ನಾಪೋಕ್ಲು, ಜು. ೨: ಸಮೀಪದ ಚಪ್ಪೇಂಡಡಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಕೊಂಡೀರ ಡಾಟಿ ಸುರೇಶ್ ಅವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಶಾಲು ಹೊದಿಸಿ, ಫಲತಾಂಬೂಲ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ತನ್ನ ಅನಿಸಿಕೆಗಳನ್ನು ಹಂಚಿಕೊAಡ ಡಾಟಿ ಸುರೇಶ್ ತನ್ನ ಸೇವೆಯಲ್ಲಿ ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ಮಾತನಾಡಿದರು.

ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ವೈ. ಆಶ್ರಪ್ ವಹಿಸಿದ್ದರು. ವೇದಿಕೆಯಲ್ಲಿ ಬಿ.ಗಣೇಶ್, ಸಂಪನ್ಮೂಲ ಅಧಿಕಾರಿ ರಂಜಿತ, ಐ.ಡಿ. ಶಾಂತ, ಬಿ.ಆರ್.ಪಿ. ಮಂಜುಳ ಚೈತ್ರಾಪುರ, ಸಿ.ಆರ್.ಪಿ. ಸೌಮ್ಯಾ ಶೆಟ್ಟಿ, ಮಡಿಕೇರಿ ಕ್ಲಸ್ಟರ್‌ನ ಸರಸ್ವತಿ, ಇದ್ದರು.