ಸೋಮವಾರಪೇಟೆ: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸಂಬAಧಿತ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸೀಲ್ಡೌನ್ ಆಗಿದ್ದ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್ಗಳನ್ನು ಶಾಸಕ ಅಪ್ಪಚ್ಚು ರಂಜನ್ ವಿತರಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೫ ಮಂದಿ ಆಶಾ ಹಾಗೂ ಐವರು ಅಂಗನವಾಡಿ ಕಾರ್ಯಕರ್ತೆಯರು, ಸೀಲ್ಡೌನ್ ಆಗಿದ್ದ ೧೫ ಕುಟುಂಬಗಳಿಗೆ ಕಿಟ್ಗಳನ್ನು ನೀಡಲಾಯಿತು. ಈ ಸಂದರ್ಭ ಬಿಜೆಪಿ ಮಹಿಳಾ ಮೋರ್ಚಾದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಕಾರ್ಯದರ್ಶಿ ತಂಗಮ್ಮ, ಪದಾಧಿಕಾರಿ ಇಂದಿರಾ ಮೋನಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಗ್ರಾ.ಪಂ. ಅಧ್ಯಕ್ಷೆ ಲಕ್ಷಿö್ಮÃ ಪಾಂಡಿಯನ್, ಸದಸ್ಯರುಗಳು ಉಪಸ್ಥಿತರಿದ್ದರು.ಸೋಮವಾರಪೇಟೆ: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸಂಬAಧಿತ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸೀಲ್ಡೌನ್ ಆಗಿದ್ದ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್ಗಳನ್ನು ಶಾಸಕ ಅಪ್ಪಚ್ಚು ರಂಜನ್ ವಿತರಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೫ ಮಂದಿ ಆಶಾ ಹಾಗೂ ಐವರು ಅಂಗನವಾಡಿ ಕಾರ್ಯಕರ್ತೆಯರು, ಸೀಲ್ಡೌನ್ ಆಗಿದ್ದ ೧೫ ಕುಟುಂಬಗಳಿಗೆ ಕಿಟ್ಗಳನ್ನು ನೀಡಲಾಯಿತು. ಈ ಸಂದರ್ಭ ಬಿಜೆಪಿ ಮಹಿಳಾ ಮೋರ್ಚಾದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಕಾರ್ಯದರ್ಶಿ ತಂಗಮ್ಮ, ಪದಾಧಿಕಾರಿ ಇಂದಿರಾ ಮೋನಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಗ್ರಾ.ಪಂ. ಅಧ್ಯಕ್ಷೆ ಲಕ್ಷಿö್ಮÃ ಪಾಂಡಿಯನ್, ಸದಸ್ಯರುಗಳು ಉಪಸ್ಥಿತರಿದ್ದರು.ಶನಿವಾರಸಂತೆ: ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ೫ ಕೊರೊನಾ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಯೋಜನೆಯ ಕೊಡ್ಲಿಪೇಟೆ ವಲಯದ ನೂತನ ಮೇಲ್ವಿಚಾರಕ ಭರತ್ಕುಮಾರ್, ಎ ಒಕ್ಕೂಟದ ಅಧ್ಯಕ್ಷೆ ಭುವನೇಶ್ವರಿ, ಬಿ ಒಕ್ಕೂಟದ ಅಧ್ಯಕ್ಷೆ ಶಾಹಿನ್ ತಾಜ್, ಉಪಾಧ್ಯಕ್ಷೆ ಲಕ್ಷಿö್ಮÃ, ಸಹಕಾರ್ಯದರ್ಶಿ ಎಸ್.