ಗೋಣಿಕೊಪ್ಪಲು, ಜು. ೭: ಕೊಡಗಿನ ರೈತ ಒಂದಲ್ಲ,ಒAದು ಸಮಸ್ಯೆಯಲ್ಲಿ ಸಿಲುಕಿ ನರಳುತ್ತಿದ್ದಾನೆ. ಕೃಷಿಯೇ ಜೀವಾಳ ಎಂದು ನಂಬಿರುವ ರೈತನ ಪಾಡು ಹೇಳತೀರದಾಗಿದೆ.
ವನ್ಯಪ್ರಾಣಿಗಳಾದ ಕಾಡಾನೆ, ಹುಲಿ, ಚಿರತೆ, ಕರಡಿ ಇತ್ಯಾದಿ ಪ್ರಾಣಿಗಳಿಂದ ರೈತ ಬೆಳೆದ ಫಸಲುಗಳು ಕೈಗೆ ಬರುವ ಹಂತದಲ್ಲಿ ಇವುಗಳ ಪಾಲಾಗುತ್ತಿರುವುದು ಮಾಮೂಲಿಯಾಗಿದೆ. ಇದೀಗ ಈ ಸಾಲಿಗೆ ಭತ್ತದ ಪೈರು ಸೇರಿವೆ.
ಭತ್ತದ ಗದ್ದೆಗಳನ್ನು ನೆಡುವುದರಿಂದ ರೈತರಿಗೆ ಇದರಿಂದ ನಿರೀಕ್ಷೆ ಮಾಡಿದಷ್ಟು ಆದಾಯ ಬರುತ್ತಿಲ್ಲ. ಕಾರ್ಮಿಕರ ವೇತನ, ಗೊಬ್ಬರ, ಬೀಜಗಳ ಬೆಲೆಯು ಗಗನಕ್ಕೇರಿವೆ. ಆದರೂ ಹಿರಿಯರು ಮುಂದುವರಿಸಿಕೊAಡು ಬಂದಿರುವ ಭೂಮಿಯನ್ನು ಪಾಳು ಬಿಡಬಾರ ದೆಂಬ ಕಾರಣಕ್ಕೆ ಲಾಭದಾಯಕ ವಿಲ್ಲದಿದ್ದರೂ ಕಷ್ಟಪಟ್ಟು ಭತ್ತದ ಗದ್ದೆಯನ್ನು ಹುತ್ತಿ, ಬಿತ್ತಿ, ಫಸಲು ನಿರೀಕ್ಷೆ ಮಾಡುತ್ತಾನೆ. ಆದರೆ ಆರಂಭದಲ್ಲಿಯೇ ಇದು ಕಾಡು ಪ್ರಾಣಿಗಳ ಪಾಲಾದರೆ ರೈತರ ಪಾಡೇನು.? ಎಂಬ ಪರಿಸ್ಥಿತಿ ದಕ್ಷಿಣ ಕೊಡಗಿನ ಬಹುತೇಕ ಭತ್ತ ಬೆಳೆಯುವ ರೈತನ ಪ್ರಶ್ನೆಯಾಗಿದೆ.
