ಕಣಿವೆ, ಜು. ೨: ತಾನೋರ್ವ ವಿಶೇಷ ಚೇತನಳಾದರೂ ಕೂಡ ತನಗೆ ಸರ್ಕಾರದಿಂದ ಸಿಗುವ ಮಾಸಿಕ ಭತ್ಯೆಯನ್ನು ಕೂಡಿಟ್ಟು ಕೊರೊನಾ ಸಂಕಷ್ಟದಲ್ಲಿರುವ ಗ್ರಾಮದ ೬೦ಕ್ಕೂ ಹೆಚ್ಚಿನ ಪರಿಶಿಷ್ಟ ವರ್ಗ ಮತ್ತು ಪಂಗಡಗಳ ಕಡುಬಡ ಕುಟುಂಬಗಳಿಗೆ ಆಹಾರದ ಕಿಟ್ ನೀಡಿದ್ದ ಕೂಡ್ಲೂರು ಗ್ರಾಮದ ವಿಶೇಷ ಚೇತನ ಮಹಿಳೆ ಕೆ.ಎನ್. ಮಂಜುಳಾ ಅವರ ಮಾನವೀಯ ಸೇವೆಯನ್ನು ಶ್ಲಾಘಿಸಿ ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಉಳ್ಳವರು ಅನೇಕ ಮಂದಿ ಸಮಾಜದಲ್ಲಿ ನೊಂದವರಿಗೆ ಸಹಾಯ ಹಸ್ತ ಚಾಚುವಲ್ಲಿ ಹಿಂದೆ ಮುಂದೆ ನೋಡುವ ಈ ಕಾಲಘಟ್ಟದಲ್ಲಿ ವಿಶೇಷಚೇತನಳಾದರೂ ಕೂಡ ಮಂಜುಳಾ ಅವರು ಅದನ್ನು ಲೆಕ್ಕಿಸದೇ ನೊಂದವರಿಗೆ ಸಹಾಯ ಹಸ್ತ ನೀಡಿ ಆತ್ಮಸ್ಥೆöÊರ್ಯ ತುಂಬಿರುವುದು ಇತರರಿಗೆ ಮಾದರಿ ಎಂದು ಸುರೇಶ್ ಹೇಳಿದರು.
ಈ ಸಂದರ್ಭ ಮಂಜುಳಾ ಅವರ ತಾಯಿ ಜವರಮ್ಮ, ಕೆ.ಎನ್. ಪವನಕುಮಾರ್, ಗಣೇಶ್, ಸುಕನ್ಯ ಇದ್ದರು.