*ಗೋಣಿಕೊಪ್ಪ, ಜು. ೪: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಕೋವಿಡ್ ನಿಯಂತ್ರಣಕ್ಕೆ ಶ್ರಮವಹಿಸುತ್ತಿರುವ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷೆ ನೀತಾ ಕಾವೇರಮ್ಮ, ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ, ಸಹಾಯಕ ರಾಜ್ಯಪಾಲ ಅನಿಲ್ ಎಚ್.ಟಿ., ವಲಯ ಸೇನಾನಿ ಆದಿತ್ಯ, ಡಾ. ಚಂದ್ರಶೇಖರ್ ಸೇರಿದಂತೆ ರೋಟರಿ ಪ್ರಮುಖರು ಇದ್ದರು.
ತನ್ನ ಕಾರ್ಯವನ್ನು ತಾನು ಮಾಡುತ್ತಿದ್ದು ಕೊಡಗನ್ನು ಕೊರೊನಾ ಮುಕ್ತವಾಗಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಶಾಸಕ ಬೋಪಯ್ಯ ಈ ಸಂದರ್ಭ ನುಡಿದರು.