ನಾಪೋಕ್ಲು, ಜು. ೧: ಕಳೆದ ಎರಡೂವರೆ ತಿಂಗಳು ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ಹೊರತುಪಡಿಸಿ ಇತರ ಯಾವದೇ ಅಂಗಡಿಗಳನ್ನು ತೆರೆಯಲಾಗಿಲ್ಲ. ಆದುದರಿಂದ ಅಂತಹ ಕಟ್ಟಡ ಮಾಲೀಕರು ತಮ್ಮ ಅಂಗಡಿ ಬಾಡಿಗೆ ಹಣದಲ್ಲಿ ವಿನಾಯಿತಿ ನೀಡಬೇಕೆಂದು ನಾಪೋಕ್ಲು ಚೇಂಬರ್ ಆಫ್ ಕಾಮರ್ಸ್ ಪರವಾಗಿ ಮಾಚೆಟ್ಟಿರ ಕುಶು ಕುಶಾಲಪ್ಪ, ಚೋಕಿರ ಪ್ರಭು ಪೂವಪ್ಪ ಮತ್ತು ನಾಪಂಡ ಉದಯ ಮನವಿ ಮಾಡಿದ್ದಾರೆ. ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು, ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಮಾತ್ರ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ, ಕೊರೊನಾ ಹಿನ್ನೆಲೆಯಿಂದ ಎರಡು ವರ್ಷಗಳು ಕೂಡ ಲಾಕ್‌ಡೌನ್ ಆಗಿ ಯಾವದೇ ವ್ಯಾಪಾರ ವಹಿವಾಟು ನಡೆದಿಲ್ಲ. ಇದನ್ನು ನಂಬಿದ ವ್ಯಾಪಾರಿ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಇವರಿಗೆ ಸಹಕಾರ ನೀಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಹಾಗೆಯೇ ಕಟ್ಟಡ ಮಾಲೀಕರು ಬಾಡಿಗೆ ಹಣದಲ್ಲಿ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.