ವೀರಾಜಪೇಟೆ, ಜು.೨: ಭಾರೀ ಬೇಡಿಕೆ ಇರುವ ಅಪರೂಪದ ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಹೊರ ರಾಜ್ಯದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಪರಾಧ ವಿಭಾಗದವರು ಯಶಸ್ವಿಯಾಗಿದ್ದಾರೆ. ನಿನ್ನೆ ಸಂಜೆ ವೇಳೆಗೆ ಗೋಣಿಕೊಪ್ಪದಲ್ಲಿ ದಾವಣಗೆರೆಯ ಅದಡಿ ಗ್ರಾಮದ ಶಿವಕುಮಾರ್, ಶಿರಹಟ್ಟಿ ಗ್ರಾಮದ ಮಲ್ಲಿಕ್ ಸಾಬ್, ಹಾವೇರಿ ಗ್ರಾಮದ ಶಿಗ್ಗಾಂವಿಯ

(ಮೊದಲ ಪುಟದಿಂದ) ಮಹಮ್ಮದ್ ಖಾಸಿಂ ಮತ್ತು ಸತ್ತಾರ್ ಶೇಖ್ ಅವರುಗಳು ಎರಡು ತಲೆಯ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅರಣ್ಯ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಸುರೇಶ್ ಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ವೀಣಾ ನಾಯಕ್, ಕೆ.ಬಿ. ಸೋಮಣ್ಣ, ಮೊಣ್ಣಪ್ಪ, ಗಣೇಶ್ ಇನ್ನಿತರರು ಭಾಗವಹಿಸಿದ್ದರು.

-ಕೆ.ಕೆ.ಎಸ್., ವೀರಾಜಪೇಟೆ.