ಮಡಿಕೇರಿ, ಜು. ೧: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಕೊರತೆ ಮುಂದುವರೆದಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಲಸಿಕೆ ನೀಡುವ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವೀರಾಜಪೇಟೆ, ಸೋಮವಾರಪೇಟೆ ಪಟ್ಟಣಗಳಲ್ಲಿಯೂ ಸಾರ್ವಜನಿಕರಿಗೆ ಲಸಿಕೆ ಅಲಭ್ಯವಾಗಿದೆ. ರಾಜ್ಯ ಸರಕಾರದಿಂದ ಲಸಿಕೆ ಪೂರೈಕೆ ಅತೀ ಕಡಿಮೆ ಪ್ರಮಾಣದಲ್ಲಿ ಆಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಜಿಲ್ಲೆಯ ಪ್ರಮುಖ ಲಸಿಕಾ ಕೇಂದ್ರಗಳಲ್ಲಿಯೇ ಲಸಿಕೆ ಅಲಭ್ಯವೆಂಬ ಫಲಕಗಳÀನ್ನೂ ಹಾಕಲಾಗಿದೆ.

ಜಿಲ್ಲೆಯಲ್ಲಿ ಬಹಳಷ್ಟು ಮಂದಿಗೆ ೨ನೇ ಡೋಸ್ ಲಸಿಕೆಗೆ ಅವಧಿಯಾಗಿದ್ದರೂ ಲಸಿಕೆ ದೊರೆಯುವುದು ಕಷ್ಟಸಾಧ್ಯವಾಗಿದೆ. ಹಲವು ಪ್ರಾಥಮಿಕ ಕೇಂದ್ರಗಳಲ್ಲಿ ಮಾತ್ರ ೧೦ ,೨೦ ರಷ್ಟು ಲಸಿಕಾ ಡೋಸ್‌ಗಳು ಬಾಕಿ ಇದ್ದು, ೨ನೇ ಡೋಸ್ ಬಾಕಿ ಇರುವ ಕೆಲವು ಮಂದಿಗೆ ಕರೆ ಮಾಡಿ ಲಸಿಕೆ ನೀಡಲಾಗುವುದಾಗಿ ತಿಳಿದುಬಂದಿದೆ. ೨ ನೇ ಡೋಸ್‌ಗೆ ಅವಧಿಯಾಗಿದೆ ಎಂಬ ಸಂದೇಶ ಫಲಾನುಭವಿಗಳ ಮೊ.ಸಂಖ್ಯೆಗೆ ಬಂದಿದ್ದರೂ ಲಸಿಕೆ ಸಿಗುವ ಸಾಧ್ಯತೆಗಳು ಅತೀ ಕಡಿಮೆ.

ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಸಂಬAಧ ಮಾರ್ಗಸೂಚಿ ಬಂದಿದ್ದು,

(ಮೊದಲ ಪುಟದಿಂದ) ತಾ.೨ ರಂದು ಮೂರ್ನಾಡು ಪದವಿ ಕಾಲೇಜು ಹಾಗೂ ತಾ.೩ ರಂದು ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಲಸಿಕೆ ನೀಡಲಾಗುತ್ತದೆ. ಜೂನ್ ೨೫ ರಂದು ಜಿಲ್ಲೆಯಲ್ಲಿ ೩,೯೧೪ ಮಂದಿಗೆ ಲಸಿಕೆ ನೀಡಲಾಯಿತು. ಜೂನ್.೨೬ ರಂದು ೧,೮೫೦, ೨೭ರಂದು ೧,೦೫೧, ೨೮ ರಂದು ೧,೮೮೦, ೩೦ ರಂದು ೫೬೦ ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಇದುವರೆಗೆ ೯೮೫ ಮಂದಿ ಲಸಿಕೆ ಪಡೆದಿದ್ದಾರೆ.