದ ಮೂರು ದಿವಸದ ಹಿಂದೆಯೂ ಕೊಡಗಿನಲ್ಲಿ ಕೊರೊನಾ ಹತೋಟಿಗೆ ಬಾರದ ಕಾರಣ ಜಿಲ್ಲೆ ಲಾಕ್ ಡೌನ್ ಆಗಿಯೇ ಮುಂದುವರಿದಿತ್ತು. ಆದರೆ ಇದೀಗ ಕೇವಲ ಎರಡು ದಿವಸದಲ್ಲಿ ಕೊರೊನಾ ಪಾಸಿಟಿವಿಟಿ ಒಂದಿಷ್ಟು ಕಡಿಮೆಯಾಗುತ್ತಿದ್ದಂತೆ ಜಿಲ್ಲೆಯನ್ನು ಸಂಪೂರ್ಣ ಅನ್‌ಲಾಕ್ ಮಾಡಿರುವುದು ಸರಿಯಾದ ಕ್ರಮವಲ್ಲ, ಇದರ ಹಿಂದೆ ಇದೀಗ ಕೊಡಗಿನಲ್ಲಿ ಪ್ರವಾಸೋದ್ಯಮ ಆರಂಭಿಸಬೇಕು ಎಂಬ ಕೂಗು ಕೇವಲ ಕೆಲವರಿಂದ ಮಾತ್ರ ಕೇಳಿಬರುತ್ತಿದೆ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ಕೊರೊನಾ ಸಂಪೂರ್ಣ ಹತೋಟಿಗೆ ಬರುವವರೆಗೂ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮೇಲಿನ ಮೂರು ಸಂಸ್ಥೆಗಳು ಮನವಿ ಮಾಡಿಕೊಂಡಿದೆ.
ಭಾಗಮAಡಲ ವ್ಯಾಪ್ತಿಯಲ್ಲಿ ಮಂದಗತಿಯ ನಾಟಿ ಕಾರ್ಯ