ಮಡಿಕೇರಿ, ಜು. ೧: ಕೇಂದ್ರ ಸರಕಾರ ಸಚಿವ ಸಂಪುಟ ಪುನರ್ ರಚನೆಯಾಗುತ್ತಿದ್ದು, ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಪಕ್ಷಕ್ಕಾಗಿ ಹತ್ತಾರು ವರ್ಷದಿಂದ ದುಡಿದವರು, ಕೊಡುಗೆ ನೀಡಿದವರು ಇದ್ದಾರೆ. ಹಿರಿಯರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಇಂಗಿತ ವ್ಯಕ್ತಪಡಿಸಿದರು.
ಜೋಡುಪಾಲದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲನೆ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು-ಮೈಸೂರು ಜನರ ಸೇವೆ ಮಾಡಲು ಸಿಕ್ಕಿರುವ ಅವಕಾಶವೇ ನನಗೆ ದೊಡ್ಡದು. ಮೋದಿ ಸರಕಾರದಲ್ಲಿ ಸೇವೆ ಮಾಡಲು ಇರುತ್ತೇನೆ. ನನಗೆ ಸಚಿವನಾಗುವ ಇರಾದೆ ಇಲ್ಲ ಎಂದು ಹೇಳಿದರು.