ಮಡಿಕೇರಿ, ಜು. ೬: ಪ್ರಸಕ್ತ (೨೦೨೧-೨೨) ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ(ಪಿಎಂಇಜಿಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
೧೮ ವರ್ಷ ತುಂಬಿದ ಅರ್ಹ ಅಭ್ಯರ್ಥಿಗಳು ತಿತಿತಿ.ಞviಛಿoಟಿಟiಟಿe.gov.iಟಿ (ಠಿmegಠಿ oಟಿಟiಟಿe ಚಿಠಿಠಿಟiಛಿಚಿಣioಟಿ)ನಲ್ಲಿ ಅರ್ಜಿಗಳನ್ನು ಅಳವಡಿಸಿ ಅದರ ಪ್ರತಿಯನ್ನು ೨ ಸೆಟ್ನಲ್ಲಿ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವುದು. ಅಪೂರ್ಣವಾಗಿ ಭರ್ತಿ ಮಾಡಿದ ಹಾಗೂ ದಾಖಲೆಗಳನ್ನು ನೀಡದೆ ಇರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಇವರ ಕಚೇರಿಯನ್ನು ಮತ್ತು ದೂ.ಸಂ.೦೮೨೭೨-೨೨೮೪೩೧ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.