ಅರಣ್ಯ ಪ್ರದೇಶದಿಂದ ರೈತರ ಕಾಫಿ ತೋಟಗಳಲ್ಲಿ ನೆಲೆ ಕಂಡು ಕೊಂಡಿರುವ ಕಾಡು ಹಂದಿಗಳು ಕಾಫಿ ತೋಟದ ಬೆಳೆಗಳನ್ನು ಹಾಳು ಮಾಡುತ್ತಿವೆ. ಮುಂಜಾನೆಯ ವೇಳೆ ಗುಂಪು, ಗುಂಪಾಗಿ ಸಮೀಪದ ಭತ್ತದ ಗದ್ದೆಗಳಿಗೆ ಲಗ್ಗೆ ಹಿಡುವ ಇವುಗಳು ಬೆಳೆದು ನಿಂತ ಭತ್ತದ ಪೈರುಗಳನ್ನು ತಿಂದು ನಷ್ಟ ಮಾಡುತ್ತಿವೆ. ಅಲ್ಲದೇ ಭತ್ತದ ಪೈರು ಗದ್ದೆಯಲ್ಲಿ ಪೈರುಗಳ ಮೇಲೆ ಓಡಾಟ ನಡೆಸಿ ಹಾಳು ಮಾಡುತ್ತಿವೆ. ಇದರಿಂದಾಗಿ ರೈತನಿಗೆ ಮುಂದೇನು.? ಎಂಬ ಪರಿಸ್ಥಿತಿ ಕಾಡುತ್ತಿದೆ. ಕಿರುಗೂರು ಪಂಚಾಯತಿ ವ್ಯಾಪ್ತಿಯಲ್ಲಿ ಅತಿ ಸಣ್ಣ ರೈತರು ಹೆಚ್ಚಾಗಿ ಭತ್ತದ ಗದ್ದೆಗಳನ್ನು ನಂಬಿ ಜೀವನ ಸುಧಾರಣೆ ಕಂಡು ಕೊಂಡವರು. ಯಾವುದೇ ಕಷ್ಟ ಕೊಂಡಿರುವ ಕಾಡು ಹಂದಿಗಳು ಕಾಫಿ ತೋಟದ ಬೆಳೆಗಳನ್ನು ಹಾಳು ಮಾಡುತ್ತಿವೆ. ಮುಂಜಾನೆಯ ವೇಳೆ ಗುಂಪು, ಗುಂಪಾಗಿ ಸಮೀಪದ ಭತ್ತದ ಗದ್ದೆಗಳಿಗೆ ಲಗ್ಗೆ ಹಿಡುವ ಇವುಗಳು ಬೆಳೆದು ನಿಂತ ಭತ್ತದ ಪೈರುಗಳನ್ನು ತಿಂದು ನಷ್ಟ ಮಾಡುತ್ತಿವೆ. ಅಲ್ಲದೇ ಭತ್ತದ ಪೈರು ಗದ್ದೆಯಲ್ಲಿ ಪೈರುಗಳ ಮೇಲೆ ಓಡಾಟ ನಡೆಸಿ ಹಾಳು ಮಾಡುತ್ತಿವೆ. ಇದರಿಂದಾಗಿ ರೈತನಿಗೆ ಮುಂದೇನು.? ಎಂಬ ಪರಿಸ್ಥಿತಿ ಕಾಡುತ್ತಿದೆ. ಕಿರುಗೂರು ಪಂಚಾಯತಿ ವ್ಯಾಪ್ತಿಯಲ್ಲಿ ಅತಿ ಸಣ್ಣ ರೈತರು ಹೆಚ್ಚಾಗಿ ಭತ್ತದ ಗದ್ದೆಗಳನ್ನು ನಂಬಿ ಜೀವನ ಸುಧಾರಣೆ ಕಂಡು ಕೊಂಡವರು. ಯಾವುದೇ ಕಷ್ಟ ಹಲವು ಕಾನೂನುಗಳು ಅಡ್ಡಿಯಾಗುತ್ತಿವೆ. ಒಟ್ಟಿನಲ್ಲಿ ಅತಿ ಸಣ್ಣ ರೈತರ ಕಷ್ಟಕ್ಕೆ ಸರ್ಕಾರ ಹಾಗೂ ಇಲಾಖೆ ಸಹಾಯಕ್ಕೆ ನಿಲ್ಲಬೇಕಾಗಿದೆ.
ಪರಿಹಾರದ ನಿರೀಕ್ಷೆ
ಮಳೆ, ಚಳಿಯನ್ನು ಲೆಕ್ಕಿಸದೆ ನಡು ರಾತ್ರಿ ಯ ವೇಳೆ ಭತ್ತದ ಗದ್ದೆಗಳಲ್ಲಿ ನಿದ್ರೆ ಬಿಟ್ಟು ಕಾಡು ಹಂದಿಗಳ ಕಾಟದಿಂದ ಪೈರನ್ನು ಕಾಪಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಕಣ್ಣು ತಪ್ಪಿಸಿ, ಪೈರುಗಳನ್ನು ತಿಂದು ಹಾಕುತ್ತಿವೆ. ಎಂಟು ಎಕರೆ ಜಾಗದಲ್ಲಿ ಭತ್ತದ ಕೃಷಿ ಮಾಡುತ್ತೇವೆ.
