ಗೋಣಿಕೊಪ್ಪಲು, ಜು. ೭: ದ. ಕೊಡಗಿನಲ್ಲಿ ಕಳೆದ ಮೂರು ತಿಂಗಳಿನಿAದ ಕೋವಿಡ್ ನಿಯಮದ ಅನ್ವಯ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಾಹನÀದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪೊನ್ನಂಪೇಟೆ, ಕಾನೂರು ಜಂಕ್ಷನ್ನಲ್ಲಿ ದ. ಕೊಡಗಿನ ವಿವಿಧ ಭಾಗದಿಂದ ನಗರಕ್ಕೆ ಆಗಮಿಸುತ್ತಿದ್ದ ವಾಹನಗಳನ್ನು ತಡೆಹಿಡಿಯುವ ಮೂಲಕ ಕ್ರಮಕೈಗೊಂಡಿದ್ದರು.
ಆದರೂ ಏಕ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳÀÄ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಅಧಿಕವಾಗುತ್ತಿದ್ದವು. ಇದನ್ನು ನಿಯಂತ್ರಣ ಮಾಡಲು ಪೊಲೀಸರು ಬಿಸಿಲಿನ ತಾಪವನ್ನು ಲೆಕ್ಕಿಸದೆ ಟ್ರಾಫಿಕ್ ವ್ಯವಸ್ಥೆಯನ್ನು ಹತೋಟಿಗೆ ತರುವ ಮೂಲಕ ಸಂಚಾರ ವ್ಯವಸ್ಥೆ ನಿರ್ವಹಣೆ ಮಾಡುತ್ತಿದ್ದರು.
ಇದೀಗ ಪೊನ್ನಂಪೇಟೆ, ಕಾನೂರು ಜಂಕ್ಷನ್, ಹಳೆ ಕೋರ್ಟ್, ಜೋಡುಬೀಟಿ ಹಾಗೂ ಗೋಣಿಕೊಪ್ಪ ಬೈಪಾಸ್ ರಸ್ತೆಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ತೆರವುಗೊಳಿಸಿ, ನಾಗರಿಕರ ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಕಾರ್ಯವನ್ನು ನಾಗರಿಕರು ಪ್ರಶಂಸಿದ್ದಾರೆ. ಇದೀಗ ನಗರದಲ್ಲಿ ವಾಹನ ದಟ್ಟಣೆ ಕಳೆದ ಎರಡು ದಿನಗಳಿಂದ ಹೆಚ್ಚಾಗಿ ಕಂಡುಬರುತ್ತಿಲ್ಲ. ಪೊನ್ನಂಪೇಟೆ, ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಕಂಡುಬರುತ್ತಿದ್ದ ಸಾಲು, ಸಾಲು ವಾಹನಗಳು ಇದೀಗ ಕಂಡುಬರುತ್ತಿಲ್ಲ.
ವಾಹನಗಳನ್ನು ಬ್ಯಾರಿಕೇಡ್ ಇಟ್ಟು ತಡೆಯುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ಸಾಧಕ, ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಪೊಲೀಸರು ಬ್ಯಾರಿಕೇಡ್ ತೆರವು ಮಾಡಿದ್ದಾರೆ. ಇದೀಗ ದ. ಕೊಡಗಿನಿಂದ ವಾಣಿಜ್ಯ ಕೇಂದ್ರ ಗೋಣಿಕೊಪ್ಪಕ್ಕೆ ಸುಗಮ ಸಂಚಾರ ವ್ಯವಸ್ಥೆ ಆಗಿದೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಭಿಪ್ರಾಯಿಸಿದ್ದಾರೆ.
ರೈತರು, ಕೃಷಿಕರು, ಸಾರ್ವಜನಿಕರು ಸಾಧ್ಯವಾದಷ್ಟು ಮುಂಜಾನೆಯ ವೇಳೆ ತಮ್ಮ ವಾಹನದಲ್ಲಿ ತೆರಳಿ ಅಗತ್ಯ ಸಾಮಗ್ರಿಗಳನ್ನು ಖರೀದಿಸುವುದರಿಂದ ವಾಹನ ದಟ್ಟಣೆ ನಿಯಂತ್ರಣ ಮಾಡಬಹುದು ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದ್ದಾರೆ. ಮುಂಜಾನೆಯ ಆರು ಗಂಟೆಯಿAದ ಪೊನ್ನಂಪೇಟೆ, ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ನಿಂತು ವಾಹನ ದಟ್ಟಣೆ ನಿರ್ವಹಣೆ ಮಾಡುತ್ತಿದ್ದ ಪೊಲೀಸರು ಇದೀಗ ಕೊಂಚ ನಿರಾಳರಾಗಿದ್ದಾರೆ. ಜನರ ಓಡಾಟ ಕಡಿಮೆಯಾದ ಕಾರಣ ವ್ಯಾಪಾರ ವಹಿವಾಟು ಕೂಡ ಕುಂಠಿತಗೊAಡಿದೆ.
-ಹೆಚ್.ಕೆ. ಜಗದೀಶ್