ಕುಶಾಲನಗರ, ಜು. ೨: ಕುಶಾಲನಗರ ಕೋವಿಡ್ ಲಸಿಕಾ ಕೇಂದ್ರ ಮತ್ತು ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ ಆರೋಗ್ಯ ಇಲಾಖಾ ಸಿಬ್ಬಂದಿಗಳನ್ನು ಮತ್ತು ಅಧಿಕಾರಿಗಳನ್ನು ಕುಶಾಲನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಕುಶಾಲನಗರದ ಅಳಿಲು ಸೇವಾ ಸಂಘದ ಆಶ್ರಯದಲ್ಲಿ ರೈತ ಸಹಕಾರ ಭವನದ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಗೋವಿಂದರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯ ಭಾನು, ಕುಡಾ ಅಧ್ಯಕ್ಷ ಎಂ.ಎA. ಚರಣ್, ಆರೋಗ್ಯ ಇಲಾಖೆಯ ಅಧಿಕಾರಿ ಶಾಂತಿ, ಹಿರಿಯ ನಾಗರಿಕರಾದ ಜಿ.ಎಲ್. ನಾಗಾರಾಜ್ ಇದ್ದರು.
ವೇದಿಕೆಯ ಅಧÀ್ಯಕ್ಷರಾದ ಶಿವಾಜಿ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ೩೫ಕ್ಕೂ ಅಧಿಕ ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಅಳಿಲು ಸೇವಾ ಸಂಘದ ಪದಾಧಿಕಾರಿಗಳು ಇದ್ದರು.