ಕುಶಾಲನಗರ, ಜು. ೭: ಕುಶಾಲನಗರ ನೂತನ ತಾಲೂಕು ಅಧಿಕೃತ ಉದ್ಘಾಟನೆ ಬೆನ್ನಲ್ಲೇ ಶಾಸಕ ಅಪ್ಪಚ್ಚು ರಂಜನ್ ತಾಲೂಕಿಗೆ ಅಗತ್ಯ ಇಲಾಖೆಗಳ ಕಚೇರಿಗಳನ್ನು ಒಳಗೊಂಡ ಮಿನಿ ವಿಧಾನ ಸೌಧ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಸಂಬAಧದಲ್ಲಿ ಕುಶಾಲನಗರದ ಪಟ್ಟಣದ ಮೂರು ಕಡೆ ಕಂದಾಯ ಅಧಿಕಾರಿಗಳೊಂದಿಗೆ ಶಾಸಕ ರಂಜನ್ ಸ್ಥಳ ಪರಿಶೀಲನೆ ನಡೆಸಿದರು.

ಪಟ್ಟಣದ ಹಾರಂಗಿ ಅಣೆಕಟ್ಟು ಕಟ್ಟಡ ಸಮುಚ್ಚಯ, ನಾಡಕಚೇರಿ ಹಾಗೂ ಮುಳ್ಳುಸೋಗೆ ಬಳಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ನೂತನ ತಾಲೂಕಿಗೆ ಅಗತ್ಯವಿರುವ ೨೬ ಇಲಾಖೆಗಳ ಕಚೆೆÃರಿಗಳನ್ನು ಒಂದೇ ಸೂರಿನಡಿ ಬರುವಂತೆ ಮಾಡಲು ಅಗತ್ಯ ಕಟ್ಟಡದ ಅವಶ್ಯಕತೆ ಇದ್ದು, ಪಟ್ಟಣದ ಮೂರು ಕಡೆ ಸರ್ಕಾರಿ ಖಾಲಿ ಜಾಗಗ ಳನ್ನು ಪರಿಶೀಲನೆ ಮಾಡಲಾಯಿತು ಎಂದು ಶಾಸಕ ರಂಜನ್ ತಿಳಿಸಿದ್ದಾರೆ.

ಈ ಸಂದರ್ಭ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಕುಶಾಲನಗರ ನೂತನ ತಾಲೂಕಿನ ತಹಶೀಲ್ದಾರ್ ಪ್ರಕಾಶ್, ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಮತ್ತಿತರರು, ಇದ್ದರು.