ಮಡಿಕೇರಿ, ಜು. ೨: ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಪಟ್ಟಣ ಮಹಿಳಾ ಸಮಾಜ ಕಟ್ಟಡದಲ್ಲಿ ನಡೆಸುತ್ತಿದ್ದ ಸ್ವಾö್ಯಬ್ ಟೆಸ್ಟ್ ಕೇಂದ್ರವನ್ನು ಪಟ್ಟಣದ ಆಯುಷ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಯುಷ್ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಕೋವಿಡ್-೧೯ ವ್ಯಾಕ್ಸಿನೇಷನ್ ಸೆಂಟರನ್ನು ಚೆನ್ನಬಸಪ್ಪ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಹಾಗೆಯೇ ಕುಶಾಲನಗರ ಹೋಬಳಿಯ ರೈತ ಭವನದಲ್ಲಿ ಇದ್ದ ಕೋವಿಡ್-೧೯ ಸೆಂಟರನ್ನು ಕುಶಾಲನಗರ ಕಲಾಭವನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕಾಗಿ ಸೋಮವಾರ ಪೇಟೆ ತಹಶೀಲ್ದಾರ್ ಆರ್. ಗೋವಿಂದರಾಜು ಅವರು ತಿಳಿಸಿದ್ದಾರೆ.