ಮಡಿಕೇರಿ, ಜು. ೨: ಕಾಫಿ ಉದ್ಯಮದ ವಿವಿಧ ಸಮಸ್ಯೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ಭೇಟಿ ಮಾಡಿ ಮನವಿ ಸಲ್ಲಿಸಿತು.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಹೊರಡಿಸಿರುವ, ಕೃಷಿ ಸಾಲದ ಮರು ಹೊಂದಾಣಿಕೆಗೆ ಸ್ಪಷ್ಟಸೂಚನೆಯಿದ್ದರೂ ಕೂಡ ಹಲವು ರಾಷ್ಟಿçÃಕೃತ ಬ್ಯಾಂಕ್ ಹಾಗೂ ಇತರ ವಾಣಿಜ್ಯ ಬ್ಯಾಂಕು ಶಾಖೆಗಳು ಬೆಳೆಗಾರರ ಸಾಲದ ಖಾತೆಗಳನ್ನು ಮರುಹೊಂದಾಣಿಕೆ ಮಾಡಲು ಹಿಂಜರಿಯುತ್ತಿವೆ.
ಕಾಫಿ ಕೃಷಿ ಸಂಬAಧಿತ ಸಾಲವನ್ನು ಸರ್ ಫಾಸಿ -೨೦೦೨ ರ ಕಾಯ್ದೆಯಿಂದ ಹೊರಗಿಡಲು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟತೆ ನೀಡಿ ನ್ಯಾಯಾಲಯ ಮತ್ತು ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಈ ಕಾಯ್ದೆಯಡಿ ಬಹಳಷ್ಟು ಬೆಳೆಗಾರರಿಗೆ ಬೇಡಿಕೆ ನೋಟೀಸ್ ಹಾಗೂ ಸ್ವಾಧೀನತೆ ನೋಟೀಸ್ ಜಾರಿಯಾಗುತ್ತಾ ಇವೆ. ಇದರಿಂದ ಮುಂದಿನ ದಿನಗಳಲ್ಲಿ ಹಲವು ಕಾಫಿ ಬೆಳೆಗಾರರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ತುರ್ತಾಗಿ ಈ ವಿಷಯದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಹಾಲಿ ಇರುವ ಬಡ್ಡಿದರದಲ್ಲಿ ಕಾಫಿ ಬೆಳೆ ಹಾಗೂ
(ಮೊದಲ ಪುಟದಿಂದ) ಇತರ ಕೃಷಿ ಕ್ಷೇತ್ರದ ಸಾಲಗಳನ್ನು ಬೆಳೆಗಾರರು ಮರುಪಾವತಿ ಮಾಡಲು ಸಾಧ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಮತ್ತು ಇತರ ಕೃಷಿಯ ಸಮಗ್ರ ಸಾಲಗಳ ಮೇಲಿನ ಬಡ್ಡಿಯನ್ನು (ಹಾಲಿ ಇರುವ ಹಾಗೂ ಮುಂಬರುವ ಎಲ್ಲಾ ರೀತಿಯ ಸಾಲಗಳ ಮಂಜೂರಾತಿಯಾಗಿ) ಶೇ.೩ರಷ್ಟು ನಿಗದಿಪಡಿಸಬೇಕು. ಪ್ರಧಾನಮಂತ್ರಿಗಳ ಫಸಲ್ ಭೀಮಾ ಯೋಜನೆಯನ್ನು ಕಾಫಿ ಕೃಷಿಗೂ ಅಳವಡಿಸಬೇಕು.
ಇತ್ತೀಚೆಗೆ ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ನೀಡಿರುವ ಹಣಕಾಸಿನ ಉತ್ತೇಜನ ಮಾದರಿಯಲ್ಲಿ ಕಾಫಿ ಕ್ಷೇತ್ರಕ್ಕೂ ಕೂಡ ಯೋಜನೆ ರೂಪಿಸಬೇಕು. ಕೋವಿಡ್-೧೯ ರ ಲಾಕ್ಡೌನ್ನಿಂದಾಗಿ ಕಾಫಿ ಕ್ಷೇತ್ರ ಹಿನ್ನೆಡೆ ಅನುಭವಿಸಿತು. ಕಾಫಿ ಕ್ಷೇತ್ರಕ್ಕೆ ಈವರೆಗೆ ಯಾವುದೇ ಸೌಲಭ್ಯ ದೊರಕಿರುವುದಿಲ್ಲ. ಸಮಗ್ರ ಕೃಷಿ ಕ್ಷೇತ್ರದ ಸಾಲ ನೀಡಿಕೆಯ ವಹಿವಾಟನ್ನು ಸಿಬಿಲ್ ಪರಿಧಿಯಿಂದ ಹೊರಗಿಡಬೇಕೆಂದು ಸಚಿವರನ್ನು ಕೋರಲಾಯಿತು.
ಸಂಸದ ತೇಜಸ್ವಿ ಸೂರ್ಯ, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಟಿ. ಮೋಹನ್ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶೀ ಕೆ.ಕೆ.ವಿಶ್ವನಾಥ್, ಕಾಫಿ ಬೆಳೆಗಾರ ಪ್ರದೀಪ್ ಪೂವಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.