ಮಡಿಕೇರಿ, ಜು. ೬: ಕೊಡಗು ಜಿಲ್ಲೆಯ ಕುಶಾಲನಗರವು ನೂತನ ತಾಲೂಕು ಕೇಂದ್ರವಾಗಿ ಮಂಗಳವಾರ ಅಸ್ತಿತ್ವಕ್ಕೆ ಬಂದಿದೆ. ಕಂದಾಯ ಸಚಿವ ಆರ್. ಅಶೋಕ, ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಿದರು. ಜೊತೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಇತರರು ಕುಶಾಲನಗರ ನೂತನ ತಾಲೂಕು ಅಸ್ತಿತ್ವಕ್ಕೆ ಚಾಲನೆ ನೀಡಿದರು.
ಜೊತೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಇತರರು ಕುಶಾಲನಗರ ನೂತನ ತಾಲೂಕು ಅಸ್ತಿತ್ವಕ್ಕೆ ಚಾಲನೆ ನೀಡಿದರು.
ಬಂದು ವಿನಂತಿಸಿದ್ದಾರೆ. ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಕಾಳಜಿಯಿಂದ ಕುಶಾಲನಗರ ತಾಲೂಕು ಕೇಂದ್ರವಾಗಿದೆ ಎಂದು ಕಂದಾಯ ಸಚಿವರು ನುಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಪೊನ್ನಂಪೇಟೆ ಮತ್ತು ಕುಶಾಲನಗರ ನೂತನ ತಾಲೂಕು ಕೇಂದ್ರವಾಗಬೇಕು ಎಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಇಂದು ಕುಶಾಲನಗರ ತಾಲೂಕು ಅಸ್ತಿತ್ವಕ್ಕೆ ಬಂದಿದೆ ಎಂದರು.
ತಾಲೂಕು ಕೇಂದ್ರದಲ್ಲಿ ಗ್ರೇಡ್-೧ ತಹಶೀಲ್ದಾರರು ಸೇರಿದಂತೆ ಒಟ್ಟು ೧೨ ಹುದ್ದೆಗಳನ್ನು (ಮೊದಲ ಪುಟದಿಂದ) ಭರ್ತಿ ಮಾಡಲಾಗಿದೆ. ಜೊತೆಗೆ ೫೦ ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಸರ್ಕಾರ ೨೦೨೦-೨೧ ನೇ ಸಾಲಿಗೆ ವಿಪತ್ತು ನಿರ್ವಹಣೆಗೆ, ಬೆಳೆ ಹಾನಿ ಪರಿಹಾರಕ್ಕೆ, ಕೋವಿಡ್ ನಿರ್ವಹಣೆಗಾಗಿ ಹೀಗೆ ಹಲವು ವಿಪತ್ತನ್ನು ಎದುರಿಸಲು ಈ ಹಿಂದೆ ರೂ. ೧೩೨ ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು. ಇದೀಗ ಜಿಲ್ಲಾಧಿಕಾರಿ ಅಕೌಂಟ್ನಲ್ಲಿ ರೂ. ೧೦೬ ಕೋಟಿಯಿದೆ ಎಂದರು.
ಕುಶಾಲನಗರ ತಾಲೂಕು ಅಭಿವೃದ್ಧಿಗೆ ಸಂಬAಧಿಸಿದAತೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹಂತ ಹಂತವಾಗಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ಮಿನಿ ವಿಧಾನ ಸೌಧ
ಕುಶಾಲನಗರ ನೂತನ ತಾಲೂಕು ಉದ್ಘಾಟನಾ ಸಂದರ್ಭ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಕುಶಾಲನಗರ ಸುಂಟಿಕೊಪ್ಪ ಹೋಬಳಿ ಅಧಿಕ ಜನಸಂಖ್ಯೆ ಹೊಂದಿದ್ದು, ತಾಲೂಕು ಘೋಷಣೆಯಾಗಿದ್ದು ಸಂತಸದ ವಿಷಯ ಎಂದರಲ್ಲದೆ, ಎರಡು ಹೋಬಳಿಗಳಲ್ಲಿ ಅತೀ ಹೆಚ್ಚಿನ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುತ್ತಿದೆ, ನೂತನ ತಾಲೂಕು ಮೂಲಕ ಜನರಿಗೆ ಉತ್ತಮ ಆಡಳಿತ ನೀಡಲು ಸಾದ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕು ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಹಾಗೂ ಅಗತ್ಯವಿರುವ ೨೬ ಇಲಾಖೆಗಳ ಕಾರ್ಯ ನಿರ್ವಹಿಸಲು ಮಿನಿ ವಿಧಾನ ಸೌಧ ಕಟ್ಟಡದ ಅವಶ್ಯಕತೆ ಇದೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಅಶೋಕ್ ಅವರು ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚಿಸಿ ಪರಿಶೀಲಿಸಲಾಗುತ್ತದೆ ಎಂದು ಭರವಸೆಯಿತ್ತರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು ಮೈಸೂರು ಲೋಕಸಭಾ ಕ್ಷೇತ್ರ ಸಂಸದ ಪ್ರತಾಪ್ ಸಿಂಹ ಮಾತನಾಡಿ ಅತೀ ಶೀಘ್ರದಲ್ಲಿ ಬೆಳವಣಿಗೆ ಕಂಡ ಕುಶಾಲನಗರ ಅಭಿವೃದ್ಧಿಯತ್ತ ಸರ್ಕಾರ ಚಿಂತನೆ ಹರಿಸಿ ನೂತನ ತಾಲೂಕು ಘೋಷಣೆ ಮಾಡಿದೆ. ಕಂದಾಯ ಸಚಿವ ಆರ್ ಅಶೋಕ, ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ ಅವರ ಶ್ರಮ ಇದರಲ್ಲಿ ಅಡಗಿದೆ ಎಂದರಲ್ಲದೇ, ರಾಜ್ಯ ಸರ್ಕಾರದ ಡಿಸಿ ನಡೆ ಹಳ್ಳಿಕಡೆಗೆ ಎಂಬ ಕಾಳಜಿಯ ಯೋಜನೆ ಎಲ್ಲರ ಮೆಚ್ಚುಗೆ ಪಡೆದಿದೆ ಎಂದರು. ಕುಶಾಲನಗರ ತಾಲೂಕು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪೊನ್ನಂಪೇಟೆ, ಕುಶಾಲನಗರ ತಾಲೂಕು ರಚನೆಗೆ ನಿರಂತರ ಹೋರಾಟಗಳು ನಡೆದಿರುವ ಬಗ್ಗೆ ಸ್ಮರಿಸಿದರು. ಅಧಿಕಾರಿಗಳ ನೇಮಕ ಮಾಡುವುದರೊಂದಿಗೆ ಉತ್ತಮ ಆಡಳಿತ ಜನರಿಗೆ ದೊರೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ತಹಶೀಲ್ದಾರ್ ಗೋವಿಂದ ರಾಜು, ಪ್ರಕಾಶ್ ಇತರರು ಇದ್ದರು.