ಮಡಿಕೇರಿ, ಜು. ೨: ಕೊರೊನಾ ಸಾಂಕ್ರಾಮಿಕದ ಈ ಪರಿಸ್ಥಿತಿಯು ಆನ್‌ಲೈನ್ ಹಾಗೂ ಅಂತರ್‌ಜಾಲದ ಯುಗವಾಗಿ ಪರಿವರ್ತನೆ ಗೊಂಡಿದೆ. ಮದುವೆ ಸಮಾರಂಭ, ಗಾಯನ ಕಾರ್ಯಕ್ರಮ, ಕಚೇರಿ ಕೆಲಸ ಸಂಬAಧ ಸಭೆಗಳು ಆಧ್ಯಾತ್ಮ, ಆಟ, ಶಾಪಿಂಗ್, ಶಿಕ್ಷಣ, ಶಾಲೆ...ಹೀಗೆ ಎಲ್ಲವೂ ಆನ್‌ಲೈನ್ ಮುಖಾಂತರವೆ!
ಈ ವರ್ಚುವಲ್ ಯುಗದಲ್ಲಿ ಮಕ್ಕಳ ಶಿಕ್ಷಣ ಸಂಪೂರ್ಣವಾಗಿ ಮೊಬೈಲ್ ಹಾಗೂ ಅಂತರ್‌ಜಾಲದ ಅವಲಂಬಿತವಾಗಿದೆ. ಹಲವಾರು ಗ್ರಾಮೀಣ ಪ್ರದೇಶದ ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರಲ್ಲದೆ, ಮಕ್ಕಳ ಆಶ್ರಮಗಳಲ್ಲಿರುವ ಅನೇಕ ಮಕ್ಕಳು ಆಟ-ಪಾಠಗಳಿಂದ ವಂಚಿತರಾಗಿರುವದು ದುರಂತ.
ಆದರೆ, ಕೊರೊನಾದ ಎರಡನೆಯ ಅಲೆಯ ನಂತರ ಶಾಲಾ ಆಟ-ಪಾಠದಿಂದ ವಂಚಿತರಾಗಿದ್ದ ಮಡಿಕೇರಿಯ ಮಕ್ಕಳ ಆಸರೆಗೃಹಗÀಳ ಪುಟಾಣಿಗಳಿಗೆ ಇದೀಗ ವಿವಿಧ ಚಟುವಟಿಕೆಗಳು ಆನ್‌ಲೈನ್ ಮೂಲಕ ನಡೆಯುತ್ತಿವೆ.
ಜುಲೈ ೧ ರಂದು ಮಡಿಕೇರಿಯ ಬಾಲಭವನ ಮತ್ತು ಬಾಲಕರ ಮತ್ತು ಬಾಲಕಿಯರ ಆಸರೆ ಗೃಹಗಳಲ್ಲಿ ಸಂಭ್ರಮದ ಉತ್ಸಾಹ ಮೂಡಿತ್ತು. ಈ ಮಕ್ಕಳನ್ನು ಮನರಂಜಿಸಲು ಸಿನಿಮಾ ನಟಿ ಹಾಗೂ ಪ್ರಸಿದ್ಧ ಗಾಯಕರು ಮುಂದೆಬAದರು; ಇವರೊಂದಿಗೆ ಮಕ್ಕಳು ಹಾಡಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇವರನ್ನೆಲ್ಲ ಒಂದು ಲ್ಯಾಪ್‌ಟಾಪ್‌ನ ಪರದೆಯಲ್ಲಿ ಸೇರಿಸಿದ ಖ್ಯಾತಿ - ಕೊಡಗಿನ ‘ಮೈಂಡ್ ಐಂಡ್ ಮ್ಯಾಟರ್’ ಸಂಸ್ಥೆಯದ್ದು.
