ಮಡಿಕೇರಿ, ಜು. ೭: ಮಡಿಕೇರಿ ತಾಲೂಕು ಡಿವೈಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯವರೇ ಆದ ಬಾರಿಕೆ ದಿನೇಶ್ ಕುಮಾರ್ ಅವರನ್ನು ಬಡ್ತಿಯೊಂದಿಗೆ ಜಿಲ್ಲೆಯಿಂದ ವರ್ಗಾವಣೆ ಮಾಡಲಾಗಿದೆ. ಅವರನ್ನು ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರನ್ನಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ದಿನೇಶ್ ಅವರು ಕಳೆದ ೧ ವರ್ಷ ಒಂಭತ್ತು ತಿಂಗಳುಗಳ ಕಾಲ ಮಡಿಕೇರಿ ಡಿವೈಎಸ್‌ಪಿ ಆಗಿ ಕಾರ್ಯನಿರ್ವಹಿಸಿದ್ದರು.