ಸೋಮವಾರಪೇಟೆ, ಜು. ೪: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ದಾನಿ ಗಳಿಂದ ನಿರ್ಮಾಣ ಮಾಡಿರುವ ಅಶೋಕ ಸ್ತಂಭದ ಆವರಣದಲ್ಲಿ ಇತರ ಪರಿಕರಗಳನ್ನು ಇಟ್ಟು ಅಶುಚಿತ್ವ ಗೊಳಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣ ಹಾಗೂ ತಡೆಗೋಡೆಯ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗಳ ಪರಿಕರಗಳನ್ನು ಸ್ತಂಭದ ಆವರಣದಲ್ಲಿ ಇಡಲಾಗಿದೆ. ಸುತ್ತಮುತ್ತಲೂ ಸಾಕಷ್ಟು ಸ್ಥಳಾವಕಾಶವಿದ್ದರೂ ಅಶೋಕ ಸ್ತಂಭವನ್ನು ಬಳಸಿಕೊಂಡಿದ್ದು, ತಕ್ಷಣ ಇವುಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.