ಮುಳ್ಳೂರು, ಜು. ೬: ಸೋಮವಾರಪೇಟೆ ತಾಲೂಕಿನ ಆಲೂರು-ಸಿದ್ದಾಪುರ ಕೋವಿಡ್ ಕೇರ್ ಸೆಂಟರ್ಗೆ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮೋಹನ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಕೃಷ್ಣ ರೈ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ಅಧಿಕಾರಿಗಳು ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದರು. ಸೋಂಕಿತರು ಕೊಠಡಿಯೊಳಗೆ ಚಿಕಿತ್ಸೆ ಪಡೆಯಬೇಕು, ಮಾಸ್ಕ್ ಧರಿಸು ತ್ತಿರಬೇಕು, ಕೋವಿಡ್ ಸೆಂಟರ್ ಹಾಲ್ ಹೊರತುಪಡಿಸಿದಂತೆ ಹೊರಗಡೆಗೆ ಬಂದು ಆವರಣದ ಜಾಗದಲ್ಲಿ ಅಡ್ಡಾಡದಿರುವಂತೆ ಸೋಂಕಿತರಿಗೆ ತಿಳಿಸಿದರು. ಕೋವಿಡ್ ಸೆಂಟರ್ ಮುಳ್ಳೂರು, ಜು. ೬: ಸೋಮವಾರಪೇಟೆ ತಾಲೂಕಿನ ಆಲೂರು-ಸಿದ್ದಾಪುರ ಕೋವಿಡ್ ಕೇರ್ ಸೆಂಟರ್ಗೆ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮೋಹನ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಕೃಷ್ಣ ರೈ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ಅಧಿಕಾರಿಗಳು ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದರು. ಸೋಂಕಿತರು ಕೊಠಡಿಯೊಳಗೆ ಚಿಕಿತ್ಸೆ ಪಡೆಯಬೇಕು, ಮಾಸ್ಕ್ ಧರಿಸು ತ್ತಿರಬೇಕು, ಕೋವಿಡ್ ಸೆಂಟರ್ ಹಾಲ್ ಹೊರತುಪಡಿಸಿದಂತೆ ಹೊರಗಡೆಗೆ ಬಂದು ಆವರಣದ ಜಾಗದಲ್ಲಿ ಅಡ್ಡಾಡದಿರುವಂತೆ ಸೋಂಕಿತರಿಗೆ ತಿಳಿಸಿದರು. ಕೋವಿಡ್ ಸೆಂಟರ್ ಶುಚಿತ್ವ ನೋಡಿಕೊಂಡು ಆಹಾರ ತಯಾರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್, ಕೋವಿಡ್ ಕೇರ್ ಸೆಂಟರ್ ವೈದ್ಯಾಧಿಕಾರಿ ಡಾ. ಪೂಜಿತ್, ಬಿಸಿಎಂ ವಸತಿ ನಿಲಯ ವಾರ್ಡನ್, ರಜನಿಕಾಂತ್, ಗ್ರಾ.ಪಂ. ಅಧ್ಯಕ್ಷ ಮೋಹನ್, ಉಪಾಧ್ಯಕ್ಷೆ ದಮಯಂತಿ ಕರುಂಬಯ್ಯ, ಸದಸ್ಯ ಪಿ.ಎಸ್. ಸತೀಶ್, ಕಿರಣ್, ಪಿಡಿಒ ಪೂರ್ಣಿಮಾ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಆಶಾ ಕಾರ್ಯಕರ್ತೆ ಶುಭ ಮುಂತಾದವರು ಇದ್ದರು.