ಮುಳ್ಳೂರು, ಜು. ೪: ಸಮೀಪದ ಕೊಡ್ಲಿಪೇಟೆ ಗ್ರಾ.ಪಂ. ವತಿಯಿಂದ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ನಂದಿಪುರ ಕೆರೆ ಸಮೀಪದ ಸಂಪರ್ಕ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಗ್ರಾ.ಪಂ. ಜನಪ್ರತಿನಿಧಿಗಳು ಚಾಲನೆ ನೀಡಿದರು. ಈ ಸಂದರ್ಭ ಕೊಡ್ಲಿಪೇಟೆ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ತ್ಯಾಗರಾಜ್, ಸದಸ್ಯರಾದ ಕೆ.ಎಂ. ವಹಾದ್, ಶೋಭಿತ್, ಲಾವಣ್ಯ ಧರ್ಮ ಪ್ರಕಾಶ್, ಅಶ್ವಿನಿ ಮಂಜುನಾಥ್, ನಂದೀಶ್, ಮುತ್ತಯ್ಯ ಹಾಜರಿದ್ದರು.