*ವೀರಾಜಪೇಟೆ, ಜು. ೨ : ರಾಜ್ಯ ಮಾನವ ಹಕ್ಕು ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡು ರಾಯ್ ಸಹೋದರ ರಾಬಿನ್ ಡಿಸೋಜಾರ ಹೇಳಿಕೆಯನ್ನು ಬೆಂಗಳೂರಿನ ಮಾನವ ಹಕ್ಕು ಆಯೋಗದ ಕಚೇರಿಯಲ್ಲಿ ಪಡೆದು ಕೊಂಡಿತ್ತು. ವೀರಾಜ ಪೇಟೆಯ ಸರ್ಕಾರಿ ಅತಿಥಿ ಗೃಹಕ್ಕೆ
ಆಗಮಿಸಿದ ರಾಜ್ಯ ಮಾನವ ಹಕ್ಕು ಆಯೋಗದ ಡಿವೈಎಸ್ಪಿ ಕೇಶವ ಕೆ.ಈ. ಮತ್ತು ಇಬ್ಬರು ಅಧಿಕಾರಿಗಳ ತಂಡ ರಾಯ್ ಡಿಸೋಜಾರ ತಾಯಿಯವರಿಂದ ಹೇಳಿಕೆಯನ್ನು ಪಡೆದುಕೊಂಡರು. ಅಲ್ಲದೇ ಪ್ರಕರಣಕ್ಕೆ ಸಂಬAಧಪಟ್ಟ ಸಾಕ್ಷಿಗಳ ಹೇಳಿಕೆ ಯನ್ನೂ ಪಡೆದುಕೊಂಡರು.
ಬಳಿಕ ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದ
(ಮೊದಲ ಪುಟದಿಂದ) ಮೂವರು ಸಿಐಡಿ ಅಧಿಕಾರಿಗಳ ತಂಡ ಕೂಡಾ ಇಂದು ಮೃತ ರಾಯ್ ಡಿಸೋಜಾ ಹಲ್ಲೆಗೊಳಗಾದ ದಿನ ಧರಿಸಿದ್ದ ಬಟ್ಟೆಯ ಮಹಜರು ನಡೆಸಿ, ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡರು ಹಾಗೂ ರಾಯ್ ತಾಯಿ ಮೆಟಿಲ್ಡಾ ಡಿಸೋಜಾರು ಈ ಪ್ರಕರಣಕ್ಕೆ ಸಂಬAಧಿಸಿದAತೆ ಹೆಚ್ಚುವರಿಯಾಗಿ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡರು.