ಸೋಮವಾರಪೇಟೆ / ಕುಶಾಲನಗರ, ಜು. ೧: ಸಮೀಪದ ಏಳನೇ ಹೊಸಕೋಟೆಯ ತೊಂಡೂರು ರಸ್ತೆಯಲ್ಲಿರುವ ಉಪ್ಪುತೋಡುವಿನಲ್ಲಿರುವ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟಿನಲ್ಲಿ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ
(ಮೊದಲ ಪುಟದಿಂದ) ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ್ ರಾಜ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಧಾಳಿ ನಡೆಸಿ ರೆಸಾರ್ಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೈಸೂರಿನಿಂದ ಪ್ರವಾಸಿಗರಾಗಿ ಆಗಮಿಸಿದ್ದ ೮ ಮಂದಿ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದರು.
ಆದೇಶ ಉಲ್ಲಂಘಿಸಿ ರೆಸಾರ್ಟ್ ಮಾಲೀಕರು ಪ್ರವಾಸಿಗರಿಗೆ ಆಶ್ರಯ ನೀಡಿದ್ದರಿಂದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೂಳಪ್ಪ ಅವರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ಧಾಳಿ ನಡೆಸಿ ೮ ಮಂದಿ ಪ್ರವಾಸಿಗರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಅಲ್ಲದೆ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬAಧ ದೂರು ದಾಖಲಿಸಲಾಗಿದೆ.
ಧಾಳಿಯ ಸಂದರ್ಭ ಉಪ ತಹಶೀಲ್ದಾರ್ ಲೋಹಿತ್, ಸುಂಟಿಕೊಪ್ಪ ಠಾಣಾಧಿಕಾರಿ ಪುನಿತ್, ಸಿಬ್ಬಂದಿ ಖಾದರ್, ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮ ಲೆಕ್ಕಿಗರಾದ ನಸೀಮಾ, ರೂಪಶ್ರೀ ಪಾಲ್ಗೊಂಡಿದ್ದರು.