ನಾಪೋಕ್ಲು, ಜು.೧ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯೆಯಾಗಿ ಡಾ.ನಿಧಾ ಫಿರ್ದೂಸ್ ಅವರನ್ನು ನೇಮಕ ಮಾಡಲಾಗಿದೆ. ಎಂ.ಬಿ.ಬಿ.ಎಸ್. ಪದವೀಧರೆಯಾಗಿರುವ ಇವರು ಸ್ಥಳೀಯ ಪಟ್ಟಣದ ನಿವಾಸಿ ಎಂ.ಹೆಚ್. ಅಬ್ದುಲ್ ನಾಸಿರ್ ಮತ್ತು ಹಸೀನಾ ದಂಪತಿಯರ ಪುತ್ರಿ.

ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯಾಧಿಕಾರಿಯೊಬ್ಬರು ವರ್ಗಾವಣೆಗೊಂಡು ತೆರಳಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿತ್ತು. ವೈದ್ಯರ ನೇಮಕದಿಂದ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.