ಚೆಟ್ಟಳ್ಳಿ, ಜು. ೬: ಕೋವಿಡ್ ನಿಯಂತ್ರಣಕ್ಕಾಗಿ ೧೫ ತಿಂಗಳಿನಿAದ ಅವಿರತರಾಗಿ ಕಾರ್ಯನಿರ್ವಹಿಸು ತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಆರೋಗ್ಯವಂತ ದೇಶ ನಿರ್ಮಾಣಕ್ಕಾಗಿ ಪಣತೊಟ್ಟಿರುವುದು ಮಹತ್ವದ ಕಾರ್ಯ ಎಂದು ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ. ಧನಂಜಯ ಶ್ಲಾಘಿಸಿದ್ದಾರೆ.
ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಲಸಿಕಾ ಕೇಂದ್ರದಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಚೆಟ್ಟಳ್ಳಿ ವರ್ತಕರ ಸಂಘದಿAದ ಆಯೋಜಿತ ವೈದ್ಯಕೀಯ ಸಮರ ಸೈನಿಕರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಲಸಿಕೆ ನೀಡಿಕೆ ಅಭಿಯಾನ ಉದ್ಘಾಟಿಸಿ ಮಾತನಾಡಿದ ಎಂ. ಧನಂಜಯ, ಕಳೆದ ವರ್ಷವೂ ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ವ್ಯವಸ್ಥಿತವಾಗಿ ಮಡಿಕೇರಿಯಲ್ಲಿ ಸಂತೆ ಮಾರುಕಟ್ಟೆ ವ್ಯವಸ್ಥೆ ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿ ಕಾರ್ಯ ಕೈಗೊಂಡಿತ್ತು. ಈ ವರ್ಷವೂ ವರ್ತಕರ ಸಂಘವು ಹಿರಿಯ ಮತ್ತು ವಿಶೇಷಚೇತನ ನಾಗರಿಕರಿಗೆ ಲಸಿಕೆ ನೀಡಲು ನೆರವು ನೀಡುವ ವಿಶೇಷ ಅಭಿಯಾನ ಕೈಗೊಂಡಿದೆ. ವರ್ತಕರೂ ಜನರ ಸಂಪರ್ಕಕ್ಕೆ ಸುಲಭವಾಗಿ ಬರುವುದರಿಂದಾಗಿ ಕೋವಿಡ್ ಸಂದರ್ಭ ಆತಂಕದಲ್ಲಿಯೇ ಕಾರ್ಯನಿರ್ವಹಿಸಬೇಕಾಗಿದೆ. ಹೀಗಿದ್ದರೂ ವರ್ತಕರು ತಮ್ಮ ಗ್ರಾಹಕರಾದ ಜನಸಮುದಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು. ವಿಶ್ರಾಂತಿ ಪಡೆಯದೇ ಕೋವಿಡ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದುಡಿಯುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರನ್ನು ಜನ ಸದಾ ಸ್ಮರಿಸುವಂತಾಗಬೇಕೆAದೂ ಧನಂಜಯ್ ಕರೆ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಸ್ವಸ್ಥ, ಮತ್ತು ಆರೋಗ್ಯವಂತ ಸಮಾಜಕ್ಕಾಗಿ ಸರ್ಕಾರದ ಆರೋಗ್ಯ ಇಲಾಖೆ ಮಹತ್ವದ ಪಾತ್ರವಹಿಸಿದೆ. ರೋಟರಿಯಂತಹ ಸಂಘ-ಸAಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯತೆ ಕಾಪಾಡಿಕೊಂಡು ಕೋವಿಡ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕಾರ್ಯಯೋಜನೆ ಕೈಗೊಳ್ಳುತ್ತಿದೆ. ರೋಟರಿ ಮಿಸ್ಟಿ ಹಿಲ್ಸ್ ಕೂಡ ಆರೋಗ್ಯ ಇಲಾಖೆಯೊಂದಿಗೆ ಮುಂದಿನ ದಿನಗಳಲ್ಲಿ ಕೈಜೋಡಿಸಿ ಲಸಿಕೆ ಅಭಿಯಾನಕ್ಕೆ ಸಹಕಾರ ನೀಡಲಿದೆ ಎಂದರು.
ರೋಟರಿ ಸಂಸ್ಥೆಯ ಸಹಾಯಕ ರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ಲಸಿಕೆ ನೀಡಿಕೆಯಲ್ಲಿ ಕೊಡಗು ಜಿಲ್ಲೆ ಗಣನೀಯ ಸಾಧನೆ ಮಾಡಿದೆ. ೬೦ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆಯಲ್ಲಿ ಜಿಲ್ಲೆಯ ಸಾಧನೆ ಶೇ. ೧೧೦ ರ ಮೂಲಕ ಗಮನಾರ್ಹ ವಾಗಿದೆ. ಜಿಲ್ಲೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದ ಜನತೆ ಇದೀಗ ಸಾಲುಗಟ್ಟಿ ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹ ತೋರಿರುವುದು ಮಹತ್ವದ ಬೆಳವಣಿಗೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ದೇಶದಲ್ಲಿ ಲಸಿಕೆ ಉತ್ಪಾದನೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ತಲೆದೋರಿರುವ ಲಸಿಕೆ ಕೊರತೆ ಶೀಘ್ರದಲ್ಲಿಯೇ ಬಗೆಹರಿಯುವ ಭರವಸೆ ಇದೆ. ಗ್ರಾಮೀಣ ಜನತೆಗೆ ಲಸಿಕೆ ದೊರಕಿಸುವ ನಿಟ್ಟಿನಲ್ಲಿ ಜಿಲ್ಲೆಯ ೯ ರೋಟರಿ ಸಂಸ್ಥೆಗಳು ಕೂಡ ವಿವಿಧ ಕಾರ್ಯಕ್ರಮಗಳನ್ನು ಅಭಿಯಾನದಂತೆ ಹಮ್ಮಿಕೊಂಡಿದೆ ಎಂದರು.
ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿ ಡಾ. ಗೌತಮ್ ಮಾತನಾಡಿದರು. ರೋಟರಿ ವಲಯ ಸೇನಾನಿ ಎಂ.ಆರ್. ಜಗದೀಶ್ ಪ್ರಶಾಂತ್, ಚೆಟ್ಟಳ್ಳಿ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಬಾಬು, ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತೇಜಸ್ವಿನಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಕುಮಾರ್, ಚೆಟ್ಟಳ್ಳಿ ವರ್ತಕರ ಸಂಘದ ಸಲಹೆಗಾರ ಇಸ್ಮಾಯಿಲ್, ರೇಮಂಡ್ ಸೆರಾವೋ, ಪಿ.ಎಸ್. ರವಿಚಂದ್ರ, ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ, ವೈದ್ಯಕೀಯ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿದ್ದರು.