ಮಡಿಕೇರಿ, ಜು. ೬: ಎಸ್.ವೈ.ಎಸ್. ಜಿಲ್ಲಾ ಸಮಿತಿಯ ತುರ್ತು ಸೇವಾ ಸಮಿತಿಯನ್ನು ರಚಿಸಲಾಗಿದೆ ಎಂದು ಎಸ್.ವೈ.ಎಸ್. ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಿ.ಎಂ. ಹಮೀದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಗೂಗಲ್ ಮೀಟ್ನಲ್ಲಿ ಜಿಲ್ಲಾ ಸಮಿತಿಯ ಸಭೆಯನ್ನು ನಡೆಸಲಾಗಿದ್ದು, ಪ್ರಕೃತಿ ವಿಕೋಪ, ಪ್ರವಾಹ, ಕೋವಿಡ್ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ತುರ್ತು ಸೇವೆಗೆ ನೆರವಾಗುವ ಮೂಲಕ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮಿತಿಯ ಪದಾಧಿಕಾರಿಗಳನ್ನೊಳ ಗೊಂಡ ವಿವಿಧ ತಂಡಗಳನ್ನು ರಚಿಸಲಾಗಿದ್ದು ಜನರ ಸೇವೆಗೆ ಸಜ್ಜಾಗಬೇಕೆಂದು ಸಲಹೆ ನೀಡಲಾಗಿದೆ.
ತುರ್ತು ಸೇವೆ ಪಡೆಯಲು ಈ ಕೆಳಕಂಡ ಸಂಖ್ಯೆಗೆ ಸಂಪರ್ಕಿಸುವAತೆ ತಿಳಿಸಿದ್ದಾರೆ. ಕುಶಾಲನಗರ ವಲಯ ೭೮೯೯೮೯೧೪೯೪, ಸಿದ್ದಾಪುರ ವಲಯ ೯೪೪೯೨೬೭೧೭೭, ವೀರಾಜಪೇಟೆ ವಲಯ ೯೪೮೦೦೨೧೩೧೬, ಗೋಣಿಕೊಪ್ಪ ವಲಯ ೯೯೪೫೬೧೭೦೨೦, ನಾಪೋಕ್ಲು ವಲಯ ೯೯೦೦೩೪೮೮೬೨, ಸಾಮಾಜಿಕ ಜಾಲತಾಣದ ಗೂಗಲ್ ಮೀಟ್ ಸಭೆಯಲ್ಲಿ ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಬಶೀರ್ ಹಾಜಿ, ಎಸ್.ವೈ.ಎಸ್. ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಸಮಿತಿಯ ಪ್ರಮುಖರಾದ ಉಮ್ಮರ್ ಫೈಜಿ, ಉಸ್ಮಾನ್ ಫೈಜಿ, ಕಾರ್ಯದರ್ಶಿ ಅಶ್ರಫ್ ಫೈಜಿ ಸೇರಿದಂತೆ ಮತ್ತಿತರರು ಇದ್ದರು.
ಇತ್ತೀಚೆಗೆ ನಿಧನರಾದ ಎಸ್.ವೈ.ಎಸ್. ಕೂಡಿಗೆ ಶಾಖೆ ಅಧ್ಯಕ್ಷರಾಗಿದ್ದ ಬಾಪೂಜಿಯವರ ಅನುಸ್ಮರಣಾ ಪ್ರಾರ್ಥನೆ ನಡೆಯಿತು.