ಜಿ. ದಿವ್ಯಾ, ಸೇವಾ ಪ್ರತಿನಿಧಿಗಳಾದ ಶೋಭಾವತಿ, ಯಶೋದಾ, ಪ್ರಮೀಳಾ, ಮಾಲತಿ, ಗಿರಿಜಾ, ಫಲಾನುಭವಿಗಳಾದ ಸುಂದರಮ್ಮ, ಯಶೋದಾ, ತಂಗಮ್ಮ, ಸುಶೀಲಮ್ಮ, ನಬೀಸಮ್ಮ, ಮೈನಾ, ಪ್ರಮೀಳಾ ಹಾಜರಿದ್ದರು.ನಾಪೋಕ್ಲು: ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಕೆ.ಸಿ.ಎಫ್. ಅಂತರ ರಾಷ್ಟಿçÃಯ ಸಂಘಟನೆಯ ಪ್ರಯೋಜಕತ್ವದಲ್ಲಿ ಸುಮಾರು ೧೦೦ ಮಂದಿ ಕೊರೊನಾ ವಾರಿಯರ್ಸ್ಗೆ ಆಹಾರದ ಕಿಟ್ಗಳನ್ನು ಕೊಟ್ಟಮುಡಿಯ ಮರ್ಕಝಲ್ ಹಿದಾಯ ಸಭಾಂಗಣದಲ್ಲಿ ವಿತರಿಸಲಾಯಿತು. ನಂತರ ನಡೆದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೈಯದ್ ಕಿಲ್ಲೂರ್ ತಂಙಳ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಜಮಾಯಲ್ ಉಲಾಮ ಅಧ್ಯಕ್ಷ ಮಹವÆದ್ ಮುಸ್ಲಿಯಾರ್, ಕಾರ್ಯದರ್ಶಿ ಮಹಮ್ಮದ್ ಹಾಜಿ, ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಅಬ್ದುಲ್ ಸಖಾಫಿ, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಶಾಫಿ ಸಅದಿ, ಇಸಾಬ ರಾಜ್ಯ ಸಂಚಾಲಕ ಉಮ್ಮರ್ ಸಖಾಫಿ, ಜಿಲ್ಲಾ ಕಾರ್ಯಾಧ್ಯಕ್ಷ ಯೂಸುಪ್ ಕೊಂಡAಗೇರಿ, ಜಿಲ್ಲಾ ಸಂಚಾಲಕ ಹಫೀಳ್ ಸಹದಿ, ಇಸ್ಮಾಯಿಲ್ ಸಖಾಫಿ, ವಕೀಲ ಕುಂಞ ಅಬ್ದುಲ್ಲ, ಕೋಶಾಧಿಕಾರಿ ಲತೀಫ್ ಸುಂಟಿಕೊಪ್ಪ, ಕಾರ್ಯದರ್ಶಿ ಹಮೀದ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಹೆಚ್. ಮೈದುಕುಟ್ಟಿ ಹಾಜಿ, ಸಿ.ಕೆ. ಅಹಮ್ಮದ್ ಹಾಜಿ, ಮುಸ್ಲಿಂ ಜಮಾಅತ್ನ ಜಿಲ್ಲಾ ನಾಯಕರು, ತಾಲೂಕು ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಸುAಟಿಕೊಪ್ಪ: ಬಸವನಹಳ್ಳಿ, ಮಾಲ್ದಾರೆ ವ್ಯಾಪ್ತಿಯ ಚೊಟ್ಟೆಪಾರೆ ಹಾಡಿ, ಚಿಕ್ಕರೇಷ್ಮೆ ಹಾಡಿ ಮತ್ತು ಕೆಸವಿನಕೆರೆ ಹಾಡಿಯ ೧೫೦ ಗಿರಿಜನ ಕುಟುಂಬಕ್ಕೆ ಸೆಲ್ಕೋ ಫೌಂಡೇಶನ್ ಮತ್ತು ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಬೆಳಕು ಫೌಂಡೇಶನ್ ಸಹಯೋಗದೊಂದಿಗೆ ಹಾಡಿ ನಿವಾಸಿಗಳಿಗೆ ಆಹಾರ ಕಿಟ್, ಬಟ್ಟೆ ಮತ್ತು ಹೊದಿಕೆಗಳನ್ನು ವಿತರಿಸಲಾಯಿತು.
ಸಂಸ್ಥೆಯ ವ್ಯವಸ್ಥಾಪಕ ಸದಾಶಿವ ಸಂಸ್ಥೆಯ ಇತರ ಸದಸ್ಯರು ಗ್ರಾಮದ ಹಾಡಿಗಳಿಗೆ ತೆರಳಿ ಕಿಟ್ ವಿತರಿಸಿದರು. ಮಹಿಳಾ ಮುಖಂಡರಾದ ಮುತ್ತಮ್ಮ ಮತ್ತಿತರರು ಇದ್ದರು.