ಕುಶಾಲನಗರ, ಜು. ೬: ಸತತವಾದ ೨೧ ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ನನಸಾದ ಕುಶಾಲನಗರ ತಾಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಎರಡು ರಾಷ್ಟಿçÃಯ ಪಕ್ಷಗಳಿಗೆ ಸೇರಿದ ಕಾರ್ಯಕರ್ತರು ಹಾಗೂ ಮುಖಂಡರ "ನಾನು" ಎಂಬ ಅಹಂ ಪ್ರದರ್ಶನ ಸುಂದರ ಕಾರ್ಯಕ್ರಮವನ್ನು ಕೇವಲ ೨೧ ನಿಮಿಷಗಳಲ್ಲಿ ವಿರೂಪಗೊಳಿಸಿತು.
ಅದು ಹೇಗಾಯಿತು ?
ದಿಢೀರನೆ ಆಯೋಜನೆಗೊಂಡ ರಾಜ್ಯ ಕಂದಾಯ ಸಚಿವರ ಪ್ರವಾಸ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಕುಶಾಲನಗರ ತಾಲೂಕು ಉದ್ಘಾಟನೆಗೆಂದು ಬಳಸಿಕೊಳ್ಳಲಾಯಿತು.
ಅದರಂತೆ ಮಂಗಳವಾರ ಮಧ್ಯಾಹ್ನ ೧ ಗಂಟೆಗೆ ಎಂದು ನಿಗದಿಯಾದ ಕಾರ್ಯಕ್ರಮ ಆರಂಭವಾದದ್ದೇ ಎರಡು ಗಂಟೆಗೆ.
ಮೊದಲು ಶಾಸಕ ರಂಜನ್ ನಂತರ ಸಂಸದ ಪ್ರತಾಪ್ ಸಿಂಹ ಮಾತನಾಡಿದರು. ಇವರಿಬ್ಬರೂ ಕೂಡ ತಮ್ಮ ಭಾಷಣದಲ್ಲಿ ಕುಶಾಲನಗರ ತಾಲೂಕು ಹೋರಾಟಗಾರರನ್ನು ಸ್ಮರಿಸಲೂ ಇಲ್ಲ. ಸ್ವಾಗತಿಸಲೂ ಇಲ್ಲ. ಅದಾದ ನಂತರ ಕಾಂಗ್ರೆಸ್ನ ಎಂಎಲ್ ಸಿ ವೀಣಾ ಅಚ್ಚಯ್ಯ ಅವರ ಸರದಿ ಬಂದಾಗ ತಾಲೂಕು ಹೋರಾಟಗಾರರನ್ನು ಸ್ಮರಿಸುವ ಮೂಲಕ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೆಸರನ್ನು ಪ್ರಸ್ತಾಪಿಸಿದರು. ಮುಂದುವರೆದು ಪೊನ್ನಂಪೇಟೆ ಹಾಗೂ ಕುಶಾಲನಗರ ಎರಡೂ ತಾಲೂಕುಗಳನ್ನು ಘೋಷಿಸಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಎಂದಾಗ, ಕಾರ್ಯಕ್ರಮದಲ್ಲಿದ್ದ ಕೆಲವು ಕಾಂಗ್ರೆಸ್ಸಿಗರ ಮುಖ ಅರಳಿ ಚಪ್ಪಾಳೆಯ ಸದ್ದು ಬಂತು. ಇದೇ ವೇಳೆ ವೀಣಾ ಅಚ್ಚಯ್ಯ ಅವರ ಮಾತುಗಳು ವೇದಿಕೆಯಲ್ಲಿದ್ದ ಶಾಸಕ ರಂಜನ್
(ಮೊದಲ ಪುಟದಿಂದ) ಅವರ ಮುಖಭಾವವನ್ನು ಬದಲಿಸಿತಾದರೂ ಶಾಸಕರು ಹಾಗೆಯೇ ಮೌನ ವಹಿಸಿದರು.
