ಪ್ಲಾಸಿಕ್ ಮುಕ್ತ ವಾರ್ಡ್ ಮಾಡಲು ಕೈಜೋಡಿಸಲು ಮನವಿ

ಮಡಿಕೇರಿ, ಜು. ೧: ನಗರಸಭೆಯ ೫ನೇ ವಾರ್ಡ್ ನೂತನ ಸದಸ್ಯ ಎಸ್.ಸಿ. ಸತೀಶ್ ತಮ್ಮ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಸದಂತೆ ಹಾಗೂ ಟ್ರೇಡ್ ಲೈಸನ್ಸ್ ಪಡೆಯುವಂತೆ ಮನವಿ ಮಾಡಿದರು.

ಚೇಂಬರ್ ಆಫ್ ಕಾಮರ್ಸ್ ಸದಸ್ಯರೊಂದಿಗೆ ನಗರದ ಅಜ್ಜಮಾಡ ದೇವಯ್ಯ ವೃತ್ತದ ವ್ಯಾಪ್ತಿಯ ಮಳಿಗೆಗಳಿಗೆ ತೆರಳಿ ಪ್ಲಾಸ್ಟಿಕ್ ಬಳಕೆ ಬದಲು ಬಟ್ಟೆ ಬ್ಯಾಗ್ ಬಳಸಿ ಪ್ಲಾಸ್ಟಿಕ್ ಮುಕ್ತ ವಾರ್ಡ್ ಮಾಡುವ ನಿಟ್ಟಿನಲ್ಲಿ ಕೈಜೋಡಿಸಬೇಕು ಹಾಗೂ ನಿಯಮಾನುಸಾರ ಪರವಾನಿಗೆ ಪಡೆಯುವಂತೆ ಮಾಲೀಕರನ್ನು ಕೋರಿದರು. ಈ ಸಂದರ್ಭ ಅಂಗಡಿಯಲ್ಲಿ ಬಳಕೆಯಾಗುತ್ತಿದ್ದ ಪ್ಲಾಸ್ಟಿಕ್‌ಗಳನ್ನು ವಶಪಡಿಸಿ ಕೊಳ್ಳಲಾಯಿತು.

ನಗರಸಭೆಯ ಪರಿಸರ ವಿಭಾಗ ಅಭಿಯಂತರೆ ಸೌಮ್ಯ, ಆರೋಗ್ಯ ನಿರೀಕ್ಷಕಿ ಹರಿಣಿ, ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಅರವಿಂದ್ ಕೆಂಚೆಟ್ಟಿ, ಕಾರ್ಯದರ್ಶಿ ರೋಶನ್ ಸೇರಿದಂತೆ ಇನ್ನಿತರರು ಹಾಜರಿದ್ದರು.