ಕಳೆದ ವರ್ಷ ಜುಲೈನಲ್ಲಿ ಕೊಡಗಿನ ದೀಪಿಕ ಎಂ.ಎ ಹಾಗೂ ಅಚ್ಚಯ್ಯನವರು ಸ್ಥಾಪಿಸಿದ ‘ಮೈಂಡ್ ಐಂಡ್ ಮ್ಯಾಟರ್’ ಟ್ರಸ್ಟ್, ಮಡಿಕೇರಿಯ ಮಕ್ಕಳ ಆಶ್ರಮಗಳಲ್ಲಿ ಕಳೆದ ಡಿಸೆಂಬರ್‌ನಿAದ ವಿವಿಧ ಕಲಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾರಂಭಿಸಿತು. ಆಂಗ್ಲ ಭಾಷಾ ಕಲಿಕೆ, ಕಥೆ ಪಠನ, ಚಿತ್ರಕಲೆ...ಹೀಗೆ ವಿವಿಧ ಚಟುವಟಿಕೆಗಳು ಮಕ್ಕಳ ಆಶ್ರಮಗಳಲ್ಲಿ ಸಂಸ್ಥೆಯಿAದ ಆಯೋಜಿಸಲ್ಪಟ್ಟವು. ಆದರೆ ಕೊರೊನಾದ ಎರಡನೆಯ ಅಲೆಯಿಂದ ಈ ಚಟುವಟಿಕೆಗಳು ತಾತ್ಕಾಲಿಕವಾಗಿ ಕೊನೆಗೊಂಡವಾದರೂ, ಇದೀಗ ಜುಲೈ ೧ ರಿಂದ ಆನ್‌ಲೈನ್ ಮೂಲಕ ವಿವಿಧ ಕಲಿಕಾ ಚಟುವಟಿಕೆಗಳು ಪುನರಾರಂಭಗೊAಡಿವೆ. ಗುರುವಾರದಂದು ಮಡಿಕೇರಿಯ ಮೂರೂ ಮಕ್ಕಳ ಆಸರೆಗೃಹಗಳಲ್ಲಿ ಲ್ಯಾಪ್‌ಟಾಪ್‌ಗಳ ಮುಂದೆ ಮಕ್ಕಳು ಕಾತರ-ಕುತೂಹಲದಿಂದ ಸೇರಿದರು. ಆನ್‌ಲೈನ್ ತರಗತಿಗಳ ಉದ್ಘಾಟನಾ ಸಮಾರಂಭವನ್ನು ‘ಗೂಗಲ್ ಮೀಟ್’ ಮೂಲಕ ಆಯೋಜಿಸಲಾಯಿತಲ್ಲದೆ, ಈ ಸಮಾರಂಭಕ್ಕೆ ಅತಿಥಿಗಳಾಗಿ ಕನ್ನಡ ನಟಿ ಕೃಶಿ ತಾಪಂಡ, ಪ್ರಖ್ಯಾತ ಗಾಯಕ ರಘು ದೀಕ್ಷಿತ್ ಹಾಗೂ ಕನ್ನಡ ಗೀತರಚನೆಕಾರ, ಸಂಗೀತ ಸಂಯೋಜಕ ಮತ್ತು ಕನ್ನಡ ರ‍್ಯಾಪ್ ಗಾಯನ ಸಂಯೋಜಕ ಕಾರ್ತಿಕ್ ಸುಂದರ್ ಗುಬ್ಬಿಯವರನ್ನು ಆನ್‌ಲೈನ್ ಪರದೆಯಲ್ಲಿ ಕಲೆಹಾಕಲಾಯಿತು. ಸಿನಿಮಾರಂಗದ ಈ ಮೂರು ಪ್ರಖ್ಯಾತ ಸೆಲೆಬ್ರಿಟಿಗಳು ಮಕ್ಕಳನ್ನು ಮನರಂಜಿಸಿದರಲ್ಲದೆ, ಅವರಿಗೆ ಗಾಯನವನ್ನೂ ಕಲಿಸಿದರು. ಕೊರೊನಾದ ಈ ಪರಿಸ್ಥಿತಿಯಲ್ಲಿ ಹೊರಹೋಗಲೂ ಆಗದ ಈ ಮಕ್ಕಳಿಗೆ ಉದ್ಘಾಟನಾ ಕಾರ್ಯಕ್ರಮ ಸ್ಪೂರ್ತಿದಾಯಕವಾಗಿ ಕಂಡುಬAದಿತು.
