ಚೆಂಬು: ಜನಸಂಘ ಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿರವರ ಬಲಿದಾನದ ಸ್ಮರಣೆಯ ಹಿನ್ನೆಲೆಯಲ್ಲಿ, ಮಡಿಕೇರಿ ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಚೆಂಬು ಗ್ರಾಮದಲ್ಲಿ ವೃಕ್ಷಾರೋಹಣ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಂತ್ ಊರುಬೈಲು, ಸದಸ್ಯ ಯಶವಂತ ದೇವರಗುಂಡ, ಬೂತ್ ಅಧ್ಯಕ್ಷರುಗಳಾದ ದಿನೇಶ್ ಸಣ್ಣಮನೆ, ಶ್ರೀ ರಾಮಮೂರ್ತಿ ಉಂಬಳೆ, ಲ್ಯಾಂಪ್ಸ್ ಸೊಸೈಟಿ ಉಪಾಧ್ಯಕ್ಷ ವಸಂತ್ ಕೆ.ಸಿ. ಮತ್ತು ಬಿಜೆಪಿ ಸದಸ್ಯರುಗಳು ಇದ್ದರು.ಚೆಂಬು: ಜನಸಂಘ ಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿರವರ ಬಲಿದಾನದ ಸ್ಮರಣೆಯ ಹಿನ್ನೆಲೆಯಲ್ಲಿ, ಮಡಿಕೇರಿ ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಚೆಂಬು ಗ್ರಾಮದಲ್ಲಿ ವೃಕ್ಷಾರೋಹಣ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಂತ್ ಊರುಬೈಲು, ಸದಸ್ಯ ಯಶವಂತ ದೇವರಗುಂಡ, ಬೂತ್ ಅಧ್ಯಕ್ಷರುಗಳಾದ ದಿನೇಶ್ ಸಣ್ಣಮನೆ, ಶ್ರೀ ರಾಮಮೂರ್ತಿ ಉಂಬಳೆ, ಲ್ಯಾಂಪ್ಸ್ ಸೊಸೈಟಿ ಉಪಾಧ್ಯಕ್ಷ ವಸಂತ್ ಕೆ.ಸಿ. ಮತ್ತು ಬಿಜೆಪಿ ಸದಸ್ಯರುಗಳು ಇದ್ದರು.ಸಂಪಾಜೆ: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ ಊರುಬೈಲು ವತಿಯಿಂದ ಸಂಪಾಜೆಯಲ್ಲಿ ವನಮಹೋತ್ಸವ ಆಚರಣೆ ಮಾಡಲಾಯಿತು. ಸಂಪಾಜೆ ಗೇಟ್ ಬಳಿಯ ಮುಖ್ಯ ರಸ್ತೆಯ ಅಂಚಿನಲ್ಲಿ ಕಳೆನಾಶ ಮಾಡಿ, ಪ್ಲಾಸ್ಟಿಕ್ ತ್ಯಾಜ್ಯ ತೆರವು ಮಾಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಆ ಬಳಿಕ ರಸ್ತೆಯ ಅಂಚಿನುದ್ದಕ್ಕೂ ಸಸಿಗಳನ್ನು ನೆಟ್ಟು ರಕ್ಷಣಾ ಬೇಲಿ ಅಳವಡಿಸುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಈ ಕಾರ್ಯಕ್ರಮದ ನೇತೃತ್ವವನ್ನು ಸೊಸೈಟಿ ಅಧ್ಯಕ್ಷ ಅನಂತ್ ಊರುಬೈಲು, ಸಂಘದ ಅಧ್ಯಕ್ಷ ದಿನೇಶ್ ಸಣ್ಣಮನೆ, ಕಾರ್ಯದರ್ಶಿ ಯತೀಶ್ ಹನಿಯಡ್ಕ ವಹಿಸಿದ್ದರು.

ಈ ಸಂದರ್ಭ ಸೊಸೈಟಿ ಉಪಾಧ್ಯಕ್ಷ ರಾಜಾರಾಮ ಕಳಗಿ, ಸಿಇಓ ಆನಂದ ಬಿ.ಕೆ., ಸೊಸೈಟಿ ನಿರ್ದೇಶಕರು, ಸಿಬ್ಬಂದಿಗಳು, ಭಗವಾನ್ ಸಂಘದ ಸದಸ್ಯರು ಭಾಗವಹಿಸಿದ್ದರು.