ಮಡಿಕೇರಿ, ಜು. ೬: ಕೊಡಗು ಜಿಲ್ಲೆಯ ರೆಸಾರ್ಟ್, ಲಾಡ್ಜ್, ಹೋಂಸ್ಟೇಗಳಲ್ಲಿ ಪ್ರವಾಸಿಗರಿಗೆ ತಕ್ಷಣದಿಂದಲೇ ಶೇ. ೫೦ ರಷ್ಟು ತಂಗಲು ಅವಕಾಶ ಮಾಡಿಕೊಡಬೇಕೆಂದು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಇಲ್ಲಿನ ಶೇ. ೬೦ಕ್ಕೂ ಹೆಚ್ಚಿನ ಜನತೆ ಪ್ರವಾಸೋದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿದ್ದು ಕಾರ್ಮಿಕರು, ಬೀದಿಬದಿ ವ್ಯಾಪಾರಿ ಗಳು, ಜೇನು ಕೃಷಿಕರು, ರೈತರು ನೇರವಾಗಿ ಮತ್ತು ಪರೋಕ್ಷವಾಗಿ ಪ್ರವಾಸೋದ್ಯಮವನ್ನೇ ನಂಬಿದ್ದಾರೆ. ಸುಮಾರು ೧೬ ತಿಂಗಳುಗಳಿAದ ಕೋವಿಡ್-೧೯ರ ಮಾರಕ ಸೋಂಕಿನಿAದ ಪ್ರವಾಸೋದ್ಯಮವನ್ನೆ ನಂಬಿಕೊAಡಿರುವ ಮಾಲೀಕರು ಹಾಗೂ ಅವಲಂಬಿತರು ಸಂತ್ರಸ್ತರಾಗಿ ದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

೨೦೧೮ರ ಮಹಾಮಳೆಯಿಂದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ನೆಲಕಚ್ಚಿತ್ತು. ಇದರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೆಸಾರ್ಟ್, ಲಾಡ್ಜ್, ಹೊಟೇಲ್, ಹೋಂಸ್ಟೇ ಸಂಬAಧಿತ ಅಂಗಡಿ ಮುಂಗಟ್ಟುಗಳ ಮಾಲೀಕರು ಬ್ಯಾಂಕ್ ಸಾಲ, ಕೈ ಸಾಲ, ಬಡ್ಡಿ ಸಾಲ ಮತ್ತು ಇತರ ಮೂಲಗಳಿಂದ ಸಾಲ ಮಾಡಿ ಮಾಸಿಕ ಅಸಲು ಮತ್ತು ಬಡ್ಡಿಗಳನ್ನು ಪಾವತಿಸಲು ಪರಿತಪಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಅನ್‌ಲಾಕ್ ಮಾಡಬೇಕು ಎಂದು ಮನವಿ ಮಾಡಿದರು.

ವಿದ್ಯುತ್, ಫೋನ್, ಇಂಟರ್‌ನೆಟ್ ಬಿಲ್, ಕಾವಲುಗಾರರು, ಕನಿಷ್ಟ ಸಿಬ್ಬಂದಿಗಳ ವೇತನಗಳನ್ನು ಪಾವತಿಸಲು ಅಸಾಧ್ಯವಾಗಿದೆ. ಟ್ಯಾಕ್ಸಿ, ಜೀಪು, ಆಟೋ, ಕಾರುಗಳ ಸಾಲ, ಬಡ್ಡಿಗಳನ್ನು ಕಟ್ಟಲಾಗದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಕಾರ್ಮಿಕರು ನಿತ್ಯ ಜೀವನವನ್ನೂ ಸಾಗಿಸಲು ಕಷ್ಟಪಡುತ್ತಿದ್ದಾರೆ. ಕೋವಿಡ್-೧೯ ನಿಯಂತ್ರಣಕ್ಕೆ ಪ್ರವಾಸಿಗರ ನಿಷೇಧವೊಂದೇ ಪರಿಹಾರವಲ್ಲ. ಕಡ್ಡಾಯ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸ್, ಕನಿಷ್ಟ ದೈಹಿಕ ಅಂತರ ಮತ್ತು ಇತರ ಕ್ರಮಗಳಿಂದಲೂ ನಿಯಂತ್ರಿಸಬಹುದು. ಈ ಸಂಬAಧ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮಕೈಗೊಂಡು ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ಕಾಪಾಡ ಬೇಕೆಂದು ಮನವಿ ಮಾಡಿದರು.

ಸಲಹೆಗಾರ ಆರ್.ಕೆ. ಭಟ್ ಮಾತನಾಡಿ, ಪ್ರವಾಸೋದ್ಯಮವನ್ನು ಹೆಚ್ಚಾಗಿ ಮಧ್ಯಮ ವರ್ಗದವರು ಅವಲಂಬಿಸಿದ್ದು, ಅವರ ಪರಿಸ್ಥಿತಿಯ ಬಗ್ಗೆ ಸರಕಾರ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ. ವರದ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಜಂಟಿ ಕಾರ್ಯದರ್ಶಿ ಎಂ.ಬಿ. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಲಕ್ಷಿö್ಮನಾರಾಯಣ ಇದ್ದರು.