ನಂತರ ಕೊನೆಯಲ್ಲಿ ಕಂದಾಯ ಸಚಿವ ಅಶೋಕ ಮಾತನಾಡಲು ಎದ್ದು ನಿಂತಾಗ ವೇದಿಕೆಯತ್ತ ಧಾವಿಸಿದ ಕಾಂಗ್ರೆಸ್ ಮುಖಂಡರಾದ ಜಿ.ಪಂ. ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಸಚಿವರನ್ನು ಗುರಿ ಮಾಡಿ, ‘ಸರ್ ತಾಲೂಕು ರಚನೆಯಾಗಲು ನಾವು ಎಷ್ಟೆಲ್ಲಾ ಹೋರಾಟ ನಡೆಸಿದ್ದೇವೆ. ಸೌಜನ್ಯಕ್ಕೂ ನಿಮ್ಮ ಶಾಸಕರು ನಮ್ಮನ್ನು ಸ್ಮರಿಸಲಿಲ್ಲ . ಅಷ್ಟಕ್ಕೂ ತಾಲೂಕು ರಚನೆ ಆಗಿದ್ದು ಕುಮಾರಸ್ವಾಮಿ ಅವಧಿಯಲ್ಲಿ, ನಮ್ಮ ಸರ್ಕಾರವಿರುವಾಗ. ಹೋರಾಟ ಸಮಿತಿ ಅಧ್ಯಕ್ಷರಿಗೆ ಕನಿಷ್ಟ ಸ್ವಾಗತವೂ ದೊರಕಲಿಲ್ಲವಲ್ಲ ಸರ್. ಇದೇನಾ ಸರ್ ನಿಮ್ಮ ಸಂಸ್ಕೃತಿ, ಸಭ್ಯತೆ’ ಎಂದು ಪ್ರಶ್ನೆ ಮಾಡುತ್ತಿದ್ದಾಗ, ವೇದಿಕೆಯಲ್ಲಿದ್ದ ಶಾಸಕರು ಎದ್ದು ನಿಂತು ಚಂದ್ರಕಲಾ ಹೇಳಿಕೆಗಳಿಗೆ ಪ್ರತಿರೋಧಿಸಿ ‘‘ನಾವು ಮಾಡಿದ್ದು; ನಮ್ಮ ಸರ್ಕಾರ ಮಾಡಿದ್ದು ಹೋಗ್ರಿ ಕಂಡಿದ್ದೇನೆ ಕಾಂಗ್ರೆಸ್ ಸರ್ಕಾರ ಸಂದರ್ಭ ಯಾವುದೇ ಸಚಿವರು ನಿಮ್ಮ ಹೋರಾಟಕ್ಕೆ ಬೆಲೆ ನೀಡಿಲ್ಲ, ತಾಲೂಕು ರಚನೆ ಅಸಾಧÀ್ಯ ಎಂದು ಕೈಚೆಲ್ಲಿ ಕೂತಿದ್ದರು. ಬೆಳಗಾಂ ಅಧಿವೇಶನ ಸಂದರ್ಭ ನಿಮ್ಮ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿ ಕೊಟ್ಟಿದ್ದು ನಾನೇ’’ ಎಂದರಲ್ಲದೇ ‘ನಾಚಿಕೆಯಾಗಬೇಕು ನಿಮಗೆ’ ಎಂದು ಆವೇಶದಿಂದ ನುಡಿದಿದ್ದು ಕಂಡುಬAತು. ಅಷ್ಟರಲ್ಲಿ ಬಿಜೆಪಿ ಕಾರ್ಯಕರ್ತರ ಒಂದು ಗುಂಪು ವೇದಿಕೆಯತ್ತ ಧಾವಿಸಿ ಚಂದ್ರಕಲಾ ಹೇಳಿಕೆಯನ್ನು ಖಂಡಿಸಿ ಧಿಕ್ಕಾರ ಕೂಗಿದರು. ಈ ಸಂದರ್ಭ ವೇದಿಕೆಯ ಮುಂಭಾಗ ಸಮಾಧಾನವಾಗಿಯೇ ಕುಳಿತಿದ್ದ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ವೇದಿಕೆಯತ್ತ ಧಾವಿಸಿ ಬಂದು ಚಂದ್ರಕಲಾ ಅವರನ್ನು ಸಮಾಧಾನಪಡಿಸುತ್ತಿದ್ದಾಗ ಪರಸ್ಪರ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿಯೇ ಶುರುವಾಯಿತು. ಅಷ್ಟರಲ್ಲಿ ಪೊಲೀಸರು ಬಂದು ಎರಡೂ ಪಕ್ಷೀಯರ ಜಟಾಪಟಿಯನ್ನು ಶಮನಗೊಳಿಸುವ ಭರದಲ್ಲಿ ಕೇವಲ ಶಶಿಧರ್ ಅವರನ್ನೇ ಟಾರ್ಗೆಟ್ ಮಾಡಿ ಕಾರ್ಯಕ್ರಮದಿಂದ ಹೊರ ಹಾಕಲು ತಳ್ಳಿಕೊಂಡು ಹೋದರು. ಈ ಸಂದರ್ಭ ಪ್ರತಿರೋಧಿಸಿದ ಶಶಿಧರ್ ನಾನೇನು ಮಾಡಿದೆ ಎಂದು ನನ್ನನ್ನು ಹೊರ ಹಾಕ್ತಾ ಇದ್ದೀರಾ ? ನನ್ನನ್ನೇಕೆ ಕಾರ್ಯಕ್ರಮಕ್ಕೆ ಆಹ್ವಾನಿಸಿದಿರಿ ? ನಾನೇನು ಮಾತನಾಡಿದೆ ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದಾಗ ಡಿವೈಎಸ್ಪಿ ಹಾಗೂ ತಹಶೀಲ್ದಾರ್ ಅವರುಗಳು ಅವರನ್ನು ಹೊರ ಹಾಕ್ರಿ ಎಂದು ತಾಕೀತು ಮಾಡಿದಾಗ ಶಶಿಧರ್ ಅವರನ್ನು ಪೊಲೀಸರು ಹೊರ ಕಳಿಸಿದರು. ಆದರೂ ಜಗ್ಗದ ಶಶಿಧರ್, ಸಭಾಂಗಣದ ಹೊರಗೆ ನಿಂತು, ಅಷ್ಟಕ್ಕೂ ಒಬ್ಬ ಹೋರಾಟಗಾರನನ್ನು ನಡೆಸಿಕೊಂಡ ರೀತಿ ಇದೇನಾ? ಎಂದು ಪೋಲೀಸರ ವರ್ತನೆಯನ್ನು ಕಟುವಾಗಿ ಟೀಕಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್, ಕೆ.ಪಿ. ಚಂದ್ರಕಲಾ, ಅಬ್ದುಲ್ ಖಾದರ್, ಮುಸ್ತಾಫ ಶಶಿಧರ್ ಬೆಂಬಲಕ್ಕೆ ನಿಂತರು. ಎಂಎಲ್ಸಿ ವೀಣಾ ಅಚ್ಚಯ್ಯ ಕೂಡ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ವೇದಿಕೆಯಿಂದ ಹೊರಬಂದು ಶಶಿಧರ್ ಅವರನ್ನು ಸಮಾಧಾನಿಸಿದರು.
ಶಶಿಧರ್ ‘‘ನಾನು ಈ ಘಟನೆಯನ್ನು ಇಷ್ಟಕ್ಕೆ ಬಿಡಲ್ಲ. ಬಹು ದೊಡ್ಡ ಹೋರಾಟ ರೂಪಿಸುತ್ತೇನೆ. ಕಳೆದ ೨೧ ವರ್ಷಗಳಿಂದ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ತುಂಬಾ ಸೌಜನ್ಯದ ಹೋರಾಟ ನಡೆಸಿ ತಾಲೂಕನ್ನು ಪಡೆದುಕೊಂಡಿದ್ದೇವೆ. ನಮ್ಮ ಕಾರ್ಯಕ್ರಮ. ನಮ್ಮ ಕನಸಿನ ತಾಲೂಕು ಕಾರ್ಯಕ್ರಮ ಎಂದುಕೊAಡು ಸಂತಸದಿAದ ಬಂದಿದ್ದೆ. ಆದರೆ ಶಾಸಕರನ್ನು ಮೆಚ್ಚಿಸಲು ಪೊಲೀಸರು ನಡೆದುಕೊಂಡ ರೀತಿ ಇದೆಯಲ್ಲಾ ಅದನ್ನು ಕ್ಷಮಿಸಲಾಗದು ಸಮಾರಂಭಕ್ಕೆ ಆಹ್ವಾನ ನೀಡಿ ಬಂದವರನ್ನು ಪ್ರಶ್ನೆ ಮಾಡಿದಾಗ ಪೊಲೀಸರ ಮೂಲಕ ಹೊರ ಹಾಕಿಸಿದ್ದು ನಿಜಕ್ಕೂ ಖಂಡನೀಯ ಇದಕ್ಕೆ ಮುಂದೆ ಉತ್ತರ ನೀಡಲಿದ್ದೀವಿ. ಕ್ಷೇತ್ರ ಶಾಸಕರು, ಸರ್ಕಾರದ ಮಂತ್ರಿಗಳನ್ನು ಓಲೈಸಲು ಪೊಲೀಸರು ದಾದಾಗಿರಿ ಮಾಡಿದ್ದಾರೆ ಇದು ಒಳ್ಳೆ ಬೆಳವಣಿಗೆ ಅಲ್ಲ’’ ಎಂದರು.
ಕಾರ್ಯಕ್ರಮದಲ್ಲಿ ನಡೆದ ಗೊಂದಲದ ನಡುವೆ ಅತಿರೇಕಕ್ಕೆ ತೆರಳಿದ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ವೇದಿಕೆಯಿಂದ ಕೆಳಗಿಳಿದು ಗೊಂದಲ ಮಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಕಂಡುಬAತು. ಈ ಸಂದರ್ಭ ಪೊಲೀಸರು ವಿ.ಪಿ. ಶಶಿಧರ್ ಸೇರಿದಂತೆ ಹಲವರನ್ನು ಸಭಾಂಗಣದಿAದ ಹೊರಹಾಕಿದ ದೃಶ್ಯವೂ ಸಹ ಗೋಚರಿಸಿತು.
-ವರದಿ : ಕೆ.ಎಸ್. ಮೂರ್ತಿ, ಸಿಂಚು, ಕೆ.ಕೆ.ಎನ್. ಶೆಟ್ಟಿ