ಮಡಿಕೇರಿ, ಜು. ೨: ತಾ. ೧ ರಂದು ರಾಷ್ಟçದಾದ್ಯಂತ ವೈದ್ಯರ ದಿನಾಚರಣೆ ಆಚರಿಸಲ್ಪಟ್ಟಿದ್ದು, ಕೊಡಗು ಜಿಲ್ಲಾಸ್ಪತ್ರೆಯಲ್ಲಿಯೂ ಆಚರಿಸಲಾಯಿತು. ಮಹಾರಾಷ್ಟç ಮೂಲದ ‘ಏಖSಓಂA ಜiಚಿgಟಿosಣiಛಿs’ ಸಂಸ್ಥೆ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ದಿನದ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಪರಿಸರ ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಂಸ್ಥೆಯ ವತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೈದ್ಯರಿಗೆ ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಳ್ಳಿಚಂಡ ಕಾರ್ಯಪ್ಪ, ಅಧೀಕ್ಷಕ ಡಾ.ಮಂಜುನಾಥ್ ಎಸ್, ಪ್ರಾದೇಶಿಕ ಅಧಿಕಾರಿ ರೂಪೇಶ್, ಜಿಲ್ಲಾಸ್ಪತ್ರೆ ಸಿ.ಟಿ ಸ್ಕಾö್ಯನ್ ವಿಭಾಗದ ಉಸ್ತುವಾರಿ ಮೊಯಿನುದ್ದಿನ್, ಕಾಲೇಜಿನ ವಿವಿಧ ಇಲಾಖೆಯ ಮುಖ್ಯಸ್ಥರು, ಹಿರಿಯ ಹಾಗೂ ಕಿರಿಯ ವೈದ್ಯರು ಭಾಗವಹಿಸಿದರು.