ಎರಡು ಬಾರಿ ಬಿತ್ತನೆ ಮಾಡಿದ್ದೇವೆ. ಹಿರಿಯರು ನಡೆಸಿ ಕೊಂಡು ಬಂದಿರುವ ಭೂಮಿಯನ್ನು ಪಾಳು ಬಿಡಬಾರದು ಎಂಬ ಉದ್ದೇಶ ದಿಂದ ಭತ್ತದ ಕೃಷಿ ಮುಂದುವರಿ ಸುತ್ತಾ ಇದ್ದೇವೆ. ಕಾರ್ಮಿಕರ ವೇತನ, ರಸಗೊಬ್ಬರಗಳ ಬೆಲೆ ಹೆಚ್ಚಳದಿಂದ ಕಷ್ಟ ಅನುಭವಿಸುತ್ತಿದ್ದೇವೆ. ಇದೀಗ ಕಾಡುಹಂದಿಗಳ ಕಾಟದಿಂದ ಬೆಳೆದು ನಿಂತ ಭತ್ತದ ಪೈರು ಹಾಳಾಗಿದೆ. ಇಲಾಖೆಯಿಂದ ಪರಿಹಾರ ನಿರೀಕ್ಷೆಯಲ್ಲಿದ್ದೇವೆ ಎಂದು ಚಿಕ್ಕಮುಂಡೂರಿನ ಕೃಷಿಕ ಎ.ಪಿ. ಮಂದಣ್ಣ ಅಸಹಾಯಕತೆ ತೋಡಿಕೊಂಡಿದ್ದಾರೆ.
ಎರಡು, ಮೂರು ಎಕರೆಯಲ್ಲಿ ಅತಿ ಸಣ್ಣ ರೈತರು ಭತ್ತದ ಕೃಷಿ ಮಾಡುತ್ತಿದ್ದಾರೆ. ಇಂತಹ ರೈತರಿಗೆ ಭತ್ತದ ಗದ್ದೆಗಳು ಹೊರತು ಪಡಿಸಿ ಬೇರೆಯಾವುದೆ ಭೂಮಿ, ಕಾಫಿ ತೋಟಗಳು ಇರುವುದಿಲ್ಲ. ಕೃಷಿ ಇಲಾಖೆಯಿಂದ ಸಿಗುವ ಭತ್ತದ ಬೀಜಗಳನ್ನು ಪಡೆದು ತಮ್ಮ ಭೂಮಿಯನ್ನು ಹದಗೊಳಿಸಿ ಬೀಜ ಬಿತ್ತನೆ ಮಾಡಿದ್ದಾರೆ. ಇದೀಗ ಕಾಡುಹಂದಿಗಳ ಉಪಟಳದಿಂದ ಒಂದು ಸುತ್ತು ಹಾಕಿದ ಬೀಜ ಬಿತ್ತಿದ ಭತ್ತದ ಪೈರುಗಳು ಹಾಳಾಗಿವೆ.ಮತ್ತೆ ಬೀಜ ಬಿತ್ತನೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ವಾಗಿದೆ. ಸರ್ಕಾರ ನೀಡುವ ಪರಿಹಾರ ಏನೇನೂ ಸಾಲದು,ಎಲ್ಲಾ ಸಮಯದಲ್ಲಿ ಭತ್ತ ಕೃಷಿಮಾಡಲು ಸಾಧ್ಯವಿಲ್ಲ. ನಿಗದಿತ ಸಮಯದಲ್ಲಿ ಭತ್ತದ ಕೃಷಿ ಮಾಡಬೇಕಾಗಿದೆ. ಇಲಾಖೆ ಈ ಬಗ್ಗೆ ಕ್ರಮವಹಿಸಿ ಅತಿ ಸಣ್ಣ ರೈತರ ರಕ್ಷಣೆಗೆ ನಿಲ್ಲಬೇಕು ಎಂದು ರೈತ ಮುಖಂಡ ಆಲೆಮಾಡ ಮಂಜುನಾಥ್ ಒತ್ತಾಯಿಸಿದ್ದಾರೆ.
- ಹೆಚ್.ಕೆ. ಜಗದೀಶ್