ರಾಯ್ ಸಾವು ಪ್ರಕರಣ
* ವೀರಾಜಪೇಟೆ, ಜು. ೧: ರಾಯ್ ಡಿಸೋಜಾ ಪ್ರಕರಣದಲ್ಲಿ ರಾಜ್ಯ ಮಾನವ ಹಕ್ಕು ಆಯೋಗವೂ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ರಾಯ್ ಡಿಸೋಜಾ ಸಹೋದರ ರಾಬಿನ್ ಡಿಸೋಜಾ ಅವರನ್ನು ಕರೆಸಿಕೊಂಡು ಡಿವೈಎಸ್ಪಿ ಕೇಶವ ಕೆ.ಈ. ಅವರು ಹೇಳಿಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ವೀರಾಜಪೇಟೆಗೆ ರಾಜ್ಯ ಮಾನವ ಹಕ್ಕು ಆಯೋಗದ ಅಧಿಕಾರಿಗಳು ತಾ. ೨ರಂದು (ಇಂದು) ಆಗಮಿಸಲಿದ್ದು, ರಾಯ್ ಡಿಸೋಜಾ ಅವರ ತಾಯಿ ಹಾಗೂ ಇತರರ ಹೇಳಿಕೆ ಪಡೆಯಲಿದ್ದಾರೆ ಎಂದು ರಾಬಿನ್ ಡಿಸೋಜ ತಿಳಿಸಿದ್ದಾರೆ.