‘ಮೈಂಡ್ ಐಂಡ್ ಮ್ಯಾಟರ್’ ಸಂಸ್ಥೆಗೆ ಹೊಂದಿಕೊAಡಿರುವ ಸುಮಾರು ೮೦ ಸ್ವಯಂಸೇವಕರು ಈ ಆಸರೆಗೃಹಗಳ ಮಕ್ಕಳಿಗೆ ವಿವಿಧ ರೀತಿಯ ಕಲಿಕಾ
(ಮೊದಲ ಪುಟದಿಂದ) ಅಭ್ಯಾಸಗಳನ್ನು ಆನ್‌ಲೈನ್ ಮೂಲಕ ಪ್ರಾರಂಭಿಸಿದ್ದಾರೆ. “ಈ ಮಕ್ಕಳನ್ನು - ೬ ರಿಂದ ೮ ವಯಸ್ಸಿನ; ೯ ರಿಂದ ೧೨ ವಯಸ್ಸಿನ; ೧೩ ರಿಂದ ೧೫ ವಯಸ್ಸಿನ ಹಾಗೂ ೧೬ ರಿಂದ ೧೮ ವಯಸ್ಸಿನ - ಗುಂಪುಗಳಾಗಿ ವಿಂಗಡಿಸಿದ್ದು, ಇವರಿಗೆ ಮೊದಲು ಆಂಗ್ಲ ಭಾಷೆಯ ಕಲಿಕೆಯನ್ನು ಪ್ರಾರಂಭಿಸುತ್ತೇವೆ. ನಂತರ ವಿಜ್ಞಾನ, ಕಲೆ, ಸಿನಿಮಾ... ಹೀಗೆ ವೈವಿಧ್ಯಮಯ ವಿಷಯಗಳಿಗೆ ಸಂಬAಧಿಸಿದ ವಿಷಯಗಳ ಬಗ್ಗೆ ಆನ್‌ಲೈನ್ ಪಾಠಗಳನ್ನು ಪ್ರಾರಂಭಿಸಲಾಗುವದು. ವಿವಿಧ ಕ್ಷೇತ್ರ-ವೃತ್ತಿಗಳಲ್ಲಿ ಕೆಲಸ ನಿವರ್ಹಿಸುತ್ತಿರುವ ಸುಮಾರು ೮೦ ಸ್ವಯಂಸೇವಕರು ಈ ಮಕ್ಕಳಿಗೆ ಪಾಠಗಳನ್ನು ಆನ್‌ಲೈನ್ ಮೂಲಕ ಮುಂದಿನ ದಿನಗಳಲ್ಲಿ ನಡೆಸುತ್ತಾರೆ,” ಎಂದು ಸಂಸ್ಥೆಯ ಸ್ಥಾಪಕಿ ದೀಪಿಕಾ ‘ಶಕ್ತಿ’ಯೊಂದಿಗೆ ಯೋಜನಾ ವಿವರ ಹಂಚಿಕೊAಡರು. ಮಡಿಕೇರಿಯಲ್ಲಿರುವ ಬಾಲಭವನ, ಬಾಲಕರ ಆಸರೆಗೃಹ ಹಾಗೂ ಬಾಲಕಿಯರ ಆಸರೆಗೃಹಗಳ ಆಡಳಿತಾಧಿಕಾರಿಯವರಿಂದ ‘ಮೈಂಡ್ ಐಂಡ್ ಮ್ಯಾಟರ್’ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ಅನುಮತಿಯನ್ನು ಪಡೆದುಕೊಂಡಿದ್ದು, ಇದೀಗ ಈ ಮಕ್ಕಳಿಗೆ ವಿಭಿನ್ನ ರೀತಿಯ ಶಾಲಾ ಕಲಿಕೆ ಪ್ರಾರಂಭವಾಗಿದೆ. ಈ ತರಗತಿಗಳನ್ನು ನಡೆಸಲು ಬೇಕಾದ ಲ್ಯಾಪ್‌ಟಾಪ್ ಹಾಗೂ ಅಂತರ್‌ಜಾಲದ ವ್ಯವಸ್ಥೆ ಕೂಡ ತಯಾರಿದ್ದು, ಈ ಮಕ್ಕಳಲ್ಲಿ ಉಚಿತ ಆನ್‌ಲೈನ್ ತರಗತಿಗಳು ಹುಮ್ಮಸ್ಸು ತುಂಬಿದೆ. -ಜಿ.ಆರ್ ಪ್ರಜ್ಞಾ