ಮಡಿಕೇರಿ, ಜು. ೧: ಕುಶಾಲನಗರ ೨೨೦/೧೧ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೨ ಕಾವೇರಿ ಫೀಡರ್ನ ಲಿಂಕ್ ಲೈನ್ ಕಾಮಗಾರಿಯನ್ನು ನಡೆಸಬೇಕಾಗಿರುವುದರಿಂದ ತಾ. ೩ ರಂದು (ನಾಳೆ) ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.
ಗೊಂದಿ ಬಸವನಹಳ್ಳಿ, ಬಸವೇಶ್ವರ ಬಡಾವಣೆ ಡಿಗ್ರಿ ಕಾಲೇಜು, ಹಾರಂಗಿ ಮುಖ್ಯರಸ್ತೆ, ಮುಳ್ಳುಸೋಗೆ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.