ಮಡಿಕೇರಿ, ಜು. ೨: ಅಬಕಾರಿ ವಹಿವಾಟಿಗೆ ಸಂಬAಧಿಸಿದAತೆ ವಿವಿಧ ಬಗೆಯ ಸನ್ನದುಗಳ ವ್ಯಾಪಾರ ಪರವಾನಗಿಯನ್ನು ನವೀಕರಿಸಿಕೊಳ್ಳಲು ಈ ಬಾರಿ ಜು.೯ರ ತನಕ ಕಾಲಾವಕಾಶ ನೀಡಲಾಗಿದೆ. ವರ್ಷಂಪ್ರತಿ ಅಬಕಾರಿ ಆರ್ಥಿಕ ವರ್ಷದ ನಿಯಮದಂತೆ ಜುಲೈ ೧ರಿಂದ ಪರವಾನಗಿಗಳ ನವೀಕರಣವಾಗಬೇಕು. ಆದರೆ ಪ್ರಸಕ್ತ ವರ್ಷ ಕೋವಿಡ್ ಪರಿಸ್ಥಿತಿಯಿಂದಾಗಿ ಸರಕಾರ ಹಾಗೂ ಅಬಕಾರಿ ಇಲಾಖೆ ಇದಕ್ಕೆ ಕೆಲವೊಂದು ವಿನಾಯಿತಿಯನ್ನು ನೀಡಿದೆ.ಜು.೧ ರ ಬದಲಾಗಿ ಜುಲೈ ೯ರ ತನಕ ಇದಕ್ಕೆ ಕಾಲಾವಕಾಶ ನೀಡಲಾಗಿದೆ. ಅಲ್ಲದೆ, ವಿವಿಧ ಸನ್ನದುಗಳಿಗೆ ಸಂಬAಧಿಸಿದAತೆ ಪಾವತಿಸಬೇಕಾದ ವಾರ್ಷಿಕ ಶುಲ್ಕದ ಪೈಕಿ ಇದೀಗ ನವೀಕರಣ ಸಂದರ್ಭ ಶೇ.೫೦ರಷ್ಟು ಮೊತ್ತವನ್ನು ಪಾವತಿಸಬೇಕಾಗಿದೆ. ಉಳಿದ ಶೇ.೫೦ರಷ್ಟು ಮೊತ್ತವನ್ನು ಪಾವತಿ ಮಾಡಲು ಡಿಸೆಂಬರ್ ಅಂತ್ಯದ ತನಕ ಅವಕಾಶ ಕಲ್ಪಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ವಿವಿಧ ಬಗೆಯ ಒಟ್ಟು ೨೨೯ ಸನ್ನದುಗಳಿದ್ದು, ಇದರಲ್ಲಿ ೨೨೬ ನವೀಕರಣಕ್ಕೆ ಸನ್ನದುದಾರರು ಮುಂದಾಗಿದ್ದಾರೆ. ಈಗಾಗಲೇ ಈ ಸನ್ನದುದಾರರು ಶೇ. ೫೦ರಷ್ಟು ಶುಲ್ಕ ಪಾವತಿಸಿದ್ದು, ಅಧಿಕೃತವಾಗಿ ಈ ತನಕ ೯೭ ಸನ್ನದು ನವೀಕರಣಗೊಂಡಿದ್ದರೆ, ಉಳಿದವುಗಳ ಅಧಿಕೃತ ನವೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಬಕಾರಿ ಇಲಾಖಾ ಮೂಲಗಳು ತಿಳಿಸಿವೆ.